- Home
- Entertainment
- ಬೆಳಿಗ್ಗೆ ದೇಗುಲದಲ್ಲಿ ಬಸ್ಕಿ- ಸಂಜೆ ಬಾರ್‌ನಲ್ಲಿ.. ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹೇಳಿಯೇಬಿಟ್ಟ ಸೋನು ಗೌಡ
ಬೆಳಿಗ್ಗೆ ದೇಗುಲದಲ್ಲಿ ಬಸ್ಕಿ- ಸಂಜೆ ಬಾರ್‌ನಲ್ಲಿ.. ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹೇಳಿಯೇಬಿಟ್ಟ ಸೋನು ಗೌಡ
ನಟಿ ಸೋನು ಶ್ರೀನಿವಾಸ ಗೌಡ ತಮ್ಮ ಹುಟ್ಟುಹಬ್ಬದ ದಿನದಂದೇ 'ಕೇಕೆ' ಸಿನಿಮಾದ ಐಟಂ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. 'ಗುಂಟೂರು ಅಮ್ಮಾಯಿ' ಎಂಬ ತೆಲುಗು ಮಿಶ್ರಿತ ಹಾಡು ಹಾಗೂ ಪಾರ್ಟಿ ಕುರಿತ ಅವರ ಹೇಳಿಕೆಗಳು ಚರ್ಚೆ ಮತ್ತು ಟ್ರೋಲ್‌ಗಳಿಗೆ ಕಾರಣವಾಗಿವೆ.

ಹುಟ್ಟುಹಬ್ಬ ಆಚರಣೆ
ನಿನ್ನೆ ಅರ್ಥಾತ್ ಜೂನ್ 30 ರಂದು ನಟಿ ಸೋನು ಶ್ರೀನಿವಾಸ ಗೌಡ ಅವರ ಹುಟ್ಟುಹಬ್ಬ ನಡೆಯಿತು. ನಟಿ ಭರ್ಜರಿಯಾಗಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಪಾರ ಅಭಿಮಾನಿಗಳನ್ನು ಹೊಂದಿರುವ ಸೋನು ಗೌಡ ಅವರ ಫ್ಯಾನ್ಸ್ ಕೂಡ ವಿಶೇಷ ಕೇಕ್ ತಂದು ಕಟ್ ಮಾಡಿದರು.
ಸ್ಯಾಂಡಲ್‌ವುಡ್‌ಗೆ ಎಂಟ್ರಿ
ಅದೇ ಇನ್ನೊಂದೆಡೆ, ಸೋನು ಗೌಡ ಅವರು ನಿನ್ನೆ ಹುಟ್ಟುಹಬ್ಬದ ದಿನವೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಮೈಚಳಿ ಬಿಟ್ಟು ಮಾದಕ ಡಾನ್ಸ್ ಮಾಡುವ ಮೂಲಕ ಮತ್ತಷ್ಟು ಸದ್ದು ಮಾಡುತ್ತಿದ್ದಾರೆ ನಟಿ ಸೋನು ಗೌಡ (Sonu Srinivas Gowda).
ಐಟಂ ಗರ್ಲ್
ಅಷ್ಟಕ್ಕೂ ಅವರು ಎಂಟ್ರಿ ಕೊಟ್ಟಿರೋದು ನಾಯಕಿಯಾಗಿ ಅಲ್ಲ. ಬದಲಿಗೆ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸದ್ದಿಲ್ಲದೆ ಸೆಟ್ಟೇರಿ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ‘ಕೇಕೆ’ಯಲ್ಲಿ ಅವರು, ವಿಶೇಷ ಐಟಂ ಹಾಡಿಗೆ ಡಾನ್ಸ್ ಮಾಡಿದ್ದು, ಅದನ್ನು ಇಂದು ಕಲಾವಿದರ ಸಂಘದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಬೆಳಿಗ್ಗೆ ಬಸ್ಕಿ, ಸಂಜೆ...
