ಆಟೋದಲ್ಲಿ ವಿಚಿತ್ರವಾಗಿ ಕುಳಿತ ಚೈತ್ರಾ ಆಚಾರ್; ಅಣ್ಣನ ಸೆನ್ಸೇಷನ್ ನೋಡ್ಬೇಕು...
ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾಗಿ ಕುಳಿತಿರುವ ಫೋಟೋ ಹಂಚಿಕೊಂಡ ಚೈತ್ರಾ. ಕಾಮೆಂಟ್ ಪೂರ್ತಿ ಆಟೋ ಅಣ್ಣನ ಚಿಂತೆ.

ಮಹಿರಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚೈತ್ರಾ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.
ಹೀಗೆ ಅಟೋದಲ್ಲಿ ಪ್ರಯಾಣ ಮಾಡುವಾಗ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ಎಲ್ಲರೂ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಾರೆ ಅದರಲ್ಲಿ ವಿಶೇಷತೆ ಏನಿದೆ ಎಂದು ಕೇಳುವವರು ಫೋಟೋ ನೋಡಬೇಕು.
ಒಂದು ಸಾಲು ಆಟೋದ ಸೀಟಿನ ಮೇಲೆ, ಒಂದು ಕೈ ಆಟೋ ರೂಫ್ ಕಂಬಿ ಹಿಡಿಯುತ್ತಿರುವಂತೆ ಮೂರ್ನಾಲ್ಕು ಪೋಸ್ಟ್‌ಗಳನ್ನು ನೀಡಿದ್ದಾರೆ ಚೈತ್ರಾ.
'ಸಂಪೂರ್ಣ ಹಸಿರು ಫ್ಲಾಗ್' ಎಂದು ಚೈತ್ರಾ ಬರೆದುಕೊಂಡಿದ್ದಾರೆ. ಆದರೆ ಫೋಟೋ ನೋಡುತ್ತಿರುವ ಜನರಿಗೆ ಇರುವ ಚಿಂತೆ ಒಂದೇ ಆಟೋ ಅಣ್ಣನ ಪರಿಸ್ಥಿತಿ ಏನು ಎಂದು.
ಆಟೋ ಅಣ್ಣ ಹೇಗ್ ನೋಡುತ್ತಿದ್ದರು ಎಂದು ಫೋಟೋ ತೆಗೆದುಕೊಳ್ಳಬೇಕು, ಆಟೋ ಅಣ್ಣನ ಜೊತೆ ಒಂದು ಫೋಟೋ ಬೇಡ್ವಾ? ಇದು ಬೆಂಗಳೂರಾ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಚೈತ್ರಾ ನಟನೆಯ ಸ್ಟ್ರಾಬೆರಿ ಸಿನಿಮಾ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದರ ಜೊತೆಯಲ್ಲಿ ಎರಡು ತಮಿಳು ಸಿನಿಮಾ ಸಿದ್ಧಾರ್ಥ್ 40 ಹಾಗೂ ನನ್ನ ಪ್ರಭು ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ.