ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರಿಬ್ಬರ ಪರಿಚಯ, ಲವ್, ಮ್ಯಾರೇಜ್ ಹಾಗೂ ಸದ್ಯದ ಸ್ಥಿತಿ-ಗತಿಗಳ ಬಗ್ಗೆ ಟಾಕ್ ಆಗುತ್ತಿವೆ. ಹಳೆಯ ಸಂದರ್ಶನವೊಂದರಲ್ಲಿ ಸ್ವತಃ ಪ್ರಗತಿ ಶೆಟ್ಟಿ ಆ ಬಗ್ಗೆ ಮಾತನ್ನಾಡಿದ್ದು ಇದೀಗ ವೈರಲ್ ಆಗಿದೆ. ಆ ಇಂಟರ್‌ವ್ಯೂದಲ್ಲಿ ಅವರು ಹೇಳಿದ್ದು ಹೀಗೆ..

ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಲವ್ ಸ್ಟೋರಿ!

ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಈಗ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿದೆ. ಜಗತ್ತಿನಾದ್ಯಂತ 30 ದೇಶಗಳಲ್ಲಿ ದಿನವೊಂದಕ್ಕೆ 7000 ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲೇ ದಿನವೊಂದಕ್ಕೆ ಬರೋಬ್ಬರಿ 500 ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ ಕಾಂತಾರ ಚಾಪ್ಟರ್ 1. ಸದ್ಯ ಜಗತ್ತಿನೆಲ್ಲೆಡೆ ಕಾಂತಾರ ಕ್ರೇಜ್ ಅದೆಷ್ಟಿದೆ ಅಂದರೆ ಬಹಳಷ್ಟು ಜನ ವಿಐಪಿಗಳೂ ಕೂಡ ಕಾಂತಾರ ಸಿನಿಮಾ ನೋಡಿ ಮೆಚ್ಚಿ ಕನ್ನಡದ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾಗಳ ಮೂಲಕ, ಮಾಧ್ಯಮಗಳ ಮೂಲ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ರಿಷಬ್ ಶೆಟ್ಟಿ (Rishab Shetty) ಹಾಗೂ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರ ವೈಯಕ್ತಿಕ ಸಂಗತಿಗಳು ಕೂಡ ಸಾಕಷ್ಟು ವೈರಲ್ ಆಗುತ್ತಿವೆ.

ಹಾಗಿದ್ದರೆ ಯಾವ ವಿಷಯ ವೈರಲ್ ಆಗುತ್ತಿದೆ? ಹೌದು, ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರಿಬ್ಬರ ಪರಿಚಯ, ಲವ್, ಮ್ಯಾರೇಜ್ ಹಾಗೂ ಸದ್ಯದ ಸ್ಥಿತಿ-ಗತಿಗಳ ಬಗ್ಗೆ ಟಾಕ್ ವೈರಲ್ ಆಗುತ್ತಿವೆ. ಹಳೆಯ ಸಂದರ್ಶನವೊಂದರಲ್ಲಿ ಸ್ವತಃ ಪ್ರಗತಿ ಶೆಟ್ಟಿ ಆ ಬಗ್ಗೆ ಮಾತನ್ನಾಡಿದ್ದು ಇದೀಗ ವೈರಲ್ ಆಗಿದೆ. ಆ ಇಂಟರ್‌ವ್ಯೂದಲ್ಲಿ ಅವರು ಹೇಳಿದ್ದು ಹೀಗೆ.. ನಮ್ಮಿಬ್ಬರ ಲವ್-ಮ್ಯಾರೇಜ್‌ (Rishab Shetty Pragathi Shetty Love Marriage)ಗೆ ಕಾರಣವಾಗಿದ್ದು ರಕ್ಷಿತ್ ಶೆಟ್ಟಿ!

ರಿಷಬ್ ಪತ್ನಿ ಪ್ರಗತಿ ಈ ಬಗ್ಗೆ ಹೇಳಿದ್ದು 'ಉಳಿದವರು ಕಂಡಂತೆ ಸಿನಿಮಾ ನೋಡಿದ ಬಳಿಕ ನಾನು ಮತ್ತು ನನ್ನ ಆಫೀಸ್‌ ಫ್ರೆಂಡ್ಸ್‌ ಗ್ಯಾಂಗ್ ನಟ ರಕ್ಷಿತ್ ಶೆಟ್ಟಿ ಅವರ ಫ್ಯಾನ್ ಆಗೋದ್ವಿ. ಅವರ ಮುಂದಿನ ಸಿನಿಮಾ 'ರಿಕ್ಕಿ' ಬಿಡುಗಡೆಯಾದಾಗ ವೀಕೆಂಡ್‌ನಲ್ಲಿ ನಾವೆಲ್ಲಾ ರಿಕ್ಕಿ ನೋಡಲು ಥೀಯೇಟರ್‌ಗೆ ಹೋಗಿದ್ದೆವು. ಆಗ ಬಹಳಷ್ಟು ಪ್ರೇಕ್ಷಕರು ನಟ ರಕ್ಷಿತ್ ಶೆಟ್ಟಿಯವರನ್ನು ಸುತ್ತುವರೆದು ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ಆದ ಅಲ್ಲೇ ಸೈಡ್‌ನಲ್ಲಿ ರಿಷಬ್ ನಿಂತಿದ್ದರು. ನಮ್ಮ ಸ್ನೇಹ ಬಳಗದಲ್ಲಿ ಒಬ್ಬರಿಗೆ ರಕ್ಷಿತ್ ಅವರು ರಿಷಬ್ ಅವರನ್ನು ತೋರಿಸಿ ಅವರೇ ಈ ಸಿನಿಮಾದ ಡೈರೆಕ್ಟರ್ ಅಂತ ಅಂದ್ರು.

