- Home
- Entertainment
- Sandalwood
- 42ರ ರಕ್ಷಿತ್‌ಗೆ ಕಂಕಣ ಬಲ ಕೂಡಿಬರೋದ್ಯಾವಾಗ? ನಟ್ಟ ನಡುರಾತ್ರಿ ಪಂಜುರ್ಲಿ ದೈವ ಹೇಳಿದ್ದೇನು?
42ರ ರಕ್ಷಿತ್‌ಗೆ ಕಂಕಣ ಬಲ ಕೂಡಿಬರೋದ್ಯಾವಾಗ? ನಟ್ಟ ನಡುರಾತ್ರಿ ಪಂಜುರ್ಲಿ ದೈವ ಹೇಳಿದ್ದೇನು?
ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಕುಟುಂಬಸ್ಥರ ನೇಮೋತ್ಸವದಲ್ಲಿ ಭಾಗಿಯಾಗಿ ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. 42ರ ಹರೆಯದ ರಕ್ಷಿತ್ ಮದುವೆ ಯಾವಾಗ, ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗಳು ಎದುರಾಗಿವೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದೆಲ್ಲಿ ಕಾಣೆಯಾದ್ರು ಅಂತ ಫ್ಯಾನ್ಸ್ ಹುಡುಕಾಡ್ತಾ ಇರೋ ಹೊತ್ತಲ್ಲೇ ರಕ್ಷಿತ್ ಉಡುಪಿಯಲ್ಲಿ ಪ್ರತ್ಯಕ್ಷ ಆಗಿದ್ದಾರೆ. ತಂದೆ, ತಾಯಿ ಜೊತೆಗೆ ಅಲೆವೂರು ದೊಡ್ಡಮನೆ ಕುಟುಂಬಸ್ಥರ ಹರಕೆಯ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ನಟ್ಟ ನಡುರಾತ್ರಿ ನಡೆದ ನೇಮೋತ್ಸವದಲ್ಲಿ ಪಂಜುರ್ಲಿ ದೈವ ಏನು ಹೇಳಿತು? ರಕ್ಷಿತ್ ಬದುಕಲ್ಲಿ ಏನ್ ನಡೀತಾ ಇದೆ. ಏನು ನಡೆಯಲಿದೆ? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಸಿಂಪಲ್ ಸ್ಟಾರ್ ರಕ್ಷಿತ್ ಅದೆಲ್ಲಿ ಕಾಣೆಯಾದ್ರು ಅಂತ ಫ್ಯಾನ್ಸ್ ಕಳೆದ ಕೆಲವು ದಿನಗಳಿಂದ ಹುಡುಕಾಡ್ತಾನೇ ಇದ್ರು. ಯಾಕಂದ್ರೆ ರಕ್ಷಿತ್ ಶೆಟ್ಟಿ ಕೊನೆಯ ಸಿನಿಮಾ ತೆರೆಗೆ ಬಂದು ಎರಡು ವರ್ಷಗಳಾಯ್ತು. ಈಗಲೂ ರಕ್ಷಿತ್ ಹೊಸ ಚಿತ್ರ ಅನೌನ್ಸ್ ಮಾಡಿಲ್ಲ. ಏನ್ ಮಾಡ್ತಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಈಗ ರಕ್ಷಿತ್ ಎಲ್ಲಿದ್ದಾರಪ್ಪಾ ಅಂತ ಫ್ಯಾನ್ಸ್ ಹುಡುಕುವ ಹೊತ್ತಲ್ಲೇ ಶೆಟ್ರು ಉಡುಪಿಯಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಉಡುಪಿಯ ಅಲೆವೂರು ದೊಡ್ಡಮನೆ ಕುಟುಂಬಸ್ಥರ ಹರಕೆಯ ನೇಮೋತ್ಸವದಲ್ಲಿ ತಂದೆ, ತಾಯಿ ಜೊತೆ ಭಾಗಿಯಾಗಿದ್ದಾರೆ. ತಮ್ಮ ಕುಟುಂಬಸ್ಥರ ಮನೆಯಲ್ಲಿ ನಡೆವ ದೈವ ಸಮಾರಾಧನೆಗಳಿಗೆ ರಕ್ಷಿತ್ ತಪ್ಪದೇ ಹಾಜರಾಗ್ತಾರೆ. ಈ ಸಾರಿಯೂ ನಡುರಾತ್ರಿ ನಡೆದ ನೇಮೋತ್ಸವದಲ್ಲಿ ಭಾಗಿಯಾಗಿ ಪಂಜುರ್ಲಿ ದೈವದ ಆಶಿರ್ವಾದ ಪಡೆದುಕೊಂಡಿದ್ದಾರೆ.
