- Home
- Entertainment
- Sandalwood
- ಅಂಕಿತಾ ಅಮರ್’ಗೆ ಸಿಕ್ತು ಭರ್ಜರಿ ಆಫರ್… ಉಪೇಂದ್ರಗೆ ನಾಯಕಿಯಾದ ‘ನಮ್ಮನೆ ಯುವರಾಣಿ’ ನಟಿ
ಅಂಕಿತಾ ಅಮರ್’ಗೆ ಸಿಕ್ತು ಭರ್ಜರಿ ಆಫರ್… ಉಪೇಂದ್ರಗೆ ನಾಯಕಿಯಾದ ‘ನಮ್ಮನೆ ಯುವರಾಣಿ’ ನಟಿ
ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್ ಗೆ ಇದೀಗ ಬಿಗ್ ಆಫರ್ ಸಿಕ್ಕಿದ್ದು, ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗ್ತಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ (Nammane Yuvarani) ಧಾರಾವಾಹಿ ಯಾರಿಗೆ ತಾನೆ ನೆನಪಿಲ್ಲ? ಅದರಲ್ಲೂ ಮೀರಾ ಪಾತ್ರವನ್ನು ಇಂದಿಗೂ ಜನರು ನೆನಪಿಟ್ಟುಕೊಂಡಿದ್ದಾರೆ ಅಂದ್ರೆ ಅದಕ್ಕೆ ಕಾರಣ ನಟಿ ಅಂಕಿತಾ ಅಮರ್.
ಮೊದಲ ಧಾರಾವಾಹಿಯ ಮೂಲಕವೇ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್ (Ankita Amar), ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ರು, ಈಗಾಗಲೇ ನಾಲ್ಕೈದು ಸಿನಿಮಾಗಳು ನಟಿಯ ಕೈಯಲ್ಲಿದ್ದು, ಇದೀಗ ಮತ್ತೊಂದು ಭರ್ಜರಿ ಆಫರ್ ಪಡೆದಿದ್ದಾರೆ ನಟಿ.
ಕಳೆದ ವರ್ಷ ರಕ್ಷಿತ್ ಶೆಟ್ಟಿ (Rakshith Shetty) ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟಿದ್ದರು ಅಂಕಿತಾ ಅಮರ್. ಈ ಸಿನಿಮಾವನ್ನು ಹಾಗೂ ನಟಿಯ ಪಾತ್ರವನ್ನು ಜನರು ಇಷ್ಟಪಟ್ಟಿದ್ದರು.
ಇದೀಗ ಅಂಕಿತಾ ಅಮರ್ ಗೆ ಬಂಪರ್ ಆಫರ್ ಸಿಕ್ಕಿದ್ದು, ರಿಯಲ್ ಸ್ಟಾರ್ ಉಪೇಂದ್ರ (real Star Upendra)ಅಭಿನಯಿಸಲಿರುವ ಹೊಸ ಸಿನಿಮಾ ಭಾರ್ಗವಕ್ಕೆ ನಾಯಕಿಯಾಗಿ ಅಂಕಿತಾ ಅಮರ್ ಆಯ್ಕೆಯಾಗಿದ್ದಾರೆ.
ನಾಗಣ್ಣ ನಿರ್ದೇಶನ ಮಾಡುತ್ತಿರುವ ಭಾರ್ಗವ (Bhargava) ಸಿನಿಮಾಕ್ಕೆ ಉಪೇಂದ್ರಗೆ ಅಂಕಿತಾ ನಾಯಕಿಯಾಗಿದ್ದಾರೆ. ಇದು ನಾಗಣ್ಣ ಹಾಗೂ ಉಪೇಂದ್ರ ಕಾಂಬಿನೇಶನ್ ನ ಐದನೇ ಸಿನಿಮಾ ಕೂಡ ಆಗಿದೆ.
ಇಬ್ಬನಿ ತಬ್ಬಿದ ಇಳಿಯಲಿ (Ibbani Tabbida Ileyali) ಸಿನಿಮಾದಲ್ಲಿ ಅಂಕಿತಾ ಅಭಿನಯ ನೋಡಿ ಮೆಚ್ಚಿಕೊಂಡಿರುವ ಉಪೇಂದ್ರ, ಭಾರ್ಗವ ಸಿನಿಮಾದಲ್ಲಿ ನಟನೆಗೆ ಹೆಚ್ಚು ಸ್ಕೋಪ್ ಇರೋದರಿಂದ ನಾಯಕಿ ಪಾತ್ರಕ್ಕೆ ಅಂಕಿತಾ ಅವರನ್ನು ಆಯ್ಕೆ ಮಾಡಿದ್ದಾರೆ.
ಉಪೇಂದ್ರ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಅಂಕಿತಾ ಅಮರ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇದೊಂದು ವಿಭಿನ್ನ ಪಾತ್ರವಾಗಿದ್ದು, ಉಪೇಂದ್ರರಿಂದ ಹೆಚ್ಚಿನದನ್ನು ಕಲಿಯಲು ಇಷ್ಟಪಡುತ್ತೇನೆ ಎಂದಿದ್ದಾರೆ ನಮ್ಮನೆ ಯುವರಾಣಿ ನಟಿ.
ಅಂಕಿತಾ ಅಮರ್ ಅವರು ಶೈನ್ ಶೆಟ್ಟಿ ಜೊತೆ ಜಸ್ಟ್ ಮ್ಯಾರೀಡ್ (Just Married) ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಈ ವರ್ಷ ಬಿಡುಗಡೆಯಾಗಬಹುದು, ಇನ್ನು ಸನ್ ಆಫ್ ಸತ್ಯ ಹರಿಶ್ಚಂದ್ರ ಸಿನಿಮಾದಲ್ಲೂ ಅಂಕಿತಾ ನಟಿಸಿದ್ದಾರೆ. ಇದೀಗ ಭಾರ್ಗವ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿದೆ.