ಅನಾರೋಗ್ಯದಿಂದ ಬಳಲುತ್ತಿರುವ ಅಪ್ಪು ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ ಅಶ್ವಿನಿ!
ಪವರ್ ಅಭಿಮಾನಿಯನ್ನು ಭೇಟಿ ಮಾಡಿ ಪವರ್ ತುಂಬಿದ ಅಶ್ವಿನಿ..ಫೋಟೋ ವೈರಲ್...

ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ ಪುನೀತ್ ರಾಜ್‌ಕುಮಾರ್ ಅವರ ಪುಟ್ಟ ಅಭಿಮಾನಿಯನ್ನು ಪತ್ನಿ ಅಶ್ವಿನಿ ಭೇಟಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮಾಹಿತಿ ಪ್ರಕಾರ. ಈ ಪುಟ್ಟ ಅಭಿಮಾನಿಯೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ ಪುಟ್ಟ ಅಭಿಮಾನಿಯನ್ನು ಮನೆಯಲ್ಲಿ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಕಂದಮ್ಮ ಪಕ್ಕ ಕುಳಿತಿರುವ ಫೋಟೋ ವೈಲರ್ ಆಗಿದೆ.
ಅಪ್ಪು ಸಿನಿಮಾ ನೋಡಿದ್ದೀರಾ ಎಂದು ಕೇಳಿದಾಗ ಹು ಸಿನಿಮಾ ನೋಡಿದ್ದೀನಿ ಎನ್ನುತ್ತದೆ ಕಂದಮ್ಮ. ಆಗ ಅಶ್ವಿನಿ ಮುಖದಲ್ಲಿ ಖುಷಿ ಎದ್ದು ಕಾಣುತ್ತದೆ.
ಮನೆಯಲ್ಲಿ ಅಪ್ಪು ಫೋಟೋವನ್ನು ನೋಡಿ ಪುಟ್ಟ ಕಂದಮ್ಮ ಖುಷಿ ಪಡುತ್ತದೆ. ಫೋಟೋದಲ್ಲಿ ಯಾರಿದ್ದಾರೆ ಎಂದು ಕೇಳಿದಾಗ ಖುಷಿ ಪಡುತ್ತದೆ.
ಅಲ್ಲದೆ ಅಪ್ಪು ಮನೆಯಲ್ಲಿರುವ ಐಷಾರಾಮಿ ನೀಲಿ ಬಣ್ಣದ ಕಾರಿನ ಮುಂದೆ ನಿಂತುಕೊಂಡು ಪುಟ್ಟ ಅಭಿಮಾನಿ ಖುಷಿಯಿಂದ ಪೋಸ್ ಕೊಡುತ್ತಾನೆ.