ಡಯಟ್ ಮಾಡೋದೇ ಇಲ್ಲ… ಆದ್ರೂ 40ರ ವಯಸ್ಸಲ್ಲಿ ರಾಧಿಕಾ ಪಂಡಿತ್ ಫಿಟ್ ಆಗಿರೋದು ಹೇಗೆ?
ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ವಯಸ್ಸು 40 ಆದರೂ, ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಸಹ ಅವರ ಫಿಟ್ನೆಸ್, ಬ್ಯೂಟಿ ಯಾವುದೂ ಕೂಡ ಕಡಿಮೆ ಆಗಿಯೇ ಇಲ್ಲ. ಬನ್ನಿ ರಾಧಿಕಾ ಪಂಡಿತ್ ಫಿಟ್ನೆಸ್ ಸೀಕ್ರೆಟ್ ತಿಳಿಯೋಣ.
ರಾಧಿಕಾ ಪಂಡಿತ್, (Radhika Pandit) ಸಿನಿಮಾದಿಂದ ದೂರ ಉಳಿದಿದ್ದರೂ ಸಹ ಇಂದಿಗೂ ಅವರನ್ನ ಸ್ಯಾಂಡಲ್’ವುಡ್ ಸಿಂಡ್ರೆಲ್ಲಾ ಅಂತಾನೆ ಕರಿತಾರೆ ಜನ. ಸೀರಿಯಲ್ ಮೂಲಕ ತಮ್ಮ ಜರ್ನಿ ಆರಂಭಿಸಿ, ಚಂದನವನಕ್ಕೆ ಎಂಟ್ರಿ ಕೊಟ್ಟು, ಮೆರೆದ ನಾಯಕಿ ಇವರು. ಇವರು ನಟಿಸಿದ ಸಿನಿಮಾಗಳೆಲ್ಲಾ ಹಿಟ್, ಹಾಗಾಗಿ ರಾಧಿಕಾರನ್ನು ಮತ್ತೆ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ ಜನ. ಜೊತೆಗೆ ರಾಧಿಕಾ ಫಿಟ್ನೆಸ್ ಗೆ ಫಿದಾ ಆಗಿದ್ದಾರೆ ಜನ. ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಇವರು ಫಿಟ್ನೆಸ್ ಕಾಯ್ದುಕೊಂಡಿರೋದು ಹೇಗೆ ಅನ್ನೋದೇ ಜನರಿಗೆ ಅಚ್ಚರಿ.
ರಾಧಿಕಾ ಪಂಡಿತ್ ಮತ್ತು ಯಶ್ ಲವ್ (Radhika Pandit and Yash)ಸ್ಟೋರಿ, ಮ್ಯಾರೇಜ್ ಸ್ಟೋರಿ ಎಲ್ಲನೂ ಗೊತ್ತಿದೆ ಅಲ್ವಾ? ಅದ್ರ ಬಗ್ಗೆ ಮತ್ತೆ ಹೇಳಬೇಕಾದ ಅವಶ್ಯಕತೆ ಇಲ್ಲ. ಈಗಾಗಲೇ ಈ ಜೋಡಿ ಇಬ್ಬರು ಮಕ್ಕಳು ಇದ್ದಾರೆ. ಆಯ್ರ ಮತ್ತು ಯಥರ್ವ ಎನ್ನುವ ಪುಟಾಣಿ ಮಕ್ಕಳ ಪೋಷಕರು ಇವರು. ರಾಧಿಕಾ ಪಂಡಿತ್ ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಮಕ್ಕಳ ಜೊತೆಗಿನ ಫೋಟೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ, ಅಷ್ಟೇ ಅಲ್ಲದೇ ಫ್ಯಾಮಿಲಿ ಫೋಟೊ ಹಾಗೂ ತಮ್ಮ ಫೋಟೊ ಕೂಡ ಪೋಸ್ಟ್ ಮಾಡ್ತಾರೆ.
ಇತ್ತೀಚೆಗೆ ಜ್ಯುವೆಲ್ಲರಿ ಒಂದರ ಉದ್ಘಾಟನಾ ಸಮಾರಂಭದಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದರು. ಜೊತೆಗೆ ಹಲವಾರು ಫೊಟೊಗಳನ್ನು ಸಹ ರಾಧಿಕಾ ಪೋಸ್ಟ್ ಮಾಡಿದ್ದರು. ತುಂಬಾ ವರ್ಷಗಳ ನಂತರ ರಾಧಿಕಾ ಫೋಟೊ ಶೂಟ್ ಮಾಡಿ ಶೇರ್ ಮಾಡಿದ್ದರು. ಇದನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಯಾಕಂದ್ರೆ ರಾಧಿಕಾ ಬ್ಯೂಟಿ, ಫಿಟ್ನೆಸ್ ನೋಡಿ ಮನಸೋತಿದ್ದರು.
