ಗಂಭೀರವಾಗಿ ತುಪ್ಪದ ಬೆಡಗಿ ರಾಗಿಣಿ ಪುಸ್ತಕ ಓದಿದ್ಯಾಕೆ?: ಪೋಟೋಸ್ ನೋಡಿದ ನೆಟ್ಟಿಗರು ಹೀಗಾ ಅನ್ನೋದು!
ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ಅಂತನೇ ಫೇಮಸ್ ಆಗಿರುವ ರಾಗಿಣಿ ದ್ವಿವೇದಿ ಸಿನಿಮಾಗಳಲ್ಲಿ ಗ್ಲಾಮರಸ್ ಲುಕ್ನಲ್ಲೂ ಕಂಡಿದ್ದಾರೆ. ಹಾಗೇ ಟ್ರೆಡಿಷನಲ್ ಲುಕ್ ಕೊಟ್ಟಿದ್ದಾರೆ. ಆಗಾಗ ಟೈಮ್ ಸಿಕ್ಕಾಗಲೆಲ್ಲ ಫೋಟೊಶೂಟ್ ಮಾಡಿಸುತ್ತಲೇ ಇರುತ್ತಾರೆ.
ರಾಗಿಣಿ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಅದು ಕೇವಲ ಒಂದೇ ಭಾಷೆಯ ಸಿನಿಮಾ ಅಲ್ಲ. ಏಕಕಾಲಕ್ಕೆ ದ್ವಿಭಾಷೆಯ ಸಿನಿಮಾಗಳಿಗೆ ಸೈ ಎನ್ನುತ್ತಿದ್ದಾರೆ. ಇದೀಗ ರಾಗಿಣಿ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
ಹೌದು! ರಾಗಿಣಿ ದ್ವಿವೇದಿ ಸೀರಿಯೆಸ್ ಆಗಿಯೇ ಪುಸ್ತಕ ಓದಿದ್ದಾರೆ. ಆ ಪುಸ್ತಕ ಓದುವಿಕೆಯಿಂದ ಸಿಗೋ ಆನಂದದ ಅನುಭವನ್ನ ಕೂಡ ಎಂಜಾಯ್ ಮಾಡಿದ್ದಾರೆ. ಆದರೆ ಪುಸ್ತಕ ಓದುವಾಗ ಕೊಟ್ಟ ಪೋಸ್ ತುಂಬಾನೆ ಗ್ಲಾಮರಸ್ ಆಗಿಯೇ ಇದೆ.
ರಾಗಿಣಿ ದ್ವಿವೇದಿ ಓದುತ್ತಿರೋ ಕಾದಂಬರಿ ಹೆಸರು ದಿ ಬರ್ನ್ ಔಟ್ ಅಂತಲೇ ಇದೆ. ಕಾದಂಬರಿಗಾರ್ತಿ ಸೋಫಿ ಕಿನ್ಸೆಲ್ಲಾ ಇದನ್ನ ಬರೆದಿದ್ದಾರೆ. ಇದನ್ನ ಓದಿರೋ ರಾಗಿಣಿ ದ್ವಿವೇದಿ ತುಂಬಾನೆ ಸಂತೋಷಪಟ್ಟಿದ್ದಾರೆ. ಒಳ್ಳೆ ಪುಸ್ತಕ ಓದಿದ ಖುಷಿ ಅಂತಲೂ ಬರೆದುಕೊಂಡಿದ್ದಾರೆ.
ಅಂದಹಾಗೆ ರಾಗಿಣಿ ಹೊಸ ಸಿನಿಮಾದ ಫಸ್ಟ್ ಲುಕ್ ನಡುವ ವೇಳೆ ತೆಗೆದ ಫೋಟೊಗಳಿವು. ಈ ಹೊಸ ಸಿನಿಮಾ ಕೂಡ ಎರಡು ಭಾಷೆಯಲ್ಲಿ ರಿಲೀಸ್ ಆಗಲಿದೆ. ಸದ್ಯ ಈ ಸಿನಿಮಾಗೆ ಹೆಸರು ಇಟ್ಟಿಲ್ಲ. ಆದರೆ, ಪ್ರೀ ಪ್ರೊಡಕ್ಷನ್ ಕೆಲಸ ಆರಂಭ ಆಗಿದೆ.
'ದಿ ಬರ್ನ್ ಔಟ್' ಬುಕ್ ಹಿಡಿದು ಪೋಸ್ ಕೊಟ್ಟಿರುವ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ನೀವು ಯಾಕೆ ಕ್ಯೂಟ್ ಜಾಸ್ತಿ, ಮುದ್ದಾದ ಬೊಂಬೆ ರಾಗಿಣಿ ದೃಷ್ಟಿ ತೆಗೆಸಿಕೊಳ್ಳಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ರಾಗಿಣಿ ದ್ವಿವೇದಿ ತಮ್ಮ ಅಭಿಮಾನಿಗಳಿಗಾಗಿ ಆಗಾಗ ಹೊಸ ಫೋಟೊಶೂಟ್ಗಳನ್ನು ಮಾಡಿಸುತ್ತಲೇ ಇರುತ್ತಾರೆ. ಅವುಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಕೂಡ ತಿಳಿ ನೀಲಿ ಬಣ್ಣ ಡ್ರೆಸ್ನಲ್ಲಿ ರಾಗಿಣಿ ಮಿಂಚಿದ್ದಾರೆ.