Success Party: ಗಡಿನಾಡು ಬಳ್ಳಾರಿಗೆ ಭೇಟಿ ನೀಡಿದ 'ಏಕ್ ಲವ್ ಯಾ' ಚಿತ್ರತಂಡ
ನಟಿ ರಕ್ಷಿತಾ ನಿರ್ಮಾಣದಲ್ಲಿ ಹಾಗೂ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಈ ಸಂಭ್ರಮದ ಸಕ್ಸಸ್ ಖುಷಿಯಲ್ಲಿರುವ 'ಏಕ್ ಲವ್ ಯಾ' (Ek Love Ya) ಚಿತ್ರತಂಡ ರಾಜ್ಯ ಪ್ರವಾಸವನ್ನು ಮಾಡುತ್ತಿದೆ. ಈ ಪ್ರವಾಸದಲ್ಲಿ ಇಂದು ಗಡಿನಾಡು ಬಳ್ಳಾರಿಗೆ (Ballari) 'ಏಕ್ ಲವ್ ಯಾ' ಚಿತ್ರತಂಡ ಭೇಟಿ ನೀಡಿದೆ.
ನಿರ್ದೇಶಕ ಜೋಗಿ ಪ್ರೇಮ್ (Jogi Prem), ನಿರ್ಮಾಪಕಿ ರಕ್ಷಿತಾ (Rakshita), ನಟ ರಾಣಾ (Raanna) ಹಾಗೂ ನಟಿ ರೀಷ್ಮಾ ನಾಣಯ್ಯ (Rishma Nanayya) ಬಳ್ಳಾರಿಯ ಸಿನಿ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು (Fans) ಪಟಾಟಿ ಸಿಡಿಸಿ ಚಿತ್ರತಂಡವನ್ನು ಸ್ವಾಗತಿಸಿದರು.
ಈ ಸಮಯದಲ್ಲಿ ಜೋಗಿ ಪ್ರೇಮ್ ಜೊತೆ ಸೆಲ್ಫಿ (Selfie) ತೆಗೆದುಕೊಳ್ಳಲು ಪೇಕ್ಷಕರಿಂದ ನೂಕು ನುಗ್ಗಲು ಉಂಟಾಯಿತು. ಅನಂತರ 'ಏಕ್ ಲವ್ ಯಾ' ಚಿತ್ರದ ಹಾಡನ್ನು ಹಾಡಿ ಪೇಕ್ಷಕರನ್ನು ಜೋಗಿ ಪ್ರೇಮ್ ರಂಜಿಸಿದರು. ಮಾತ್ರವಲ್ಲದೇ ಅಭಿಮಾನಿಗಳ ಜೊತೆ ಚಿತ್ರದ ಯಶಸ್ಸನ್ನು ಚಿತ್ರತಂಡ ಹಂಚಿಕೊಂಡಿತು.
ಉತ್ತರ ಕರ್ನಾಟಕದಲ್ಲಿ ಚಿತ್ರ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. 2ನೇ ವಾರ ಚಿತ್ರ ನಡೆಯುತ್ತಿದೆ. ಪೇಕ್ಷಕರು ಚಿತ್ರಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ. ಬಳ್ಳಾರಿ ಆಂಧ್ರದ ಗಡಿಯಾಗಿದರೂ ಇಲ್ಲಿ ಕನ್ನಡ ಸಿನಿಮಾವನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ ಎಂದು ಜೋಗಿ ಪ್ರೇಮ್ ಹಾಗೂ ರಕ್ಷಿತಾ ಹೇಳಿದರು.
ಬಳ್ಳಾರಿಯ ಹೊಸಪೇಟೆಯಲ್ಲಿ ಪ್ರೇಮ್ ಸಿನಿಮಾ ಅಂದರೆ ಮಧ್ಯ ರಾತ್ರಿ ಚಿತ್ರ ನೋಡುವ ಅಭಿಮಾನಿಗಳು ಇದ್ದಾರೆ. ಪ್ರೇಮ್ ಹೊಸ ಕಟೆಂಟ್ ಕೊಟ್ಟಿದ್ದಾರೆ ಅಂತಾ ಚಿತ್ರ ನೋಡುತ್ತಿದ್ದಾರೆ. ಚಿತ್ರದಲ್ಲಿನ ಸಂಗೀತ ಪೇಕ್ಷಕರಿಗೆ ಇಷ್ಟವಾಗಿದೆ. ಚಿತ್ರದ ಕಲೆಕ್ಷನ್ ಕೂಡಾ ಚೆನ್ನಾಗಿದೆ. ನಮ್ಮ ಮ್ಯಾನೇಜರ್ ಇನ್ನೂ ಲೆಕ್ಕ ಕೊಟ್ಟಿಲ್ಲ ಎಂದು ರಕ್ಷಿತಾ ತಿಳಿಸಿದ್ದಾರೆ.
'ಹೊಸ ಹುಡುಗರ ಜೊತೆಗೆ ಸೇರಿಕೊಂಡು ಹುಡುಗಾಟ, ಹುಡುಕಾಟದಲ್ಲಿ 'ಏಕ್ ಲವ್ ಯಾ' ಚಿತ್ರ ಮಾಡಿದ್ದೇನೆ. ಪ್ರೇಮ್ ಲೇಬಲ್ ತೆಗೆದು, ಇದು ಹೊಸ ನಿರ್ದೇಶಕನ ಚಿತ್ರ ಅಂದುಕೊಂಡು ಏಕ್ ಲವ್ ಯಾ ನೋಡಿ' ಎಂದು ನಿರ್ದೇಶಕ ಜೋಗಿ ಪ್ರೇಮ್ ಹೇಳಿದ್ದಾರೆ.