ನಾನು ಹೋಗಿ ರಿಷಬ್ ಶೆಟ್ಟಿ ಅವರ ಜೊತೆ ನಿಂತು ಸೆಲ್ಫೀ ತೆಗೆದುಕೊಂಡೆ!

ಆಗ ನಾನು ಹೋಗಿ ರಿಷಬ್ ಶೆಟ್ಟಿ ಅವರ ಜೊತೆ ನಿಂತು ಸೆಲ್ಫೀ ತೆಗೆದುಕೊಂಡೆ. ನನ್ನ ಫ್ರೆಂಡ್ಸ್‌ ಕೂಡ ಫೋಟೋ ತೆಗೆದುಕೊಂಡರು. ಹೀಗೆ ಮಾತನಾಡುತ್ತ ನಾವಿಬ್ಬರೂ ಒಂದೇ ಊರಿನವರು, ಕುಂದಾಪುರದವರು ಎಂಬುದು ಗೊತ್ತಾಯಿತು. ಊರಿಂದ ಹೊರಗಡೆ ಇರುವಾಗ, ಅದೂ ಬೆಂಗಳೂರಿನಲ್ಲಿ ಸಿಕ್ಕಾಗ ಸಹಜವಾಗಿಯೇ ನಾವಿಬ್ಬರೂ ಒಂದೇ ಊರಿನವರು ಎಂಬ ಕಾರಣಕ್ಕೆ ಬೇಗ ಕನೆಕ್ಟ್ ಆಗ್ಬಿಟ್ವಿ. ಅದಾದ ಬಳಿಕ ಫೇಸ್‌ಬುಕ್‌ನಲ್ಲಿ ಫ್ರೆಂಡ್ಸ್‌ ರಿಕ್ವೆಸ್ಟ್ ಕಳಿಸುವ ಮೂಲಕ ಕ್ಲೋಸ್ ಆಗಿ ಸ್ನೇಹ ಬೆಳೆಯಿತು. ಬಳಿಕ, ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡು ಸ್ನೇಹ ಪ್ರೇಮಕ್ಕೆ ತಿರುಗಿಕೊಂಡಿತು.

ನಮ್ಮ ಎರಡೂ ಫ್ಯಾಮಿಲಿಗಳೂ ಕೂಡ ಬೇಗ ಹತ್ತಿರವಾದೆವು!

ಇಬ್ಬರ ಊರೂ ಒಂದೇ ಆಗಿರುವುದರಿಂದ ನಮ್ಮ ಎರಡೂ ಫ್ಯಾಮಿಲಿಗಳೂ ಕೂಡ ಬೇಗ ಹತ್ತಿರವಾದೆವು. ಮಾತುಕತೆ ನಡೆದು ಮದುವೆಯೂ ಆಗಿ ಈಗ ನಾವು ಎರಡು ಮಕ್ಕಳ ಪೋಷಕರು' ಎಂದು ನಗುನಗುತ್ತಲೇ ಹೇಳಿದ್ದಾರೆ ಪ್ರಗತಿ ಶೆಟ್ಟಿಯವರು. ಹೀಗೆ, ನಟ ರಕ್ಷಿತ್ ಶೆಟ್ಟಿಯವರ ಫ್ಯಾನ್ ಆಗಿ ರಿಕ್ಕಿ ಸಿನಿಮಾಗೆ ಬಂದ ರಿಷಬ್ ಶೆಟ್ಟಿಯರವ ಜೊತೆ ಲವ್‌-ಮ್ಯಾರೇಜ್ ಆದವರು ಪ್ರಗತಿ ಶೆಟ್ಟಿ. ಈಗಲೂ ಪ್ರಗತಿ ಶೆಟ್ಟಿಯವರ ಫ್ರೆಂಡ್ಸ್‌ 'ನಾವು ನಿನಗೆ ರಿಷಬ್ ಸಿಗಲು ಕಾರಣ; ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಾರಂತೆ. ಅದೇನೇ ಇದ್ದರೂ ಇಂದು ಜಗತ್ತೇ ಗುರುತಿಸುವಂಥ ಜೋಡಿಯಾಗಿ ಮಿಂಚುತ್ತಿದ್ದಾರೆ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ.