- Home
- Entertainment
- Sandalwood
- ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ರೆ ಮಾತ್ರ ಯಶಸ್ಸು ಅಂದುಕೊಂಡಿದ್ದ ಆದರೆ ಅದು ತಪ್ಪು: ನಿಮಿಕಾ ರತ್ನಾಕರ್
ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ರೆ ಮಾತ್ರ ಯಶಸ್ಸು ಅಂದುಕೊಂಡಿದ್ದ ಆದರೆ ಅದು ತಪ್ಪು: ನಿಮಿಕಾ ರತ್ನಾಕರ್
ಹೊಸ ಚಿತ್ರಕ್ಕೆ ಸಹಿ ಹಾಕಿದ ನಿಮಿಕಾ ರತ್ನಾಕರ್. ಟೈಟಲ್ ಸಖತ್ ಡಿಫರೆಂಟ್ ಇದೆ ಆದರೆ ಕಥೆ ಹೇಗಿರಲಿದೆ ಎಂದು ವಿವರಿಸಿದ ನಟಿ......

ರಾಮ ಧನ್ಯ, ಅಬ್ಬರ, ಮಿಸ್ಟರ್ ಬ್ಯಾಚುಲರ್ ಹಾಗೂ ಕ್ರಾಂತಿ ಚಿತ್ರದಲ್ಲಿ ನಟಿಸಿರುವ ನಿಮಿಕಾ ರತ್ನಾಕರ್ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದುವೇ ವೈಲ್ಡ್ ಟೈಗರ್ ಸಫಾರಿ.
'ನಮ್ಮ ಸಂಸ್ಕೃತಿಯನ್ನು ತೋರಿಸುವ ಕಥೆಗಳನ್ನು ಕೇಳಲು ಖುಷಿಯಾಗುತ್ತದೆ ಹಾಗೂ ಆ ಸಿನಿಮಾದಲ್ಲಿ ನಟಿಸುವುದು ಹೆಮ್ಮೆ ಫೀಲ್ ಆಗುತ್ತದೆ. ಏಕೆಂದರೆ ನಾನು ಕುಡ್ಲ ಹುಡುಗಿ ಆಗಿರುವ ಕಾರಣ ಹುಲಿ ವೇಷ ತುಂಬಾ ಹತ್ತಿರ ಅನಿಸುತ್ತದೆ'
'ಚಿತ್ರದ ಹೆಸರು ವೈಲ್ಡ್ ಟೈಗರ್ ಸಫಾರಿ ಎಂದು. ಈ ಚಿತ್ರದಲ್ಲಿ ಕೊಂಚ ಮಾಸ್ ಎಲಿಮೆಂಟ್‌ಗಳು ಕೂಡ ಇದೆ. ಈ ಹಿಂದೆ ಈ ರೀತಿ ಪಾತ್ರವನ್ನು ಎಂದೂ ಮಾಡಿರಲಿಲ್ಲ' ಎಂದು ನಮಿಕಾ ಹೇಳಿದ್ದಾರೆ.
'ನನಗೆ ಇಷ್ಟು ದಿನಗಳಿಂದ ಇದ್ದ ಗ್ಲಾಮ್ ರೋಲ್ ಫ್ಲಾಶಿ ಪಾತ್ರಗಳಿಂದ ಹೊರ ಬಂದು ಗಟ್ಟಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀನಿ. ಕಥೆ ಮತ್ತು ಪಾತ್ರಕ್ಕೆ ಪ್ರಾಮುಖ್ಯತೆಗಳನ್ನು ನೀಡುತ್ತಿದ್ದೀನಿ'
'ಸೂಪರ್ ಸ್ಟಾರ್ ಜೊತೆ ಸಿನಿಮಾ ಸೈನ್ ಮಾಡಿದರೆ ನನಗೆ ವೃತ್ತಿ ಜೀವನ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ ಅಂದುಕೊಂಡಿದ್ದೆ ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ ನಾವು ಅಂದುಕೊಂಡಂತೆ ಅಲ್ಲ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಪ್ರತಿಯೊಬ್ಬ ಕಲಾವಿದರೂ ಯಾವುದೇ ಹಂತಕ್ಕೆ ಬೆಳೆದರೂ ಒಂದೊಂದು ಕಷ್ಟಗಳನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ತೆರೆ ಮೇಲೆ ಮೂಡಿ ಬರುವ ಪಾತ್ರಕ್ಕೆ ಪ್ರಾಮುಖ್ಯತೆ ನೀಡುತ್ತೀನಿ' ಎಂದು ನಿಮಿಕಾ ಹೇಳಿದ್ದಾರೆ.