- Home
- Entertainment
- Sandalwood
- Kantara Chapter 1 ಅಬ್ಬರ… ಪ್ರಚಾರಕ್ಕೆ ಬ್ರೇಕ್ ಕೊಟ್ಟು ಪತ್ನಿ, ಮಕ್ಕಳೊಂದಿಗೆ ಸಮಯ ಕಳೆದ ರಿಷಬ್ ಶೆಟ್ಟಿ
Kantara Chapter 1 ಅಬ್ಬರ… ಪ್ರಚಾರಕ್ಕೆ ಬ್ರೇಕ್ ಕೊಟ್ಟು ಪತ್ನಿ, ಮಕ್ಕಳೊಂದಿಗೆ ಸಮಯ ಕಳೆದ ರಿಷಬ್ ಶೆಟ್ಟಿ
ಕಾಂತಾರ ಚಾಪ್ಟರ್ 1 ದೇಶದ ಮೂಲೆ ಮೂಲೆಯಲ್ಲೂ ಅಬ್ಬರದ ಪ್ರದರ್ಶನ ನಡೆಯುತ್ತಿರುವ ಬೆನ್ನಲ್ಲೇ ಸಿನಿಮಾ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ ಕೊನೆಗೂ ಎಲ್ಲಾ ಪ್ರಮೋಷನ್, ಸಕ್ಸಸ್ ಮೀಟ್ ನಿಂದ ಬ್ರೇಕ್ ತೆಗೆದುಕೊಂಡು ತಮ್ಮ ಪತ್ನಿ ಮಕ್ಕಳೊಂದಿಗೆ ಫ್ಯಾಮಿಲಿ ಕಳೆದಿದ್ದಾರೆ.

ಕಾಂತಾರ ಚಾಪ್ಟರ್ 1
ಕಾಂತಾರ ಚಾಪ್ಟರ್ 1 (Kantara Chapter 1) ಬಿಡುಗಡೆಯಾಗಿ ದೇಶದ್ಯಾಂತ ಭಾರಿ ಸದ್ದು ಮಾಡುತ್ತಿದೆ. ಕೇವಲ 10 ದಿನಗಳಲ್ಲಿ ಈ ಸಿನಿಮಾ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ ಕೂಡ ಸಿನಿಮಾ ಯಶಸ್ವಿಯಾಗಿ ಸಾಗುತ್ತಾ ಎಲ್ಲಾ ದಾಖಲೆಗಳನ್ನು ಪುಡಿ ಮಾಡುತ್ತಾ ಮುನ್ನುಗ್ಗುತ್ತಿದೆ.
ರಿಷಬ್ ಶೆಟ್ಟಿ
ಕಾಂತಾರ ಸಿನಿಮಾದ ನಟ ಮತ್ತು ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಕಳೆದ ಐದು ವರ್ಷಗಳಿಂದ ತಮ್ಮ ಜೀವನವನ್ನೇ ಕಾಂತಾರ ಸಿನಿಮಾಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ರಿಷಬ್ ತಮ್ಮ ಕುಟುಂಬ ಸಮೇತರಾಗಿ ಹುಟ್ಟೂರಾದ ಕೆರಾಡಿಗೆ ಬಂದು ನೆಲೆಸಿದ್ದಾರೆ.
ಸಿನಿಮಾವನ್ನೇ ಜೀವನವಾಗಿಸಿದ ರಿಷಬ್
ಕಾಂತಾರ ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ, ತಮ್ಮನ್ನು ಎಷ್ಟೊಂದು ಮುಡಿಪಾಗಿಟ್ಟಿದ್ದರು ಎಂದರೆ ಕಾಂತಾರ ಮೊದಲ ಭಾಗ ಬಿಡುಗಡೆಯಾದಾಗ ನಿದ್ರೆಯೇ ಮಾಡಿರಲಿಲ್ಲ ರಿಷಬ್. ಕಾಂತಾರಾ ಚಾಪ್ಟರ್ 1 ಸಿನಿಮಾ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ, ಇದೀಗ ಕನ್ನಡ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸುವಂತಾಗಿದೆ.
