ನಾಯಕಿಯಾಗಿ ಬದಲಾದ ಸೈಕೋ ಜಯಂತ್: ಫೆ.7 ರಂದು 'ಮಿಸ್ಟರ್ ರಾಣಿ' ಬಿಡುಗಡೆ
‘ಮಿಸ್ಟರ್ ರಾಣಿ’ ಹಾಸ್ಯ ಪ್ರಧಾನವಾದ ಚಲನಚಿತ್ರವು ಫೆ.7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟ ದೀಪಕ್ ಸುಬ್ರಹ್ಮಣ್ಯ ತಿಳಿಸಿದರು.

'ಲಕ್ಷ್ಮೀ ನಿವಾಸ' ಧಾರಾವಾಹಿ ಸೈಕೋ ಜಯಂತ್ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಅವರ ನಟನೆಗೆ ಬಹಳ ಅಭಿಮಾನಿಗಳಿದ್ದಾರೆ. ಇದೀಗ ಅವರು ರಾಣಿ ಪಾತ್ರದಲ್ಲಿ ನಟಿಸಿರುವ ಮಿಸ್ಟರ್ ರಾಣಿ ಚಿತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.
ವಿಶೇಷವೆಂದರೆ ದೀಪಕ್ ಸುಬ್ರಹ್ಮಣ್ಯ ಅವರು ಇದರಲ್ಲಿ ರಾಣಿ ಪಾತ್ರದಲ್ಲಿ ನಟಿಸಿದ್ದಾರೆ. ಹೀರೋ ಆಗಬೇಕು ಎಂದು ಚಿತ್ರರಂಗಕ್ಕೆ ಬರುವ ವ್ಯಕ್ತಿಯೊಬ್ಬ ಹೀರೋಯಿನ್ ಆಗಿ ನಟಿಸುವ ಸನ್ನಿವೇಶ ಸೃಷ್ಟಿಯಾಗುವ ಕುತೂಹಲಕಾರಿ ಮತ್ತು ತಮಾಷೆಯ ಕಥಾ ಹಂದರವನ್ನು ಹೊಂದಿರುವ ಚಿತ್ರವಿದು.
ಈಗಾಗಲೇ ಚಿತ್ರದ ಟ್ರೇಲರ್, ಪಾತ್ರದ ಲುಕ್ ಎಲ್ಲವೂ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. 'ಸೆಲ್ಸಿ ಮಮ್ಮಿ ಗೂಗಲ್ ಡ್ಯಾಡಿ' ಸಿನಿಮಾ ಖ್ಯಾತಿಯ ಮಧುಚಂದ್ರ ನಿರ್ದೇಶನದ ಸಿನಿಮಾ ಇದು.
ಪಾರ್ವತಿ ನಾಯರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಹುಬಲಿ ಸಿನಿಮಾದ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿದ್ದ ರವೀಂದ್ರನಾಥ ಈ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ.
ಚಿತ್ರಕ್ಕೆ ರೂ.99 ಟಿಕೆಟ್ ನಿಗದಿ ಮಾಡಿರುವುದಾಗಿ ಚಿತ್ರತಂಡ ತಿಳಿಸಿದ್ದು, ಪ್ರೇಕ್ಷಕರು ಈ ಅವಕಾಶವನ್ನು ಸದುಗಪಡಿಸಿಕೊಳ್ಳಬಹುದು. ಈ ಸಿನಿಮಾ ಫೆ.7ರಂದು ಅದ್ದೂರಿಯಾಗಿ ಬಿಡುಗಡೆಯಾಗುತಿದೆ.
‘ಮಿಸ್ಟರ್ ರಾಣಿ’ ಹಾಸ್ಯ ಪ್ರಧಾನವಾದ ಚಲನಚಿತ್ರವು ಫೆ.7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟ ದೀಪಕ್ ಸುಬ್ರಹ್ಮಣ್ಯ ತಿಳಿಸಿದರು.
ಈ ಸಿನಿಮಾದಲ್ಲಿ ಮಹಿಳಾ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವೆ. ಕುಟುಂಬ ಸಮೇತ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಿಸುವಂತೆ ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.