ರಾಧಿಕಾ ಪಂಡಿತ್ ಗೆ ವಯಸ್ಸು ಈಗ 40, ಇಬ್ಬರು ಮಕ್ಕಳ ತಾಯಿ ಕೂಡ ಹೌದು. ಆದರೆ ಈ ವಯಸ್ಸಲ್ಲೂ ಇವರು ಇಷ್ಟೊಂದು ಫಿಟ್ ಆಗಿರೋದಕ್ಕೆ ಕಾರಣ ಏನು? ಫಿಟ್ನೆಸ್ ಸೀಕ್ರೆಟ್ (fitness secret) ಏನು ಅನ್ನೋದನ್ನು ರಾಧಿಕಾ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಇಷ್ಟೊಂದು ಫಿಟ್ ಆಗಿರೋದಕ್ಕೆ ರಾಧಿಕಾ ಡಯಟ್ ಮಾಡ್ತಾರೆ ಅಂತ ಅಂದುಕೊಂಡ್ರೆ, ಅದು ತಪ್ಪು. ಯಾಕಂದ್ರೆ ರಾಧಿಕಾ ಸಿನಿಮಾಗಳಲ್ಲಿ ನಟನೆ ಮಾಡುತ್ತಿರುವಾಗಿನಿಂದ ಆರಂಭಿಸಿ, ಈವರೆಗೆ ಯಾವತ್ತೂ ಡಯೆಟ್ ಮಾಡಿಯೇ ಇಲ್ಲ. ಜೊತೆಗೆ ಯಾವತ್ತೂ ಹೊಟ್ಟೆ ಹಸಿದುಕೊಂಡು ಇದ್ದವರೂ ಅಲ್ಲ.
ತುಂಬಾನೆ ಫುಡಿಯಾಗಿರುವ ರಾಧಿಕಾ ಪಂಡಿತ್, ಚೆನ್ನಾಗಿ ತಿಂದೂ ಈ ಲೆವೆಲ್‌ಗೆ ಬಾಡಿ ಮೈಂಟೇನ್ ಮಾಡಿದ್ದಾರೆ ಅಂದರೆ ಅದಕ್ಕೆ ಕಾರಣ ಅವರ ಮೆಟಬಾಲಿಸಂ. ಏನು ತಿಂದರೂ ಕರಗಿಸಿಕೊಳ್ಳೋ ಮೆಟಬಾಲಿಸಂ (metabolism)ಅವರಿಗೆ ಇದೆ. ಹಾಗಾಗಿಯೇ ಈ ವಯಸ್ಸಲ್ಲೂ ಫಿಟ್ ಆಗಿದ್ದಾರೆ ರಾಧಿಕಾ. ಇದರ ಜೊತೆಗೆ ಮತ್ತೊಂದಿಷ್ಟು ವ್ಯಾಯಾಮಗಳನ್ನೂ ಮಾಡ್ತಾರೆ.
ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ತುಂಬಾನೆ ಸಣ್ಣಗಿದ್ದ ರಾಧಿಕಾರನ್ನು ಹಲವಾರು ಸಿನಿಮಾಗಳಿಂದ ರಿಜೆಕ್ಟ್ ಮಾಡಿದ್ರಂತೆ. ಇದನ್ನು ರಾಧಿಕಾ ಅವರೇ ಹೇಳ್ಕೊಂಡಿದ್ದರು. ರಾಧಿಕಾ ಇಷ್ಟು ಫಿಟ್ ಆಗಿರೋದಕ್ಕೆ ಮತ್ತೊಂದು ಕಾರಣ ಯೋಗ ಮತ್ತು ನಿತ್ಯ ಅವರು ಮಾಡುವ ಒಂದಿಷ್ಟು ಎಕ್ಸರ್‌ಸೈಜ್‌ಗಳು.
ರಾಧಿಕಾ ಪಂಡಿತ್ ಹಿಂದೆ ಝುಂಬಾ ಡ್ಯಾನ್ಸ್ (Zumba dance) ಮಾಡ್ತಿದ್ರು. ಈಗಲೂ ಟೈಮ್ ಸಿಕ್ಕಾಗ ಮಾಡುತ್ತಾರೆ. ಯೋಗ ಮತ್ತು ಡ್ಯಾನ್ಸ್ ಜೊತೆಗೆ ಪುಟ್ಟ ಮಕ್ಕಳ ಹಿಂದೆ ದಿನವಿಡೀ ಓಡಾಡ್ತನೇ ಇರೋದು ಅವರ ಫಿಟ್‌ನೆಸ್ ಹೆಚ್ಚಿಸಿದೆ. ಸೂರ್ಯನಮಸ್ಕಾರ ಹಾಗೂ ಪ್ರತಿನಿತ್ಯ ವಾಕ್ ಮಾಡೋದನ್ನು ಮಿಸ್ ಮಾಡೋದಿಲ್ವಂತೆ ರಾಧಿಕಾ.
ರಾಧಿಕಾ ತಮ್ಮ ಉಪಹಾರದಲ್ಲಿ ಹೆಚ್ಚಾಗಿ ಇಡ್ಲಿ ಮತ್ತು ಪೋಹಾ ಸೇವಿಸುತ್ತಾರೆ, ಊಟದಲ್ಲಿ ಅನ್ನ, ತರಕಾರಿ, ದಾಲ್ ತಿನ್ನುತ್ತಾರೆ, ಇನ್ನು ರಾತ್ರಿ ಊಟದಲ್ಲಿ ಹೆಚ್ಚಾಗಿ ತರಕಾರಿಯಿಂದ ಮಾಡಿದಂತಹ ತಿಂಡಿ ತಿನ್ನುತ್ತಾರಂತೆ. ಅಷ್ಟೇ ಅಲ್ಲ ಇವರ ಸ್ನಾಕ್ಸ್ ಕೂಡ ಹೆಲ್ತಿಯಾಗಿರುತ್ತೆ, ಇವರು ಹೆಚ್ಚಾಗಿ ಡ್ರೈ ಫ್ರುಟ್ಸ್ ಗಳಾದ ಗೋಡಂಬಿ, ಬಾದಾಮ್, ಖರ್ಜೂರ ಜೊತೆಗೆ ಒಂದಷ್ಟು ಫ್ರೆಶ್ ಹಣ್ಣುಗಳನ್ನು ಸಹ ಸೇವಿಸುತ್ತಾರೆ. ಇದೇ ಅವರ ಫಿಟ್ನೆಸ್ ಸೀಕ್ರೆಟ್.