- Home
- Entertainment
- Sandalwood
- ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಆಹ್ವಾನ ಪತ್ರಿಕೆ ಕೈಸೇರಿತು! ಇನ್ನೇನಿದ್ರೂ ಓಲಗ ಊದೋದಷ್ಟೇ!
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಆಹ್ವಾನ ಪತ್ರಿಕೆ ಕೈಸೇರಿತು! ಇನ್ನೇನಿದ್ರೂ ಓಲಗ ಊದೋದಷ್ಟೇ!
Rashmika mandanna: ವರ್ಷಗಳಿಂದ ನಟಿ ರಶ್ಮಿಕಾ, ನಟ ವಿಜಯ ದೇವರಕೊಂಡ ಅವರು ಮದುವೆ ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ಎರಡು ತಿಂಗಳಿಂದ ಈ ಜೋಡಿ ಮದುವೆ ಬಗ್ಗೆ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲದೆ ಇವರ ಮದುವೆ ತಯಾರಿಗೆಂದು ಮಾಡಿದ ಮಂಟಪದ ವಿಡಿಯೋ ಕೂಡ ವೈರಲ್ ಆಗಿತ್ತು.

ಯಾವಾಗ ಮದುವೆ?
ಇದೇ ತಿಂಗಳ ಫೆಬ್ರವರಿ 26 ರಂದು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ನಡೆಯಲಿದೆಯಂತೆ. ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮದುವೆ ಆಹ್ವಾನ ಪತ್ರಿಕೆ ರಿವೀಲ್ ಆಗಿದೆ.
ವೈರಲ್ ಆಗ್ತಿದೆ
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆಮಂತ್ರಣ ಪತ್ರಿಕೆ ಅನ್ನೋ ಫೋಟೋ ವೈರಲ್ ಆಗುತ್ತಿದೆ.
ನಿಶ್ಚಿತಾರ್ಥ ಆಗಿದೆ
ನಟಿ ರಶ್ಮಿಕಾ ವಿಜಯ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.
ಆಹ್ವಾನ ಪತ್ರಿಕೆಯಲ್ಲಿ ಏನಿದೆ?
ನಿಮ್ಮೊಂದಿಗೆ ಒಂದು ವಿಶೇಷವಾದ ಸುದ್ದಿಯನ್ನು ಹಂಚಿಕೊಳ್ಳಲು, ನಮ್ಮ ಜೀವನದ ಈ ಮಹತ್ವದ ಕ್ಷಣಕ್ಕೆ ನಿಮ್ಮನ್ನು ಆಹ್ವಾನಿಸಲು ನಮಗೆ ಖುಷಿಯಾಗುತ್ತಿದೆ. ಕುಟುಂಬದವರ ಪ್ರೀತಿ, ಆಶೀರ್ವಾದದೊಂದಿಗೆ, ರಶ್ಮಿಕಾ ಹಾಗೂ ನಾನು ಫೆಬ್ರವರಿ 26, 2026 ರಂದು ಅತ್ಯಂತ ಆಪ್ತರ ಸಮ್ಮುಖದಲ್ಲಿ ಮದುವೆ ಆಗಲಿದ್ದೇವೆ.
ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಆರಂಭಿಸುವಾಗ, ನಮ್ಮ ಈ ಜರ್ನಿಯ ಭಾಗ ಆಗಿರುವ ನಿಮ್ಮ ಉಪಸ್ಥಿತಿ ನಮಗೆ ತುಂಬ ಮುಖ್ಯ. ನಿಮ್ಮ ಹಾರೈಕೆ, ಆಶೀರ್ವಾದಗಳು ಈ ಸಂಭ್ರಮವನ್ನು ಮತ್ತಷ್ಟು ವಿಶೇಷವನ್ನಾಗಿಸಲಿವೆ.
ಮಾರ್ಚ್ 4ರಂದು ಆರತಕ್ಷತೆಗೆ ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.
ದಿನಾಂಕ: ಬುಧವಾರ, ಮಾರ್ಚ್ 04, 2026 ಸಮಯ: ಸಂಜೆ 7:00 ಗಂಟೆಯಿಂದ
ಸ್ಥಳ: ತಾಜ್ ಕೃಷ್ಣ ಬಂಜಾರಾ ಹಿಲ್ಸ್, ಹೈದರಾಬಾದ್
ನಿಮ್ಮ ಆಗಮನದ ನಿರೀಕ್ಷೆಯಲ್ಲಿ,
ಸಪ್ರೇಮ ವಂದನೆಗಳೊಂದಿಗೆ,
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

