ಚಿತ್ರಕಲಾ ಪರಿಷತ್; ಸೋಕ್ ಮಾರ್ಕೆಟ್ ಉದ್ಘಾಟಿಸಿದ ನಟಿ ಶುಭಾ ಪೂಂಜಾ ಫೋಟೋಗಳು
ಬೆಂಗಳೂರು, ಸೆಪ್ಟೆಂಬರ್ 16, 2022: ಚಿತ್ತಾರ ಸಹಯೋಗದೊಂದಿಗೆ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ದಿ ಸೋಕ್ (ಮಾರ್ಕೆಟ್) ಆಯೋಜಿಸಿದ್ದಾರೆ. ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 25ರವರೆಗೆ ನಡೆಯಲಿರುವ ಈ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಟಿ ಶುಭಾ ಪೂಂಜಾ ಹಾಗೂ ನಟ ನಿರಂಜನ ಶೆಟ್ಟಿ ಉದ್ಘಾಟಿಸಿದರು.

ಮಾರ್ಕೆಟ್ ಉದ್ಘಾಟನೆ ಮಾಡಿದ ಶುಭಾ ಪೂಂಜಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಳದಿ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದ ನಟ ಶುಭಾ ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿದ್ದಾರೆ.
ಈ ಪ್ರದರ್ಶನದ ಕುರಿತು ಮಾತನಾಡಿದ ನಟಿ ಶುಭಾ ಪೂಂಜಾ, 'ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗಿನ ಕಲಾವಿದರ ಕೈಯಲ್ಲಿ ಅರಳಿದ ಕಲಾಕೃತಿ, ಆಭರಣ,ಉಡುಪುಗಳು ಇಲ್ಲಿವೆ. ನವರಾತ್ರಿಯ ವಿಶೇಷವಾಗಿ ಈ ಪ್ರದರ್ಶನ 10 ದಿನಗಳ ಕಾಲ ನಡೆಯಲಿದೆ. ಎಲ್ಲವೂ ಒಂದಕ್ಕಿಂತ ಒಂದು ಚೆಂದವಿದೆ' ಎಂದು ಹೇಳಿದರು.
ಹಬ್ಬದ ಹಾಗಿದೆ ಎಂದ ಶುಭಾ ಪೂಂಜಾ, 'ಮನೆಮಂದಿಯೆಲ್ಲರಿಗೂ ಇಷ್ಟವಾಗುವ ವಸ್ತುಗಳು ಇಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಿದೆ. ನನಗೆ ಇಲ್ಲಿನ ಎಲ್ಲಾ ವಸ್ತುಗಳು ಇಷ್ಟವಾಗಿದೆ. ನೋಡುವುದಕ್ಕೆ ಕಣ್ಣಿಗೆ ಹಬ್ಬದ ಹಾಗೆ ಇದೆ' ಎಂದು ತಮ್ಮ ಖುಷಿ ವ್ಯಕ್ತಪಡಿಸಿದರು .
ಅಂದಹಾಗೆ ಈ ಮಾರ್ಕೆಟ್ ಸೆಪ್ಟಂಬರ್ 16 ರಿಂದ ಪ್ರಾರಂಭವಾಗಿದೆ ಇನ್ನು 10 ದಿನಗಳ ಕಾಲ ಇರಲಿದೆ. ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಅಲಂಕಾರಿಕ ವಸ್ತು, ವೈವಿದ್ಯಮಯ ಉಡುಪು, ಆಭರಣಗಳು ಇಲ್ಲಿ ಲಭ್ಯವಿದೆ.
ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.