- Home
- Entertainment
- Sandalwood
- ಅಪ್ಪನ ಬರ್ತ್’ಡೇಗೆ ಸ್ಪೆಷಲ್ ವಿಶ್, ನಮ್ಮಿಬ್ಬರ ಜೋಡಿ ನೋಡಲು ರೆಡಿಯಾಗಿ ಎಂದ ರಿತನ್ಯಾ ವಿಜಯ್
ಅಪ್ಪನ ಬರ್ತ್’ಡೇಗೆ ಸ್ಪೆಷಲ್ ವಿಶ್, ನಮ್ಮಿಬ್ಬರ ಜೋಡಿ ನೋಡಲು ರೆಡಿಯಾಗಿ ಎಂದ ರಿತನ್ಯಾ ವಿಜಯ್
ದುನಿಯಾ ವಿಜಯ್ ಇತ್ತೀಚೆಗೆ ತಮ್ಮ 52ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ಪುತ್ರಿ ರಿತನ್ಯ ವಿಜಯ್ ಅಪ್ಪನ ಜೊತೆಗಿನ ಮುದ್ದಾದ ಫೋಟೊಗಳನ್ನು ಶೇರ್ ಮಾಡಿ, ಅಪ್ಪ-ಮಗಳ ಜೋಡಿ ನೋಡಲು ರೆಡಿಯಾಗಿ ಎಂದು ಕ್ಯಾಪ್ಶನ್ ಹಾಕಿದ್ದಾರೆ.

ದುನಿಯಾ ವಿಜಯ್
ಲ್ಯಾಂಡ್ ಲಾರ್ಡ್ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಕನ್ನಡ ನಟ ದುನಿಯಾ ವಿಜಯ್, ಇತ್ತೀಚೆಗೆ ತಮ್ಮ 52ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್ ಪುತ್ರಿ ರಿತನ್ಯಾ ಅಪ್ಪನ ಜೊತೆಗಿನ ಮುದ್ದಾದ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಿತನ್ಯಾ ವಿಜಯ್
ವಿಜಯ್ ಅವರ ಹಿರಿಯ ಪುತ್ರಿ ರಿತನ್ಯಾ ಚಂದನವನಕ್ಕೆ ತಮ್ಮ ತಂದೆಯ ಜೊತೆಯೆ ಗ್ರ್ಯಾಂಡ್ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಇದೇ ಜನವರಿ 23ರಂದು ಬಿಡುಗಡೆಯಾಗಲಿರುವ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ರಿತನ್ಯಾ ವಿಜಯ್ ನಟಿಸುತ್ತಿದ್ದಾರೆ. ಇದಿಗ ಅಪ್ಪನ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ.
ಅಪ್ಪನಿಗೆ ಮುದ್ದಾದ ವಿಶ್
ಲ್ಯಾಂಡ್ ಲಾರ್ಡ್ ಸಿನಿಮಾದ ಫೋಟೊಗಳನ್ನು ಹಂಚಿಕೊಂಡಿರುವ ರಿತನ್ಯಾ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ಜನವರಿ 23 ರಂದು ಬಿಡುಗಡೆಯಾಗಲಿರುವ ಲ್ಯಾಂಡ್‌ಲಾರ್ಡ್‌ನಲ್ಲಿ ರಾಚಯ್ಯ ಮತ್ತು ಭಾಗ್ಯ ಅವರ ಜೋಡಿಯನ್ನು ವೀಕ್ಷಿಸಲು ಸಿದ್ಧರಾಗಿ ಎಂದು ಅಭಿಮಾನಿಗಳಿಗೂ ಕರೆ ನೀಡಿದ್ದಾರೆ.
ವಿಜಯ್-ರಚಿತಾ ರಾಮ್ ಮಗಳ ಪಾತ್ರ
ರಿತನ್ಯಾ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ವಿಜಯ್ ಮತ್ತು ರಚಿತಾ ರಾಮ್ ಅವರ ಮಗಳು ಭಾಗ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೆ ಸಿನಿಮಾದ ಟೀಸರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ರಿತನ್ಯಾ ನಟನೆಯ ಬಗ್ಗೆ ಸಿನಿ ರಸಿಕರಲ್ಲಿ ಕುತೂಹಲ ಹೆಚ್ಚಾಗಿದೆ.
ಶಿಶಿರ್ ಭೈಕಾಡಿ ಜೊತೆ ರೊಮ್ಯಾನ್ಸ್
ಈಗಾಗಲೇ ಲ್ಯಾಂಡ್ ಲಾರ್ಡ್ ಸಿನಿಮಾದ ರೊಮಾಂಟಿಕ್ ಮೆಲೊಡಿ ಹಾಡು ಬಿಡುಗಡೆಯಾಗಿದ್ದು, ಇದರಲ್ಲಿ ರಿತನ್ಯಾ ಪೊಲೀಸ್ ಪೇದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಶಿಶಿರ್ ಭೈಕಾಡಿ ಜೊತೆ ಡುಯೆಟ್ ಹಾಡುತ್ತಿದ್ದಾರೆ. ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದು, ಅದ್ಭುತವಾಗಿ ಮೂಡಿ ಬಂದಿದೆ.
ಜವರ ಚಿತ್ರಕ್ಕೂ ಇವರೇ ನಾಯಕಿ
ಲ್ಯಾಂಡ್ ಲಾರ್ಡ್ ಸಿನಿಮಾ ಬಿಡುಗಡೆಯಾಗುವ ಮುನ್ನವೇ ರಿತನ್ಯಾ ಮತ್ತೊಂದು ಸಿನಿಮಾಗೂ ನಾಯಕಿಯಾಗಿದ್ದಾರೆ. ಹೌದು, ಇವರು ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿಗೆ ಜೋಡಿಯಾಗಿ ‘ಜವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿತನ್ಯಾ ಮೆಡಿಕಲ್ ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಂಗಾಯಣ ರಘು ಹಾಗೂ ಶೃತಿ ಕೂಡ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