ಫ್ಯಾಮಿಲಿಗೆ ಸಮಯ ಕೊಟ್ಟಿರದ ರಿಷಬ್
ರಿಷಬ್ ಕಳೆದ ಐದು ವರ್ಷಗಳಲ್ಲಿ ಸಿನಿಮಾಗಳಲ್ಲಿ ಎಷ್ಟು ಮುಳುಗಿ ಹೋಗಿದ್ದರು ಅಂದರೆ, ತಮ್ಮ ಕುಟುಂಬಕ್ಕೆ ಹೆಂಡ್ತಿ, ಮಕ್ಕಳಿಗೆ ಸರಿಯಾಗಿ ಸಮಯ ಕೊಡಲು ಸಾಧ್ಯವಾಗಿರಲಿಲ್ಲ. ಇದೀಗ ಯಶಸ್ವಿ ಪ್ರದರ್ಶನ, ಪ್ರಚಾರದ ನಡುವೆ ರಿಷಬ್ ತಮ್ಮ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ.
ರಿಷಬ್ ಶೆಟ್ಟಿ ಫ್ಯಾಮಿಲಿ ಟೈಮ್
ಇದೀಗ ಹಲವಾರು ಸಮಯದ ಬಳಿಕ ರಿಷಬ್ ತಮ್ಮ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳಾದ ರಣ್ವೀರ್ ಮತ್ತು ರಾಧ್ಯಾ ಜೊತೆ ಒಂದಷ್ಟು ಸುಂದರವಾದ ಸಮಯವನ್ನು ಕಳೆದಿದ್ದಾರೆ. ಎಲ್ಲಾ ಸದ್ದು ಗದ್ದಲದಿಂದ ದೂರ ಉಳಿದು, ಪ್ರಕೃತಿಗೆ ಹತ್ತಿರವಾಗಿರುವ ತಾಣದಲ್ಲಿ ಹೆಂಡ್ತಿ ಮಕ್ಕಳ ಜೊತೆ ಎಂಜಾಯ್ ಮಾಡ್ತಿದ್ದಾರೆ ಶೆಟ್ರು.
ಸಾಧನೆಯ ನೆಮ್ಮದಿ ಅಂದ್ರೆ ಇದೇನೆ
ರಿಷಬ್ ಶೆಟ್ಟಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿರುವುದನ್ನು ನೋಡಿ ಅಭಿಮಾನಿಗಳು ನೆಮ್ಮದಿ ಅಂದ್ರೆ ಇದೆ, ಇದಕ್ಕೆ ಹೇಳೋದು ಸಾಧನೆಯ ಬಳಿಕದ ನೆಮ್ಮದಿ ಎಂದು. ಇನ್ನೊಬ್ಬ ಅಭಿಮಾನಿ ಹಂಸಲೇಖ ಸರ್ ಲಿರಿಕ್ಸ್ ನೆನಪಾಯ್ತು ಎನ್ನುತ್ತಾ ಒಂದು ಬೆಚ್ಚನೆ ಗೂಡಿರಲು, ವೆಚ್ಚಕಿಷ್ಟು ಹೊನ್ನಿರಲು, ಇಚ್ಛೆ ಅರಿವ ಸತಿ ಇರಲು, ನೆಚ್ಚಿದ ಕಲೆ ಒಲಿದಿರಲು, ಸ್ವರ್ಗಲೋಕದ ಚಿಂತೆ ಯಾಕೆ ಹೇಳಯ್ಯಾ... ಪ್ರೇಮಲೋಕ ಒಂದೇನೆ ಸಾಕೇಳಯ್ಯಾ ಎಂದು ಹೇಳಿದ್ದಾರೆ.