- Home
- Entertainment
- Sandalwood
- ಪೀಳಿಗೆಯನ್ನು ರೂಪಿಸೋ ಮಹಿಳೆಯರಿಗೆ Happy Mothers Day- 'ಸಂತೂರ್ ಮಮ್ಮಿ' ರಾಧಿಕಾ ಪಂಡಿತ್
ಪೀಳಿಗೆಯನ್ನು ರೂಪಿಸೋ ಮಹಿಳೆಯರಿಗೆ Happy Mothers Day- 'ಸಂತೂರ್ ಮಮ್ಮಿ' ರಾಧಿಕಾ ಪಂಡಿತ್
ಕನ್ನಡದ ಸಿನಿಮಾಗಳಲ್ಲಿ ಒಂದು ದಶಕಗಳ ಕಾಲ ನಾಯಕಿಯಾಗಿ ಮೆರೆದ ನಟಿ ರಾಧಿಕಾ ಪಂಡಿತ್ ಈಗ ಎರಡು ಮಕ್ಕಳ ತಾಯಿ. ಈಗ ಅವರು ಇಬ್ಬರು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಈಗ ಅವರು ತಾಯಂದಿರ ದಿನಕ್ಕೆ ಶುಭಾಶಯಗಳನ್ನು ಹೇಳಿದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು ʼತಾಯಂದಿರ ದಿನʼದಂದು ಮಕ್ಕಳು, ತಾಯಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ವಿಶೇಷವಾದ ಬರಹವೊಂದನ್ನು ಕೂಡ ಬರೆದುಕೊಂಡಿದ್ದಾರೆ.
“ಅವಳ ಕೈ ಹಿಡಿದು, ಕೈ ಹಿಡಿಯುವ ಕೈಯಾಗಿ ಬದಲಾಗುವುದು - ತಾಯ್ತನವು ಹೃದಯದಿಂದ ಹೃದಯಕ್ಕೆ ಹಾದುಹೋಗುವ ಕತೆ. ಪಾಠಗಳಿಗೆ, ಪ್ರೀತಿಗೆ ಮತ್ತು ಪರಂಪರೆಗೆ ಕೃತಜ್ಞತೆ. ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಮಾತೃದಿನದ ಶುಭಾಶಯಗಳು” ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರ ಮಕ್ಕಳು ಕೂಡ ಅವರ ತಾಯಂದಿರ ಜೊತೆ ಹೆಚ್ಚು ಕನೆಕ್ಟ್ ಆಗಿದ್ದಾರೆ. ರಾಧಿಕಾ ಪಂಡಿತ್ ಸಹೋದರ ಗೌರವ ವಿದೇಶದಲ್ಲಿ ನೆಲೆಸಿದ್ದಾರೆ. ಹೀಗಾಗಿ ರಾಧಿಕಾ ಅವರ ಮಕ್ಕಳು ಅಜ್ಜ-ಅಜ್ಜಿ ಆರೈಕೆಯಲ್ಲಿ ಬೆಳೆದಿದ್ದಾರೆ.
ನಟ ಯಶ್ ತಾಯಿ ಪುಷ್ಪ ಅವರು ಈ ಹಿಂದೆ ನೀಡಿದ ಸಂದರ್ಶನದಲ್ಲಿ “ಯಶ್ ಮಕ್ಕಳು ರಾಧಿಕಾ ತಂದೆ-ತಾಯಿ ಜೊತೆ ಬೆಳೆದರು. ನನಗೆ ಅಷ್ಟು ಕನೆಕ್ಟ್ ಆಗಿಲ್ಲ. ನನ್ನ ಮಗಳ ಮಕ್ಕಳು ನನಗೆ ತುಂಬ ಕನೆಕ್ಟ್ ಆಗಿವೆ” ಎಂದು ಹೇಳಿದ್ದರು.
ನಟಿ ರಾಧಿಕಾ ಪಂಡಿತ್ ಅವರು ಯಾವುದೇ ದೇವಸ್ಥಾನಕ್ಕೆ ಹೋಗಲಿ, ಪಾರ್ಟಿ ಮಾಡಲಿ ಅಲ್ಲಿ ಅವರ ತಂದೆ-ತಾಯಿ ಹಾಜರಿ ಇದ್ದೇ ಇರುತ್ತದೆ. ಒಂದು ವರ್ಷದ ಅಂತರದಲ್ಲಿ ಮಗ-ಮಗಳು ಜನಿಸಿದ್ದರು. ಹೀಗಾಗಿ ಪುಟಾಣಿ ಮಕ್ಕಳನ್ನು ನೋಡಿಕೊಳ್ಳೋದು ರಾಧಿಕಾಗೆ ಸುಲಭ ಆಗಿರಲಿಲ್ಲ. ಹೀಗಾಗಿ ಅವರ ತಂದೆ-ತಾಯಿ ಸಾಥ್ ನೀಡಿದ್ದರು.
ನಟಿ ರಾಧಿಕಾ ಪಂಡಿತ್ ಅವರು ದಿನದಿಂದ ದಿನಕ್ಕೆ ನೋಡಲು ಸುಂದರವಾಗಿ ಕಾಣುತ್ತಿದ್ದಾರೆ. ಇತ್ತೀಚೆಗೆ ಅವರು ಸ್ವಲ್ಪ ತೂಕ ಕೂಡ ಇಳಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಫ್ಯಾನ್ಸ್ ʼಸಂತೂರ್ ಮಮ್ಮಿʼ ಎಂದು ಕರೆಯುತ್ತಿದ್ದಾರೆ.