ಹಾಲು ಜೇನು, ಜೀವನ ಚೈತ್ರದ ಮಾಧವಿ ಎಲ್ಲಿದ್ದಾರೆ? 3 ಮಕ್ಕಳ ಜೊತೆ ಫ್ಯಾಮಿಲಿ ಫೋಟೋ
ಕನ್ನಡ , ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಮಾಧವಿ ಈಗ ಕುಟುಂಬ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿದೆ ನೋಡಿ ಅವರ ಲೇಟೆಸ್ಟ್ ಪೋಟೋಗಳು...

90ರರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ನಟಿ ಮಾಧವಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಮಕ್ಕಳು ಎಷ್ಟು ಅನ್ನೋ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
ಹಾಲು ಜೇನು, ಭಾಗ್ಯಾದ ಲಕ್ಷ್ಮಿಬಾರಮ್ಮ, ಅನುರಾಗ ಅರಳಿತ್ತು, ಶ್ರುತಿ ಸೇರಿದಾಗ, ಜೀವನ ಚೈತ್ರಾ, ಆಕಸ್ಮಿಕ, ಒಡ ಹುಟ್ಟಿದವರು ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಾಧವಿ ಅಭಿನಯಿಸಿದ್ದಾರೆ.
ಮಾಧವಿ ಮೂಲತಃ ಹೈದರಾಬಾದ್‌ಮವರು. 1996ರಲ್ಲಿ ಅವರ ಹಿಂದೂ ಆಧ್ಯಾತ್ಮಿಕ ಗುರು ಸ್ವಾಮಿ ರಾಮ ತಮ್ಮ ಫಾಲೋವರ್ಸ್‌ನಲ್ಲಿ ಒಬ್ಬರಾದ ಹುಡುಗರನ್ನು ಮಾಧವಿಗೆ ನಿಶ್ಚಯಿಸಿದರು.
ರಾಲ್ಫ್ ಶರ್ಮಾ ಎಂಬ ಔಷಧೀಯ ಉದ್ಯಮಿ ಅವರನ್ನು 1995ರಲ್ಲಿ ಮಾಧವಿ ಭೇಟಿ ಮಾಡಿ, 1996ರಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.
ಮಾಧವಿ ಮತ್ತು ರಾಲ್ಫ್ ಅವರಿಗೆ ಮೂವರು ಮುದ್ದಾದ ಮಕ್ಕಳಿದ್ದಾರೆ. ಪ್ರಿಸ್ಸಿಲ್ಲಾ,ಎವೆಲಿನ್, ಟಿಫಾನಿ ಎಂದು ಹೆಣ್ಣು ಮಕ್ಕಳಿಗೆ ಹೆಸರಿಟ್ಟಿದ್ದಾರೆ.
ಸದ್ಯ ಕುಟುಂಬದ ಜೊತೆ ಮಾಧವಿ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. 2017ರಲ್ಲಿ ಮಾಧವಿ ಇನ್‌ಸ್ಟಾಗ್ರಾಂ ಸೋಷಿಯಲ್ ಮೀಡಿಯಾಗೆ ಪಾದಾರ್ಪಣೆ ಮಾಡಿದರು.
ಮೂರು ಹಾರಿ ನಟನೆಗಾಗಿ ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಆಗಷ್ಟೇ ಆರಂಭವಾದ ಸೌತ್ ಫಿಲ್ಮಫೇರ್ ಪ್ರಶಸ್ತಿ ಕೂಡ ಗಳಿಸಿದ್ದಾರೆ.
ಮಾಧವಿ ಹೆಣ್ಣು ಮಕ್ಕಳು ಕೂಡ ನೋಡಲು ಮುಂದಾಗಿರುವ ಕಾರಣ ಸಿನಿಮಾ ರಂಗಕ್ಕೆ ಮಕ್ಕಳ ಎಂಟ್ರಿ ಜೊತೆ ನಿಮ್ಮ ಕಮ್‌ಬ್ಯಾಕ್ ಕೂಡ ಆಗಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.