ಇದ್ದದ್ದನ್ನು ಮುಜುಗರ ಇಲ್ಲದೇ ಹೇಳುವಲ್ಲಿ ಫೇಮಸ್ ಆಗಿರೋ ಸೋನು ಗೌಡ ಅವರು ನಿನ್ನೆ ಬೆಳಿಗ್ಗೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಳಿಗ್ಗೆ ದೇವಾಲಯಕ್ಕೆ ಹೋಗಿ ಬಸ್ಕಿ ಹೊಡೆದಿರುವುದಾಗಿ ಹೇಳಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಬಾರ್‌ನಲ್ಲಿ… ಎಂದು ಹೇಳುತ್ತಲೇ ಆಫ್‌ಕೋರ್ಸ್ ಹೇಳಲು ನಾಚಿಕೆಯಾಕೆ, ಅದೆಲ್ಲವೂ ಇರುತ್ತೆ ಎಂದು ಮುಚ್ಚುಮರೆಯಿಲ್ಲದೇ ಹೇಳಿದ್ದಾರೆ.
ಕಾಲೆಳೆದ ನೆಟ್ಟಿಗರು
ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಸೋನು ಗೌಡ, ಬೆಳಿಗ್ಗೆ ದೇವಸ್ಥಾನದಲ್ಲಿ ಬಸ್ಕಿ ಹೊಡೆದಿದ್ದೇನೆ. ಹುಟ್ಟುಹಬ್ಬ ಎಂದ ಮೇಲೆ ಸಂಜೆ ಭರ್ಜರಿ ಪಾರ್ಟಿ ಇದ್ದೇ ಇರುತ್ತದೆ ಎಂದಿದ್ದಾರೆ. ಅದೆಲ್ಲಾ ಹೇಳಲು ನಾಚಿಕೆ ಪಟ್ಟುಕೊಳ್ಳುವುದಿಲ್ಲ ಎಂದಿರುವ ಸೋನು ಗೌಡ, ಪಾರ್ಟಿಯ ಬಗ್ಗೆಯೂ ರಿವೀಲ್ ಮಾಡಿದ್ದಾರೆ. ಅವರ ಈ ಮಾತಿಗೆ ಕಮೆಂಟಿಗರು ಬೆಳಿಗ್ಗೆ ದೇವಸ್ಥಾನದಲ್ಲಿ ಬಸ್ಕಿ, ಸಂಜೆ ಬಾರ್‌ನಲ್ಲಿ ವಿಸ್ಕಿ ಎಂದು ಕಾಲೆಳೆದಿದ್ದಾರೆ.
ತೆಲುಗು ಮಿಶ್ರಿತ ಕನ್ನಡ ಹಾಡು
ಇನ್ನು ಸೋನು ಅವರ ಐಟಂ ಸಾಂಗ್ ಕುರಿತು ಹೇಳುವುದಾದರೆ, ‘ಗುಂಟೂರು ಅಮ್ಮಾಯಿ’ ಹಾಟ್ ಬೀಟ್ಸ್ ಹೊಂದಿರುವ ತೆಲುಗು ಮಿಶ್ರಿತ ಕನ್ನಡ ಹಾಡಾಗಿದೆ. ಸೋನು ಶ್ರೀನಿವಾಸ್ ಗೌಡ ಈ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ. ಆದರೆ ಈ ಹಾಡಿನ ಬಿಡುಗಡೆ ಬಳಿಕ, ಕನ್ನಡ ಚಿತ್ರದಲ್ಲಿ ಯಾಕೆ ತೆಲುಗು ಸಾಹಿತ್ಯದ ಹಾಡು ಎಂಬ ಪ್ರಶ್ನೆ ಎತ್ತಿದ ಪತ್ರಕರ್ತರು ಹಾಗೂ ಚಿತ್ರತಂಡದ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ, ಸಾಧ್ಯವಾದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದಾಗಿ ಸಂಗೀತ ನಿರ್ದೇಶಕ ಕಿರಣ್ ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

