ಪ್ರಕಾಶ್ ರೈ ಫೌಂಡೇಶನ್‌ಗೆ ಅಪ್ಪು ಎಕ್ಸ್‌ಪ್ರೆಸ್ ಹೆಸರಿನ ಲೋಗೋ!
ಬಹುಭಾಷಾ ನಟನ ಸಾಮಾಜಿಕ ಕಾರ್ಯಗಳಿಗೆ ಹೊಸ ವೇದಿಕೆ. ಪ್ಪು ಎಕ್ಸ್‌ಪ್ರೆಸ್ ಹೆಸರಿನ ಲೋಗೋ ಲಾಂಚ್.

ಪ್ರಕಾಶ್ ಸಾಮಾಜಿಕ ಕಾರ್ಯಗಳು
ನಟ ಪ್ರಕಾಶ್ ರೈ ಅವರು ಪುನೀತ್‌ರಾಜ್‌ಕುಮಾರ್ ನೆನಪಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಈಗಾಗಲೇ ತಮ್ಮ ಪ್ರಕಾಶ್ ರಾಜ್ ಫೌಂಡೇಶನ್‌ನಿಂದ ಅಪ್ಪು ಎಕ್ಸ್‌ಪ್ರೆಸ್ ಹೆಸರಿನ ಲೋಗೋ ಕೂಡ ಬಿಡುಗಡೆ ಮಾಡಿದ್ದಾರೆ.
ಪ್ರಕಾಶ್ ಹುಟ್ಟುಹಬ್ಬ
ತಮ್ಮ ಹುಟ್ಟು ಹಬ್ಬದ (ಮಾ.26) ಅಂಗವಾಗಿ ಅಪ್ಪು ಎಕ್ಸ್‌ಪ್ರೆಸ್ ಲೋಗೋ ಬಿಡುಗಡೆ ಮಾಡಲಾಗಿದೆ. ‘ನಟ ಪುನೀತ್‌ರಾಜ್‌ಕುಮಾರ್ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ನನಗೆ ತುಂಬಾ ಖುಷಿ ಮತ್ತು ಹೆಮ್ಮೆ ಆಗುತ್ತಿದೆ.
ಲೋಗೋದಲ್ಲಿ ಅಪ್ಪು
ನೆರವು, ಸಹಾಯಗಳ ರೂಪಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲಿದ್ದೇವೆ. ಆ ಬಗ್ಗೆ ಸಂಪೂರ್ಣವಾದ ವಿವರಣೆಗಳನ್ನು ಸದ್ಯದಲ್ಲೇ ಹೇಳಲಾಗುವುದು’ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಅಪ್ಪು ಎಕ್ಸ್‌ಪ್ರೆಸ್ ಹೆಸರಿನ ಲೋಗೋ
ಈಗಾಗಲೇ ನಟ ಪ್ರಕಾಶ್ ರೈ ಅವರು ತಮ್ಮ ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಹತ್ತಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಶಾಲೆ ಹಾಗೂ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ.
ಅಭಿಮಾನಿಗಳಿಂದ ಸಾಥ್
ಕರ್ನಾಟದಲ್ಲೂ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಈಗ ಅಪ್ಪು ಎಕ್ಸ್‌ಪ್ರೆಸ್ ಮೂಲಕ ಮತ್ತಷ್ಟುಸೇವಾ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಪ್ರಕಾಶ್ ರೈ ಅವರು ಮುಂದಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.