ಕ್ರಿಶ್ಚಿಯನ್ ಆದ್ರೂ ಗಂಡನ ಆಯಸ್ಸಿಗಾಗಿ ಪಾದ ಪೂಜೆ ಮಾಡಿದ ನಟಿ ಸೋನಲ್ ಮೊಂಥೆರೋ
ಭೀಮನ ಅಮವಾಸ್ಯೆಯ ಸಂಭ್ರಮದಲ್ಲಿ ನಟಿ ಸೋನಲ್ ಮೊಂಥೆರೋ ತಮ್ಮ ಪತಿಯ ಪಾದ ಪೂಜೆ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಆಷಾಢದ ಕೊನೆಯ ಅಮವಾಸ್ಯೆಯನ್ನು(Ashadha Amavasya) ಆಷಾಢ ಅಮವಾಸ್ಯೆ ಅಥವಾ ಭೀಮನ ಅಮವಾಸ್ಯೆ ಎನ್ನುತ್ತಾರೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ಆಯಸ್ಸಿಗಾಗಿ ಹಾಗೂ ಆರೋಗ್ಯಕ್ಕಾಗಿ ಪಾದ ಪೂಜೆ ಮಾಡುತ್ತಾರೆ. ನಟಿ ಸೋನಲ್ ಮೊಂಥೆರೋ ಕೂಡ ಪಾದ ಪೂಜೆ ಮಾಡಿದ್ದಾರೆ.
ಹೌದು, ಚಂದನವನದ ನಟಿ ಸೋನಲ್ ಮೊಂಥೆರೋ (Sonal Montherio) ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಟ, ನಿರ್ದೇಶಕ ತರುಣ್ ಸುಧೀರ್ ಜೊತೆ ಸಪ್ತಪತಿ ತುಳಿದಿದ್ದರು. ಈ ವರ್ಷ ಸೋನಲ್ ಅವರು ಮೊದಲನೇ ಭೀಮನ ಅಮವಾಸ್ಯೆಯನ್ನು ಆಚರಿಸುತ್ತಿದ್ದಾರೆ. ಈ ಸಂಭ್ರಮದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಲಕ್ಷಣವಾಗಿ ಸೀರೆಯುಟ್ಟು, ಹೂವು ಮುಡಿದು, ಗಂಡನನ್ನು ಕೂರಿಸಿ ಪಾದ ಪೂಜೆ ಮಾಡಿರುವ ಸೋನಲ್, ಫೋಟೊಗಳ ಜೊತೆಗೆ ನಿಮ್ಮಂತಹ ಗಂಡ ಲಕ್ಷಾಂತರ ಜನರಲ್ಲಿ ಒಬ್ಬರು. ಇಂದು ಮಾತ್ರವಲ್ಲ, ನಿಮ್ಮ ದೀರ್ಘಾಯುಷ್ಯ (long life), ಉತ್ತಮ ಆರೋಗ್ಯ ಮತ್ತು ನಿರಂತರ ಸಂತೋಷಕ್ಕಾಗಿ ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ಪ್ರತಿ ವರ್ಷ ಕಳೆದಂತೆ ನಮ್ಮ ಬಾಂಧವ್ಯ ಬಲಗೊಳ್ಳಲಿ. ಐ ಲವ್ ಯೂ ಮೈ ಲವ್ ಎಂದು ಬರೆದುಕೊಂಡಿದ್ದಾರೆ.
ಸೋನಲ್ ಮೊಂಥೆರೋ ಕ್ರಿಶ್ಚಿಯನ್ ಆಗಿದ್ದು, ಇವರ ಶಾಸ್ತ್ರ ಸಂಪ್ರದಾಯಗಳು ಎಲ್ಲವೂ ವಿಭಿನ್ನವಾಗಿದೆ. ಆದರೆ ಮದುವೆಯಾದ ಬಳಿಕ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಸೋನಲ್ ಕೂಡ ಪಾಲಿಸುತ್ತಾ ಬಂದಿದ್ದಾರೆ. ಅದೇ ರೀತಿ ಗಂಡನ ದೀರ್ಘಾಯಸ್ಸಿಗಾಗಿ ಪೂಜೆಯನ್ನು ಕೂಡ ಮಾಡಿದ್ದಾರೆ.
ಚಂದನವನದ ಜೋಡಿಗಳ ಮುದ್ದಾದ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುತ್ತಿದ್ದು, ಮುದ್ದಾದ ಜೋಡಿ, ಇಬ್ಬರ ಜೋಡಿ ಹೀಗೆ ಸಂತೋಷವಾಗಿ ನೂರು ಕಾಲ ಇರಲಿ. ಮೇಡ್ ಫಾರ್ ಈಚ್ ಅದರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಕರಿಯರ್ ಬಗ್ಗೆ ಹೇಳೋದಾದ್ರೆ, ಸೋನಲ್ ಮತ್ತು ತರುಣ್ ಇಬ್ಬರೂ ಕೂಡ ಬ್ಯುಸಿಯಾಗಿದ್ದಾರೆ. ತರುಣ್ ಸದ್ಯ ಮಹಾನಟಿ ತೀರ್ಪುಗಾರರಾಗಿದ್ದು, ಜೊತೆಗೆ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಸೋನಲ್ ಅಭಿನಯದ ಮಾದೇವ (Maadeva) ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಜನಪ್ರಿಯತೆ ಪಡೆದಿತ್ತು. ಇದಲ್ಲದೇ ಬುದ್ಧಿವಂತ ೨ ಮತ್ತು ಮಾರ್ಗರೇಟ್ ಲವರ್ ರಾಮಾಚಾರಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.