Photos: ಗರ್ಭಿಣಿ ಪತ್ನಿ ಜೊತೆ ಡಾರ್ಲಿಂಗ್ ಕೃಷ್ಣ ರೊಮ್ಯಾಂಟಿಕ್ ಫೋಟೋಶೂಟ್
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಇನ್‌ಸ್ಟಾಗ್ರಾಂನಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚೆಂದದ ಫೋಟೋಶೂಟ್ ಮಾಡಿಸಿಕೊಂಡಿದ್ದು, ನೆಟ್ಟಿಗರು ನೀವು ಆದರ್ಶ ದಂಪತಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಬೇಬಿಮೂನ್‌ಗೆ ವಿದೇಶಕ್ಕೆ ಕೃಷ್ಣ ಮತ್ತು ಮಿಲನಾ ತೆರಳಿದ್ದರು. ವಿದೇಶದಿಂದ ಬಂದ ಬಳಿಕ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದೀಗ ನಾಲ್ಕು ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಿಲನಾ ನಾಗರಾಜ್ ಲೈಟ್ ಯೆಲ್ಲೋ ಶಾರ್ಟ್ ಗೌನ್ ಧರಿಸಿದ್ದು, ಕೃಷ್ಣ ಸಹ ಅದೇ ಬಣ್ಣದ ಶರ್ಟ್ ಧರಿಸಿದ್ದಾರೆ. ಫೋಟೋದಲ್ಲಿ ಕೃಷ್ಣ ತಮ್ಮ ಪ್ರೀತಿಯನ್ನು ಮುದ್ದಿಸೋತ್ತಿರೋದನ್ನು ಕಾಣಬಹುದಾಗಿದೆ.
ಫೋಟೋಗಳು ಅಪ್ಲೋಡ್ ಆದ ಒಂದೇ ಗಂಟೆಯಲ್ಲಿ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿವೆ. ನೀವು ನಮ್ಮ ಫೇವರೇಟ್ ಕಪಲ್, ಫೋಟೋಗಳು ತುಂಬಾ ಕ್ಯೂಟ್ ಆಗಿ ಬಂದಿವೆ. ಲವ್ ಯು ಅಂತ ಬರೆದು ಹಾರ್ಟ್ ಎಮೋಜಿಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಾಕಿದ್ದಾರೆ.
ನಿಮ್ಮಿಬ್ಬರ ಕಣ್ಣುಗಳಲ್ಲಿ ಪ್ರೀತಿ ಕಾಣುತ್ತಿದೆ. ನೂರು ಕಾಲ ಚೆನ್ನಾಗಿರಿ, ನಿಮ್ಮ ಜೋಡಿ ಮೇಲೆ ಯಾರ ಕೆಟ್ಟದೃಷ್ಟಿ ಬೀಳದಿರಲಿ. ನಾವು ಸಹ ನಿಮ್ಮ ಮಗುವನ್ನು ನೋಡಲು ಕಾಯುತ್ತಿದ್ದೇವೆ. ಇದ್ದರೆ ನಿಮ್ಮಂತೆಯೇ ಇರಬೇಕು ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಮಿಲನಾ ನಾಗರಾಜ್ ಬೇಬಿಮೂನ್ ಫೋಟೋ ಹಂಚಿಕೊಂಂಡಿದ್ದ ವೇಳೆ ಅಭಿಮಾನಿಗಳು ಈ ಸಮಯದಲ್ಲಿ ಹೆಚ್ಚು ಪ್ರಯಾಣ ಮಾಡಬೇಡಿ. ಮಗುವಿನ ಆರೋಗ್ಯದ ಹುಷಾರು ಎಂದು ಸಲಹೆ ನೀಡಿದ್ದರು.
ಮಾರ್ಚ್ ತಿಂಗಳಲ್ಲಿ ಮಿಲನ ಮತ್ತು ಕೃಷ್ಣ ತಾವು ಪ್ರೆಗ್ನೆಂಟ್ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದರು. ಈ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ಪೋಷಕರಾಗಲಿದ್ದಾರೆ.