ಬೆಂಗಳೂರಲ್ಲಿ ಪುಟ್ಟ ಗೂಡು ಕಟ್ಟಿದ ನಟಿ ಅಕ್ಷತಾ ಪಾಂಡವಪುರ: ಗೃಹಪ್ರವೇಶದ ಫೋಟೊಗಳು
Akshatha Pandavapura: ಕನ್ನಡ ಸಿನಿಮಾ ನಟಿ, ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಹಾಗೂ ರಂಗಭೂಮಿ ಕಲಾವಿದೆಯಾಗಿರುವ ಅಕ್ಷತಾ ಪಾಂಡವಪುರ ಬೆಂಗಳೂರಿನಲ್ಲಿ ಪುಟ್ಟ ಗೂಡೊಂದು ಕಟ್ಟಿದ್ದಾರೆ. ಅಂದರೆ ಹೊಸ ಮನೆಯ ಖರೀದಿಸಿದ್ದು, ಇತ್ತೀಚೆಗೆ ಗೃಹಪ್ರವೇಶ ಮಾಡಿದ್ದರು.

ಅಕ್ಷತಾ ಪಾಂಡವಪುರ
ಕನ್ನಡ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ, ರಂಗಭೂಮಿ ಕಲಾವಿದೆ ಹಾಗೂ ಕನ್ನಡ ಸಿನಿಮಾ ನಟಿ, ರಾಜ್ಯಪ್ರಶಸ್ತಿ ವಿಜೇತ ಕಲಾವಿದೆ ಅಕ್ಷತಾ ಪಾಂಡವಪುರ ಬೆಂಗಳೂರಿನಲ್ಲಿ ಹೊಸ ಮನೆ ಖರೀದಿಸಿದ್ದು, ಇತ್ತೀಚೆಗೆ ಗೃಹಪ್ರವೇಶ ಮಾಡಿರುವ ಅಕ್ಷತಾ, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲೊಂದು ಪುಟ್ಟ ಗೂಡು
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ಅಕ್ಷತಾ ಬೆಂಗಳೂರಿನಲ್ಲೊಂದು ಪುಟ್ಟ ಗೂಡು...! ಹೊಸ ಮನೆ ಪ್ರವೇಶ... ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಹಾಲುಕ್ಕಿಸುವ ಫೋಟೊ ಹಾಗೂ ಗೃಹಪ್ರವೇಶದ ಇನ್ನಿತರ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.
ರಂಗಭೂಮಿ ಕಲಾವಿದೆ ಅಕ್ಷತಾ
ಅಕ್ಷತಾ, ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವವರು. ನೀನಾಸಂನಲ್ಲಿ ತರಬೇತಿ ಪಡೆದಿರುವ ಅಕ್ಷತಾ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲೂ ಅಭ್ಯಾಸ ಮಾಡಿರುವ ಅಕ್ಷತಾ ಕಿರುತೆರೆ ಮತ್ತು ಬೆಳ್ಳಿತೆರೆ ಎರಡೂ ಕಡೆ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಗಳ ಮೂಲಕ ಗುರುತಿಸಿಕೊಂಡ ನಟಿ ಅಕ್ಷತಾ.
ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ
‘ಬಿಗ್ ಬಾಸ್ ಕನ್ನಡ ಸೀಸನ್ 6’ ಸ್ಪರ್ಧಿಯಾಗಿದ್ದ ನಟಿ ಅಕ್ಷತಾ ಪಾಂಡವಪುರ, ಆ ಸಂದರ್ಭದಲ್ಲಿ ರಾಕೇಶ್ ಜೊತೆಗಿನ ಒಡನಾಟದಿಂದಾಗಿ ಭಾರಿ ಚರ್ಚೆಯಲ್ಲಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಜಗಳ, ನೇರವಾದ ಮಾತುಗಳಿಂದಲೇ ಅಕ್ಷತಾ ಸುದ್ದಿಯಲ್ಲಿದ್ದರು.
ಅಕ್ಷತಾ ನಟಿಸಿದ ಸಿನಿಮಾಗಳು
ಹೆಚ್ಚಾಗಿ ಕಲಾತ್ಮಕ ಸಿನಿಮಾಗಳಲ್ಲಿ ನಟಿಸುವ ಅಕ್ಷತಾ ಅಭಿನಯಿಸಿದ ‘ಕೋಳಿ ಎಸ್ರು’ ಸಿನಿಮಾ ನಟನೆಗೆ ‘ಫಿಲ್ಮ್ ಫೇರ್ ಅವಾರ್ಡ್’ ಹಾಗೂ ‘ಪಿಂಕಿ ಎಲ್ಲಿ’ ಎಂಬ ಸಿನಿಮಾಗೆ ‘ರಾಜ್ಯಪ್ರಶಸ್ತಿ’ ಕೂಡ ಪಡೆದಿದ್ದಾರೆ. ಅಷ್ಟೇ ಅಲ್ಲ ಇವರು ನಟಿಸಿದ ‘ಪಲ್ಲಟ’ ಎಂಬ ಸಿನಿಮಾಗೂ ಕೂಡ ರಾಜ್ಯ ಪ್ರಶಸ್ತಿ ಬಂದಿದೆ.
ನಿರೂಪಣೆಯಲ್ಲೂ ಎತ್ತಿದ ಕೈ
ಅಕ್ಷತಾ ಇದೀಗ ನಟನೆಗೆ ಸೀಮಿತವಾಗಿರದೇ ನಿರೂಪಣೆ ಕೂಡ ಮಾಡುತ್ತಿದ್ದಾರೆ. ನಾಟಿ ಬಾತು-ನಟಿ ಮಾತು ಎಂಬ ಸಂದರ್ಶನ ಕಾರ್ಯಕ್ರಮದ ನಡೆಸಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ತಮ್ಮದೇ ಆದ ಪುಟ್ಟ ಗೂಡನ್ನು ಕಟ್ಟಿಕೊಳ್ಳುವ ಮೂಲಕ ಕನಸು ನನಸು ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

