ತೆಲುಗು ಚಿತ್ರರಂಗಕ್ಕೆ ಐಶ್ವರ್ಯ ಎಂಟ್ರಿ; ತಂದೆ ಅರ್ಜುನ್ ಸರ್ಜಾನೇ ಡೈರೆಕ್ಟರ್!
ಮತ್ತೆ ನಿರ್ದೇಶನಕ್ಕಿಳಿದ ಅರ್ಜುನ್ ಸರ್ಜಾ. ಮಗಳ ಚಿತ್ರಕ್ಕೆ ಆಕ್ಷನ್ ಕಿಂಗ್ ಆಕ್ಷನ್ ಕಟ್. ಈ ಮೂಲಕ ಟಾಲಿವುಡ್‌ಗೆ ಕನ್ನಡತಿ ಎಂಟ್ರಿ...

ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಚಿತ್ರರಸಿಕರನ್ನು ರಂಜಿಸ್ತಿರುವ ಅರ್ಜುನ್ ಸರ್ಜಾ ಇದೀಗ ಮಗಳ ಸಿನಿಮಾಗೆ ಮತ್ತೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಪ್ರೇಮ ಬರಹ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾಗೆ ಅರ್ಜುನ್ ಸರ್ಜಾ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಆದಾದ ಬಳಿಕ ಐಶ್ವರ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಈಗ ಮತ್ತೆ ಅರ್ಜುನ್ ಸರ್ಜಾ ಮಗಳ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ.
ಅರ್ಜುನ್ ತಮ್ಮದೇ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ನಡಿಯಲ್ಲಿ ನಿರ್ಮಿಸಲಿರುವ 15ನೇ ಸಿನಿಮಾದ ಮೂಲಕ ಮಗಳು ಐಶ್ವರ್ಯ ಅರ್ಜುನ್ ಅವರನ್ನು ತೆಲುಗಿನಲ್ಲಿ ನಾಯಕ ನಟಿಯಾಗಿ ಪರಿಚಯಿಸ್ತಿದ್ದಾರೆ.
ಐಶ್ವರ್ಯಾ ಅರ್ಜುನ್ ನಾಯಕಿಯಾಗಿ ನಟಿಸ್ತಿರುವ ಈ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಯುವ ಮತ್ತು ಭರವಸೆಯ ನಟ ವಿಶ್ವಕ್ ಸೇನ್ ನಾಯಕನಾಗಿ ಅಭಿನಯಿಸ್ತಿದ್ದಾರೆ.
ವಿಶ್ವಕ್ ಸೇನ್ ನಿರ್ದೇಶನ ಫಲಕ್ನುಮಾ ದಾಸ್ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದ್ದು, ಸದ್ಯ ದಾಸ್ ಕಾ ಧಮ್ಕಿ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಯಲೀಗ ಹೊಸ ಚಿತ್ರವನ್ನು ವಿಶ್ವಕ್ ಸೇನ್ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ವಿಲನ್ ಗೆಟಪ್ ನಲ್ಲಿ ಜಗಪತಿ ಬಾಬು ನಟಿಸಲಿದ್ದಾರೆ.ಇದೊಂದು ರೋಡ್ ಟ್ರಿಪ್ ಸಿನಿಮಾವಾಗಿದ್ದು, ಶೀರ್ಘದಲ್ಲಿಯೇ ಶೂಟಿಂಗ್ ಶುರುವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.