ಶಂಕರ್ ನಾಗ್ ಅಪರೂಪದ ಫೋಟೋಗಳು: 40 ವರ್ಷಗಳ ಬಳಿಕ ಬ್ರ್ಯಾಂಡ್ ನನಸಾಗುತ್ತಿದೆ ಬೆಂಗಳೂರು ಕನಸು!
ಕರ್ನಾಟಕದ ಖ್ಯಾತ ನಿರ್ದೇಶಕ ಹಾಗೂ ನಟ ಶಂಕರ್ ನಾಗ್ ಅವರು ಹಲವು ನಾಲ್ಕು ದಶಕಗಳ ಹಿಂದೆಯೇ ಬ್ರ್ಯಾಂಡ್ ಬೆಂಗಳೂರಿನ ಕನಸು ಕಂಡಿದ್ದರು. ಸಮಾಜದ ಪ್ರತಿಯೊಂದು ವರ್ಗದವರ ಪಾತ್ರವನ್ನು ನಿರ್ವಹಣೆ ಮಾಡಿದ ಶಂಕರ್‌ನಾಗ್ ಅವರು ಆಟೋ ರಾಜನೆಂದೇ ಪ್ರಸಿದ್ಧಿಯಾಗಿದ್ದಾರೆ. ಅವರ ಕೆಲವು ಅಪರೂಪದ ಫೋಟೋಗಳು ಇಲ್ಲಿವೆ ನೋಡಿ...
ಕಾಲೇಜು ದಿನಗಳಲ್ಲಿ ಶಂಕರ್‌ನಾಗ್..
ನಾಗರಕಟ್ಟೆ ಶಂಕರ ಮುಂದೆ ಶಂಕರ್ ನಾಗ್ ಆಗಿ ಬೆಳೆದು ಕನ್ನಡ ಚಿತ್ರರಂಗದ ಸಿಡಿಲ ಮರಿಯಾದದ್ದು ದೊಡ್ಡ ಕತೆ.
ಕನ್ನಡ ಸಿನಿಮಾ ರಂಗವನ್ನು ಉನ್ನತ ಮಟ್ಟಕ್ಕೇರಿಸಿದ ಕೀರ್ತಿದಾತ ಶಂಕರ್‌ನಾಗ್ ಅವರು ನಮ್ಮಿಂದ ದೂರವಾಗಿ ಇಂದಿಗೆ 33 ವರ್ಷಗಳು ಸಂದಿವೆ. ಆದರೂ ಅಭಿಮಾನಿಗಳ ಪಾಲಿಗೆ ಅವರು ಸದಾ ಜೀವಂತವಾಗಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಆಟೋ ನೋಡಿದರೆ, ಸ್ಯಾಂಡಲ್‌ವುಡ್‌ನ ದಿಗ್ಗಜರನ್ನು ನೆನಪಿಸಿಕೊಳ್ಳುವಾಗ, ಅಷ್ಟೇ ಯಾಕೆ ನಮ್ಮ ಮೆಟ್ರೋ ಉದ್ಘಾಟನೆಯಾಗುವಾಗಲೂ ಕನ್ನಡಿಗರು ನೆನಪಿಸುಕೊಳ್ಳುವ ನಟನೆಂದರೆ ಶಂಕರ್‌ನಾಗ್.
ಅಣ್ಣ ಅನಂತನಾಗ್ ಅವರೊಂದಿಗೆ ಚಿಕ್ಕಂದಿನಲ್ಲಿ ಪೋಟೋಗೆ ಪೋಸ್ ಕೊಟ್ಟ ಶಂಕರ್‌ನಾಗ್ ಅವರ ಮುಖದಲ್ಲಿಯೇ ಭವಿಷ್ಯದ ಕ್ರಾಂತಿ ಕಾಣಿಸುತ್ತಿದೆ.
ತಂದೆ ಹಾಗೂ ಅಣ್ಣನ ಜೊತೆಗೆ ಶಂಕರ್‌ನಾಗ್.,
ಈ ಕಾಲದ ಎಷ್ಟೋ ಹುಡುಗರು ಶಂಕರ್ ನಾಗ್ ಅವರನ್ನು ನೋಡಿಲ್ಲ. ಅವರು ಹುಟ್ಟುವ ಮೊದಲೇ ಶಂಕರ್ ಇಹಲೋಕ ಯಾತ್ರೆ ಮುಗಿಸಿಬಿಟ್ಟಿದ್ದರು.
ಚಿತ್ರದುರ್ಗದಲ್ಲಿ ಅಪಘಾತವಾಗಿ ಕೊನೆಯುಸಿರೆಳೆದ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ ಅವರ ಸ್ಥಾನವನ್ನು ತುಂಬಲು ಇವತ್ತಿಗೂ ಅಸಾಧ್ಯ.
ಶಂಕರ್ ನಾಗ್ ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ, ನಾವೆಲ್ಲರೂ ಅವರ 69ನೇ ಹುಟ್ಟುಹಬ್ಬವನ್ನು ಆಚರಿಸಬೇಕಿತ್ತು. ಆದರೆ, ಬಹುಬೇಗನೇ ಇಹಲೋಕದಿಂದ ದೂರಾಗಿ ಬರೀ ನೆನಪಾಗಿ ಉಳಿಸಿದ್ದಾರೆ.
ಸಿನಿಮಾಗಳಲ್ಲಿ ಅನೇಕರೊಂದಿಗೆ ಭಾರಿ ಸಲುಗೆಯನ್ನು ಹೊಂದಿದ್ದ ಶಂಕರ್‌ನಾಗ್ ಅವರು ಅಂಬರೀಶ್, ವಿಷ್ಣುವರ್ಧನ್ ಅವರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದರು.
ದೂರದೃಷ್ಟಿ ಜೊತೆ ನಾಟಕ, ನಟನೆ, ನಿರ್ದೇಶನಕ್ಕೂ ತಾವು ಸೈ ಎಂದು ಚಿಕ್ಕ ವಯಸ್ಸಿನಲ್ಲಿಯೇ ಪ್ರೂವ್ ಮಾಡಿದ ಈ ನಟನ ಪತ್ನಿ ಅರುಂಧತಿ ನಾಗ್, ನಾಟಕಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಶಂಕರ್ ನಾಗ್ ಅವರು ಸಿನಿಮಾದ ಜೊತೆಗೆ ರಂಗಭೂಮಿ ಹಾಗೂ ಕ್ರೀಡಗಳಲ್ಲಿಯೂ ಆಸಕ್ತಿಯನ್ನು ಹೊಂದಿದ್ದರು. ಎಲ್ಲ ಕ್ರಿಯೆಗಳಲ್ಲಿ ಸೃಜನಶೀಲರರಾಗಿದ್ದರು. ಸ್ನೂಕರ್ ಕ್ರೀಡೆ ಪ್ರವೀಣರಾಗಿದ್ದರು.
ಸಿನಿಮಾ ಕಲಾವಿದರು ಹಾಗೂ ಇತರೆ ಕ್ಷೇತ್ರಗಳ ಕಲಾವಿದರು ಹವ್ಯಾಸಕ್ಕಾಗಿ ಹಲವು ಕ್ರೀಡೆ ಹಾಗೂ ಮನರಂಜನಾತ್ಮಕ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ. ಆದರೆ, ಸದಾ ಬಿಜಿಯಾಗಿರುತ್ತಿದ್ದ ಶಂಕರ್‌ನಾಗ್ ಅವರಿಗೆ ನಾಯಿಗಳ ಮೇಲೆಯೂ ಹೆಚ್ಚು ಪ್ರೀತಿ ಹೊಂದಿದ್ದರು.
ಮದುವೆಯ ದಿನ ತಾಳಿ ಕಟ್ಟುವ ಸಮಯವಾಗಿದ್ದರೂ ಪತ್ರಕರ್ತರೊಬ್ಬರೊಂದಿಗೆ ಸಂದರ್ಶನ ಕೊಡುತ್ತಿದ್ದರು. ಆಗ, ಸಾರ್ ಒಂದು ಸಣ್ಣ ಬ್ರೇಕ್ ತಗೊಳ್ಳೋಣ್ವಾ, ಪಕ್ಕದಲ್ಲೇ ಆರ್ಯ ಸಮಾಜದಲ್ಲಿ ನನ್ನ ಮದ್ವೆ ಇದೆ. ಹಿಂಗ್ ಹೋಗಿ ಹಂಗೆ ಬಂದು ಬಿಡ್ತೀನಿ ಎಂದಿದ್ದರು.
ಎಲ್ಲರೂ ಕಾಯುತ್ತಿರುವಾಗಲೇ ಶಂಕರ್ ನಾಗ್ ಓಡಿಹೋಗಿ ಆರ್ಯ ಸಮಾಜದತ್ತ ಧಾವಿಸಿದ್ದರು. ನಂತರ ತಾವು ಆರು ವರ್ಷ ಮನಸಾರೆ ಪ್ರೀತಿಸಿದ ಹುಡುಗಿಯನ್ನು ವರಿಸಿದರು.