42ರ ರಕ್ಷಿತ್‌ಗೆ ಕಂಕಣ ಬಲ ಕೂಡಿಬರೋದ್ಯಾವಾಗ?
ರಕ್ಷಿತ್ ಗೀಗ 42ರ ಹರೆಯ. ಸಹಜವಾಗೇ ರಕ್ಷಿತ್ ತಂದೆ ತಾಯಿ ಬೇಗ ಮಗ ಮದುವೆಯಾಗಲಿ, ಲೈಪ್ ನಲ್ಲಿ ಸೆಟಲ್ ಆಗಲಿ ಅಂತ ಬಯಸ್ತಾ ಇದ್ದಾರೆ. ಆದ್ರೆ ಅದ್ಯಾಕೋ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆದರೂ ರಕ್ಷಿತ್‌ಗೆ ಕಂಕಣ ಬಲ ಮಾತ್ರ ಕೂಡಿ ಬರ್ತಾ ಇಲ್ಲ. ಅಸಲಿಗೆ ರಕ್ಷಿತ್ ಸಿನಿಇಂಡಸ್ಟ್ರಿಯಲ್ಲಿ ತುಂಬಾನೇ ಕಷ್ಟ ಪಟ್ಟು ಸ್ಟಾರ್ ಪಟ್ಟ ಪಡೆದುಕೊಂಡವರು. ಅದ್ರಲ್ಲೂ 2016ರಲ್ಲಿ ಬಂದ ಕಿರಿಕ್ ಪಾರ್ಟಿ ಸಿನಿಮಾ ರಕ್ಷಿತ್‌ಗೆ ದೊಡ್ಡ ಯಶಸ್ಸನ್ನ ತಂದುಕೊಟ್ಟಿತು. ಅದೇ ಟೈಂನಲ್ಲಿ ಅದೇ ಸಿನಿಮಾದ ನಾಯಕಿ ಜೊತೆಗೆ ಮದುವೆಯಾಗಬೇಕು ಅಂತ ರಕ್ಷಿತ್ ಬಯಸಿದ್ರು.
ಚಿತ್ರಜೀವನ ಹಿಟ್ ಆಯಿತು. ಮದುವೆನೂ ಸೆಟ್ ಆಗಲಿ ಅಂತ ರಕ್ಷಿತ್ ಒಂದು ಹೆಜ್ಜೆ ಮುಂದೆ ಇಟ್ಟಿದ್ರು. ಕುಟುಂಬಸ್ಥರ ಸಮ್ಮುಖದಲ್ಲಿ ರಕ್ಷಿತ್- ರಶ್ಮಿಕಾ ಅದ್ದೂರಿಯಾಗಿ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ರು. ಆದ್ರೆ ಅದ್ಯಾಕೋ ಆ ಸಂಬಂಧ ಮುರಿದುಬಿತ್ತು. ಮತ್ತೆ ರಕ್ಷಿತ್ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಬ್ಯುಸಿಯಾದ್ರು. ಈಗ ರಕ್ಷಿತ್‌ಗೆ 42 ವರ್ಷ ವಯಸ್ಸು. ಎಲ್ಲರೂ ರಕ್ಷಿತ್‌ಗೆ ಮದುವೆ ಯಾವಾಗ ಅಂತ ಪ್ರಶ್ನೆ ಕೇಳ್ತಾನೇ ಇರ್ತಾರೆ. ರಕ್ಷಿತ್ ಮಾತ್ರ ಎಲ್ಲಾ ದೈವದ ಇಚ್ಚೆ ಅಂತ ನಕ್ಕು ಸುಮ್ಮನಾಗ್ತಾರೆ.
