- Home
- Entertainment
- Sandalwood
- Sapta Sagardache Ello ಚಿತ್ರ ನನ್ನ ಜೀವನವನ್ನು ಬದಲಾಯಿಸಿದೆ ಎಂದು ಹೇಳಬಲ್ಲೆ: ರುಕ್ಮಿಣಿ ವಸಂತ್
Sapta Sagardache Ello ಚಿತ್ರ ನನ್ನ ಜೀವನವನ್ನು ಬದಲಾಯಿಸಿದೆ ಎಂದು ಹೇಳಬಲ್ಲೆ: ರುಕ್ಮಿಣಿ ವಸಂತ್
ಸ್ಯಾಂಡಲ್‌ವುಡ್‌ನ ತಾರೆ ರುಕ್ಮಿಣಿ ವಸಂತ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಖುಷಿಯ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ಚಂದನವನದ ನಟಿ ರುಕ್ಮಿಣಿ ವಸಂತ್ ಕಳೆದ 2 ವಾರಗಳಿಂದ ನಾನು ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಕೆಲಸ ಮಾಡಿದ ನನ್ನ ಅನುಭವವನ್ನು ಹಂಚಿಕೊಳ್ಳಲು ಒಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ ಆದರೆ ಸರಿಯಾದ ಪದಗಳು ನನ್ನನ್ನು ತಪ್ಪಿಸುತ್ತವೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನಟಿ ರುಕ್ಮಿಣಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ನನ್ನ ಜೀವನವನ್ನು ಬದಲಾಯಿಸಿದೆ ಎಂದು ನಾನು ಹೇಳಬಲ್ಲೆ ಎಂದು ಹೇಳಿಕೊಂಡಿದ್ದಾರೆ. ಚಂದನವನದ ತಾರೆ ರುಕ್ಮಿಣಿಗೆ ಈಕೆ ಒಬ್ಬ ವ್ಯಕ್ತಿಯಾಗಿ ಮತ್ತು ಕಲಾವಿದನಾಗಿ ಇವರ ಬಗ್ಗೆ ಈಕೆಯ ಗ್ರಹಿಕೆಯನ್ನು ಬದಲಾಯಿಸಿದೆ ಮತ್ತು ಈ ಪ್ರೀತಿಯ ಶ್ರಮದ ಭಾಗವಾಗಿದ್ದಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಹೆಮ್ಮೆಪಡುತ್ತೇನೆ ಎಂದು ತಿಳಿಸಿದ್ದಾರೆ.
ಈ ನಟಿ ಇಡೀ ತಂಡಕ್ಕೆ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರವನ್ನು ವೀಕ್ಷಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ನಟಿ ರುಕ್ಮಿಣಿ ವಸಂತ್ ಮೊದಲು ನಟ-ನಿರ್ದೇಶಕ ಶ್ರೀನಿಯವರ ಬೀರ್‌ಬಲ್ ಸಿನಿಮಾದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ರುಕ್ಮಿಣಿ ವಸಂತ್ ಗೋಲ್ಡನ್ ಸಾರ್ ಗಣೇಶ್ ಜೊತೆಯಲ್ಲಿ ನಟಿಸಿದ ಬಾನದಾರಿಯಲ್ಲಿ ಸಿನಿಮಾ ಸಹ ಇದೇ ವರ್ಷ ತೆರೆಕಂಡಿದೆ. ಕನ್ನಡ ಚಿತ್ರರಂಗದ ಸುಂದರಿ ರುಕ್ಮಿಣಿ ಭಗೀರ ಹಾಗೂ ಭೈರತಿ ರಣಗಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ರುಕ್ಮಿಣಿ ವಸಂತ್ ಟಾಲಿವುಡ್‌ಗೆ ಹಾರುತ್ತಾರೆ ಅನ್ನುವ ಗಾಳಿ ಸುದ್ದಿಯಿದೆ. ಇನ್ನೇನು ಕೆಲವೇ ದಿನಗಳಲ್ಲಿ ರುಕ್ಮಿಣಿ ವಸಂತ್ ತೆಲುಗು ಸಿನಿಮಾ ಬರುತ್ತದೆ ಅನ್ನುವ ಸುದ್ದಿನೂ ಹರಿದಾಡುತ್ತಿದೆ. ಆದರೆ ಇಲ್ಲಿವರೆಗೂ ರುಕ್ಮಿಣಿ ವಸಂತ್ ಈ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ.
ಶ್ರೀಮುರಳಿ ಅಭಿನಯದ ಬಘೀರ ಚಿತ್ರದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾಗೆ ಸಂಬಂಧಿಸಿದ ಬೇರೆ ವಿಚಾರ ಇನ್ನೂ ಎಲ್ಲೂ ಏನೂ ರಿವೀಲ್ ಆಗಿಲ್ಲ. ಆದರೆ ಚಿತ್ರದ ಒಂದೇ ಒಂದು ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರುಕ್ಮಿಣಿ ವಸಂತ್ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಾಗಿದೆ. ಕನ್ನಡ ಸಿನಿಮಾಗಳ ಕೆಲಸದ ಮಧ್ಯೆ ತಮಿಳು ಸಿನಿಮಾವನ್ನ ಕೂಡ ಒಪ್ಪಿಕೊಂಡಿದ್ದಾರೆ. ತಮಿಳು ನಟ ವಿಜಯ್ ಸೇತುಪತಿ ಜೊತೆಗೆ ಶೂಟಿಂಗ್ ಕೂಡ ಮುಗಿಸಿದ್ದಾರೆ.