ಜಾಮೀನು ಸಿಕ್ಕ ಬಳಿಕ ನಾಪತ್ತೆಯಾಗಿದ್ದ ನಟಿ ಸಂಜನಾ ಗಲ್ರಾನಿ ಪ್ರತ್ಯಕ್ಷ!

First Published Dec 16, 2020, 7:02 PM IST

ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾಣಿ ಬರೋಬ್ಬರಿ 3 ತಿಂಗಳು  ಸೆರೆಮನೆವಾಸ ಅನುಭವಿಸಿದ್ದರು. ಮೊದಲ ದಿನದಿಂದಲೇ ಜಾಮೀನಿಗಾಗಿ ಹೋರಾಡುತ್ತಿದ್ದ ಸಂಜನಾ ಕೊನೆಗೂ ಬೇಲ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 85 ದಿನಗಳ ಬಳಿಕ ಜೈಲಿನಿಂದ ಹೊರಬಂದ ಸಂಜನಾ ಯಾರ ಕಣ್ಣಿಗೂ ಕಾಣಿಸದೇ ಗೌಪ್ಯವಾಗಿದ್ದರು. ಇದೀಗ ಸಂಜನಾ ಗಲ್ರಾಣಿ ಪ್ರತ್ಯಕ್ಷರಾಗಿದ್ದಾರೆ.

ಇಡೀ ದೇಶವನ್ನೇ ತಲ್ಲಣಗೊಳಿಸಿದ ಡ್ರಗ್ಸ್ ಪ್ರಕರದಡಿ ನಟಿ ಸಂಜನಾ ಗಲ್ರಾಣಿ ಜೈಲು ಪಾಲಾಗಿದ್ದರು. ಡ್ರಗ್ಸ್ ಪ್ರಕರಣ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಬಂಧಿತ ನಟಿಗೆ 85 ದಿನ ಜಾಮೀನು ಸಿಗಲೇ ಇಲ್ಲ.

ಬರೋಬ್ಬರಿ 85 ದಿನಗಳ ಕಾಲ ಸಂಜನಾ ಗಲ್ರಾಣಿ ಜೈಲು ವಾಸ ಅನುಭವಿಸಿದ್ದರು. ಕೊನೆಗೂ ಸಂಜನಾ ಗಲ್ರಾಣಿ ಆರೋಗ್ಯದ ಕಾರಣ ಒಡ್ಡಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು, ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಸಂಜನಾ ಗಲ್ರಾಣಿ ಹೈಕೋರ್ಟ್‌ನಿಂದ ಬೇಲ್ ಪಡೆದಿದ್ದರು.

ಹೈಕೋರ್ಟ್ ನಿಂದ ಬೇಲ್ ಪಡೆದು 5 ದಿನಗಳ ನಂತರ ಸಂಜನಾ ಪ್ರತ್ಯಕ್ಷರಾಗಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಎನ್ ಡಿ ಪಿ ಎಸ್ ಕೋರ್ಟ್ ಗೆ ಸಂಜನಾ ಹಾಜರಾಗಿದ್ದಾರೆ.

ಸಂಜನಾ ಎನ್ ಡಿ ಪಿ ಎಸ್ ಕೋರ್ಟ್‌ಗೆ ಹಾಜರಾಗುವ ವೇಳೆ ಮಾಧ್ಯಮದ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಜಾಮೀನು ಷರತ್ತು ಪ್ರಕ್ರಿಯೆ ಮುಗಿಸಲು ಎನ್ಡಿಪಿಎಸ್ ಕೋರ್ಟ್ ಗೆ ಸಂಜನಾ ಹಾಜರಾಗಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ಬಿಲ್ಡಿಂಗ್‌ನಲ್ಲಿರುವ ಎನ್‌ಡಿಪಿಎಸ್ ಸ್ಪೆಷಲ್ ಕೋರ್ಟ್‌ಗೆ ಹಾಜರಾಗಿ ಜಾಮೀನು ಷರತು ಪ್ರಕ್ರಿಯೆ ಹಾಗೂ ಕೆಲ ದಾಖಲೆ ಪತ್ರಗಳ ಪ್ರಕ್ರಿಯೆ ಮುಗಿಸಿದ್ದಾರೆ.

ಕೋರ್ಟ್ ಹಾಲ್‌ ಪ್ರವೇಶಿಸುವ ಮುನ್ನ ಸಂಜನಾ ಗಲ್ರಾಣಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದೆ. ನಗೆಟೀವ್ ರಿಪೋರ್ಟ್ ಬಂದ ಬಳಿಕವಷ್ಟೆ  ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.

ಜಾಮೀನು ಪಡೆದ ಬಳಿಕ ಸಂಜನಾ ಗಲ್ರಾಣಿ ಯಾರ ಕೈಗೂ ಸಿಗದಂತೆ ರೆಸಾರ್ಟ್‌ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ. ಸಂಜನಾ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?