MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • Darling Krishna & Milana Nagaraj: ಮುದ್ದು ಮಗಳು ‘ಪರಿ’ ಜೊತೆ ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣಾ -ಮಿಲನಾ

Darling Krishna & Milana Nagaraj: ಮುದ್ದು ಮಗಳು ‘ಪರಿ’ ಜೊತೆ ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣಾ -ಮಿಲನಾ

ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಅವರು ತಮ್ಮ ಮುದ್ದಿನ ಮಗಳ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿದ್ದಾರೆ. ಸದ್ಯ ಫೋಟೊ ವೈರಲ್ ಆಗುತ್ತಿದೆ.

1 Min read
Pavna Das
Published : May 30 2025, 10:23 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಚಂದನವನದ ಮುದ್ದಾದ ಜೋಡಿಗಳಾದ ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ ತಮ್ಮ ಮುದು ಮಗಳು ಪರಿ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

27
Image Credit : Instagram

ಕೃಷ್ಣ, ಮಿಲನಾ ಹಾಗೂ ಪರಿ ಮೂರು ಜನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಕುಟುಂಬದ ಜೊತೆಗೂ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ Celebrating Pari ಎಂದು ಬರೆದುಕೊಂಡಿದ್ದಾರೆ.

Related Articles

Related image1
Now Playing
Milana Nagaraj : ಹೊಸ ಮನೆ ಖರೀದಿಸಿದ 'ಡಾರ್ಲಿಂಗ್' ದಂಪತಿ: ಹೇಗಿದೆ ಗೊತ್ತಾ 'ಕ್ರಿಸ್ಮಿ ನೆಸ್ಟ್' ?
Related image2
ಬ್ಲಾಕ್‌ನಲ್ಲಿ ಟಿಕೆಟ್‌ ತಗೊಂಡು 'ಲವ್ ಮಾಕ್ಟೇಲ್ 2' ನೋಡಿದೆ: Darling Krishna
37
Image Credit : Instagram

ಮಿಲನಾ ನಾಗರಾಜ್ (Milana Nagraj) ಕಳೆದ ವರ್ಷ ಸೆಪ್ಟೆಂಬರ್‌ 5ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಮಗುವಿಗೆ ‘ಪರಿ’ ಎಂದು ಹೆಸರನ್ನಿಟ್ಟು ಕರೆಯುತ್ತಿದ್ದರು. ಪರಿ ಬಂದಮೇಲೆ ಈ ಜೋಡಿ ಹೆಚ್ಚಾಗೆ ಮಗಳ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

47
Image Credit : Instagram

ಮಿಲನಾ ಸಿನಿಮಾ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡು, ಮಗಳ ಜೊತೆ ಬ್ಯುಸಿಯಾಗಿದ್ದಾರೆ. ಆದರೆ ಸಿನಿಮಾ ಕೆಲಸಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಸಹ ಮಗಳ ಜೊತೆ ಆಟ ಪಾಟದ ಜೊತೆಗೆ, ಕ್ರಿಕೆಟ್, ಸಿನಿಮಾ ಎಂದು ಬ್ಯುಸಿಯಾಗಿದ್ದಾರೆ.

57
Image Credit : Instagram

ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಮಿಲನಾ ನಾಗರಾಜ್‌ ಹೆಚ್ಚಾಗಿ ಮಗಳ ಮುದ್ದಾದ ಫೊಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತನ್ನ ಪ್ರಪಂಚ ಎನ್ನುತ್ತಾ ಅಮ್ಮ-ಮಗಳು, ಅಪ್ಪ-ಮಗಳ ಫೋಟೊ ಶೇರ್ ಮಾಡುತ್ತಿರುತ್ತಾರೆ.

67
Image Credit : Instagram

ಪರಿ ಎಷ್ಟು ಮುದ್ದಾಗಿ ಫೋಟೊಗೆ ಪೋಸ್ ಕೊಟ್ಟಿದ್ದಾಳೆಿ. ಇದಕ್ಕೂ ಮುನ್ನ ಮಿಲನಾ ಪರಿ ಜೊತೆಗಿನ ಮುದ್ದಾದ ವಿಡಿಯೋ ಶೇರ್ ಮಾಡಿದ್ದರು. ಇದರಲ್ಲಿ ಮಗಳ ನಗು, ಆಟ, ತುಂಟಾಟಗಳನ್ನು ಕಾಣಬಹುದು.

77
Image Credit : Instagram

ಇನ್ನು ಮಿಲನಾ ಮತ್ತು ಕೃಷ್ಣ ಹಲವು ವರ್ಷಗಳಿಂದ ಪ್ರೀತಿಸಿದ್ದು 2021ರ ಫೆಬ್ರವರಿ 14ರಂದು ಮದುವೆಯಾಗಿದ್ದರು. ಇಬ್ಬರು ಜೋಡಿಯಾಗಿ ನಟಿಸಿದ ಲವ್ ಮಾಕ್ಟೇಲ್ (Love Mocktail)ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು, ಆ ಸಿನಿಮಾದ ಯಶಸ್ಸಿನ ಬಳಿಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮಿಲನಾ ನಾಗರಾಜ್
ಡಾರ್ಲಿಂಗ್ ಕೃಷ್ಣ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved