- Home
- Entertainment
- Sandalwood
- ಅವಳಿ ಮಕ್ಕಳ ಜೊತೆ ಅಮೂಲ್ಯ ನ್ಯೂ ಇಯರ್ ಸೆಲೆಬ್ರೇಷನ್: ನಿಮ್ಮ ಮಕ್ಕಳು ಇಷ್ಟು ಬೇಗ ದೊಡ್ಡವರಾದ್ರಾ ಎಂದ ಫ್ಯಾನ್ಸ್!
ಅವಳಿ ಮಕ್ಕಳ ಜೊತೆ ಅಮೂಲ್ಯ ನ್ಯೂ ಇಯರ್ ಸೆಲೆಬ್ರೇಷನ್: ನಿಮ್ಮ ಮಕ್ಕಳು ಇಷ್ಟು ಬೇಗ ದೊಡ್ಡವರಾದ್ರಾ ಎಂದ ಫ್ಯಾನ್ಸ್!
ಸ್ಯಾಂಡಲ್ವುಡ್ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಜಗದೀಶ್ ಮುದ್ದಾದ ಅವಳಿ ಮಕ್ಕಳು ತಾಯಿಯಾಗಿದ್ದು, ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಮಕ್ಕಳ ಜೊತೆ ಹೊಸ ವರ್ಷವನ್ನು ಆಚರಿಸಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಅಮೂಲ್ಯ ಗೋಲ್ಡನ್ ಕ್ವೀನ್ ಆಗಿ ಮಿಂಚಿದ್ರು. ಮದುವೆ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ರೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಇದೀಗ ಮಾರ್ಡನ್ ಲುಕ್ನಲ್ಲಿ ನಟಿ ಅಮೂಲ್ಯ ಮಿಂಚುತ್ತಿದ್ದು, ಮಕ್ಕಳಿಗೂ ಕಲರ್ ಫುಲ್ ಡ್ರೆಸ್ ಹಾಕಿದ್ದಾರೆ. ಜೊತೆಗೆ ಅವಳಿ ಮಕ್ಕಳ ಜೊತೆ ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ.
ಗೋಲ್ಡನ್ ಕ್ವೀನ್ ಅಮೂಲ್ಯ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಮೂಲ್ಯ ಮಕ್ಕಳ ಫೋಟೋ ನೋಡಿದ ನೆಟ್ಟಿಗರು, ಸೋ ಕ್ಯೂಟ್, ಬ್ಯೂಟಿಫುಲ್, ನಿಮ್ಮ ಮಕ್ಕಳು ಇಷ್ಟು ಬೇಗ ದೊಡ್ಡವರಾದ್ರಾ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.
ಚೆಲುವಿನ ಚಿತ್ತಾರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಮೋಡಿ ಮಾಡಿದ್ದ ಐಶು ಅಂದ್ರೆ ಅಮೂಲ್ಯ ಅವರು ಮದುವೆ ಬಳಿಕ ಹೆಚ್ಚು ಸಿನಿಮಾ ಮಾಡಿಲ್ಲ. ಇದೀಗ ಮಕ್ಕಳೊಂದಿಗೆ ಎಂಜಾಯ್ ಮಾಡ್ತಾ ಇದ್ದಾರೆ.
ನಟಿ ಅಮೂಲ್ಯ ಹಾಗೂ ಜಗದೀಶ್ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಮಕ್ಕಳಿಗೆ ಹೆಸರಿಟ್ಟು ಅದ್ಧೂರಿಯಾಗಿ ನಾಮಕರಣ ಮಾಡಿದ್ರು.
2002 ರಿಂದಲೇ ಸಿನಿಮಾರಂಗದಲ್ಲಿರೋ ನಟಿ ಅಮೂಲ್ಯ 2017 ರವರೆಗೂ ಸಿನಿಮಾ ಮಾಡಿದ್ದಾರೆ. ಮಾಸ್ತಿ ಗುಡಿ ಹಾಗೂ ಮುಗುಳು ನಗೆ ಸಿನಿಮಾಗಳು ಈ ಸಮಯದಲ್ಲಿಯೇ ರಿಲೀಸ್ ಆಗಿದ್ದವು. ಎರಡೂ ಚಿತ್ರಗಳಲ್ಲಿ ಅಮೂಲ್ಯ ವಿಭಿನ್ನವಾಗಿಯೇ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು.
ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದಾರೆ. ಮುದ್ದು ಮಕ್ಕಳನ್ನು ನೋಡಿಕೊಳ್ಳುತ್ತಾ ನಟಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.