ಎಲ್ಲಿಗ್ ಬಂತು ರಿಷರ್ಡ್ ಆಂಟನಿ? ಮುಂದ್ಯಾವ ಸಿನಿಮಾ?
ರಕ್ಷಿತ್ ಸಿನಿಮಾಗಳ ಬಗ್ಗೆನೂ ಸಾಕಷ್ಟು ಪ್ರಶ್ನೆಗಳಿವೆ. ಮೂರು ವರ್ಷಗಳ ಹಿಂದೆಯೇ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಅನ್ನೋ ಸಿನಿಮಾ ಅನೌನ್ಸ್ ಮಾಡಿದ್ರು. ಉಳಿದವರು ಕಂಡಂತೆ ಮೂವಿಯ ಪ್ರೀಕ್ವೆಲ್ ಆದ ಈ ಸಿನಿಮಾವನ್ನ ಖುದ್ದು ನಿರ್ದೇಶನ ಮಾಡಲು ರಕ್ಷಿತ್ ಸಜ್ಜಾಗಿದ್ರು. ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಇದನ್ನ ನಿರ್ಮಾಣ ಮಾಡೋದಾಗಿ ಅನೌನ್ಸ್ ಆಗಿತ್ತು. ಆದ್ರೆ ಅನೌನ್ಸ್ ಆಗಿದ್ದೇ ಕೊನೆ. ಮುಂದಿನ ಅಪ್ಡೇಟ್ ಸಿಗಲೇ ಇಲ್ಲ. ಇದೂವರೆಗೂ ಈ ಸಿನಿಮಾ ಸೆಟ್ಟೇರಿಲ್ಲ. ಈ ನಡುವೆ ನಿರ್ದೇಶನದತ್ತ ಗಮನ ಹರಿಸ್ತಿನಿ ಅಂತ ನಟನೆಯನ್ನ ರಕ್ಷಿತ್ ಬಿಟ್ಟೇ ಬಿಟ್ಟಿದ್ದಾರೆ. ಅಲ್ಲಿಗೆ ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ರಕ್ಷಿತ್‌ನ ತೆರೆ ಮೇಲೆ ನೋಡಿದ್ದೇ ಕೊನೆ. ಮತ್ತೆ ಯಾವಾಗ ಇವರನ್ನ ತೆರೆ ಮೇಲೆ ನೋಡ್ತಿವೋ ದೈವಕ್ಕೆ ಗೊತ್ತು ಅಂತ ಫ್ಯಾನ್ಸ್ ಕೇಳ್ತಾ ಇದ್ದಾರೆ.
ಒಟ್ನಲ್ಲಿ ಸಿಂಪಲ್ ಸ್ಟಾರ್ ಲೈಫ್ ಸಿಂಪಲ್ ಅಂತೂ ಅಲ್ಲ. ರಕ್ಷಿತ್ ಶೆಟ್ಟಿ ಜೀವನ ಸಿಂಪಲ್ ಎನ್ನುವುದು ಹೌದಾದರೂ, ಅದರೊಳಗೆ ಹಲವಾರು ಗೊಂದಲಗಳು, ನಿರ್ಣಯಗಳು, ನಿರೀಕ್ಷೆಗಳಿವೆ. ಹೀಗಿರುವಾಗ ಪಂಜುರ್ಲಿ ದೈವ ಆಶೀರ್ವಾದ ಮಾಡಿ ಅಭಯ ನೀಡಿತಾ? ಪಂಜುರ್ಲಿ ದೈವ ನಡು ರಾತ್ರಿ ರಕ್ಷಿತ್‌ಗೆ ಏನು ಹೇಳಿತು..? ಅವರ ಮುಂದಿನ ಬದುಕು ಯಾವ ದಿಸೆಯತ್ತ ಸಾಗಲಿದೆ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಮುಂದಿನ ದಿನಗಳಲ್ಲಿ ಸಿಗಲಿದೆ.