- Home
- Entertainment
- Sandalwood
- ಹೇರ್‌ಕಟ್ ಆದ್ಮೇಲೆ ಸಾವಿರಾರೂ ಫೋಟೋಗಳು ಬೇಕೇ ಬೇಕು...ಮಾಲಾಶ್ರೀ ಮಗಳ ಹೊಸ ಲುಕ್ ವೈರಲ್!
ಹೇರ್‌ಕಟ್ ಆದ್ಮೇಲೆ ಸಾವಿರಾರೂ ಫೋಟೋಗಳು ಬೇಕೇ ಬೇಕು...ಮಾಲಾಶ್ರೀ ಮಗಳ ಹೊಸ ಲುಕ್ ವೈರಲ್!
ಹೊಸ ಹೇರ್ ಕಟ್ ಲುಕ್ ಹೇಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಮಾಲಾಶ್ರೀ ಪುತ್ರಿ.

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಹಾಗೂ ಕೋಟಿ ಬಜೆಟ್‌ನಲ್ಲೇ ಸಿನಿಮಾಗಳನ್ನು ಮಾಡುತ್ತಿದ್ದ ಕೋಟಿ ರಾಮು ಪುತ್ರಿ ಆರಾಧನಾ ರಾಮ್ ಕೂಡ ಈಗ ಚಂದನವನದ ನಾಯಕಿ.
ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಆರಾಧನಾ ರಾಮ್ ನಾಯಕಿಯಾಗಿ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ನಟ ದರ್ಶನ್‌ಗೆ ಜೋಡಿಯಾಗಿ ಮಿಂಚಿಬಿಟ್ಟರು.
ಶೀಘ್ರದಲ್ಲಿ ಎರಡನೇ ಸಿನಿಮಾ ಅನೌನ್ಸ್ ಮಾಡಲಿರುವ ಆರಾಧನಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿದ್ದಾರೆ.
ಈಗ ಸಮ್ಮರ್ ಆಗಿರುವ ಕಾರಣ ಆರಾಧನಾ ರಾಮ್ ಹೊಸ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. ಒಂದಿಷ್ಟು ಸೆಲ್ಫಿಗಳನ್ನು ಕ್ಲಿಕ್ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
'ಖಂಡಿತ ಹೊಸ ಹೇರ್ ಕಟ್ ಆದ್ಮೇಲೆ ಸಾವಿರಾರೂ ಫೋಟೋಗಳು ಬೇಕೇ ಬೇಕು' ಎಂದು ಆರಾಧನಾ ಬರೆದುಕೊಂಡಿದ್ದಾರೆ. ಹೊಸ ಲುಕ್ ಸೂಪರ್ ಆಗಿದೆ ಎಂದು ನೆಟ್ಟಿಗರು ಕೂಡ ಕಾಮೆಂಟ್ ಮಾಡಿದ್ದಾರೆ.
ಇನ್ನು ಆರಾಧನಾ ತಾಯಿ ಮಾಲಾಶ್ರೀ ಜೊತೆ ಸಿನಿಮಾ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ. ಅಲ್ಲದೆ ಮಗನನ್ನು ಶೀಘ್ರದಲ್ಲಿ ಚಿತ್ರರಂಗಕ್ಕೆ ಪರಿಚಯಿಸುವುದಾಗಿ ಮಾಲಾಶ್ರೀ ಹೇಳುತ್ತಿದ್ದರು.