ರಾಯರಮಠದಲ್ಲಿ ಜಗ್ಗೇಶ್; ಪ್ರಮಾಣ ವಚನಕ್ಕೂ ಮುನ್ನ ದೇವರ ಆಶೀರ್ವಾದ ಪಡೆದ ನಟ
ಸ್ಯಾಂಡಲ್ ವುಡ್ ನಟ, ರಾಜಕಾರಣಿ ಜಗ್ಗೇಶ್ ತಮ್ಮ ನೆಚ್ಚಿನ ದೇವರ ದರ್ಶನ ಪಡೆದಿದ್ದಾರೆ. ಜಗ್ಗೇಶ್ ರಾಘವೇಂದ್ರ ಸ್ವಾಮಿಗಳ ಅಪಾರ ಭಕ್ತರು. ಆಗಾಗ ಮಂತ್ರಾಯಲದ ರಾಯರಮಠಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದೀಗ ದೆಹಲಿಯಲ್ಲಿ ರಾಯರ ಮಠಕ್ಕೆ ಭೇಟಿ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಟ ರಾಜಕಾರಣಿ ಜಗ್ಗೇಶ್ ತಮ್ಮ ನೆಚ್ಚಿನ ದೇವರ ದರ್ಶನ ಪಡೆದಿದ್ದಾರೆ. ಜಗ್ಗೇಶ್ ರಾಘವೇಂದ್ರ ಸ್ವಾಮಿಗಳ ಅಪಾರ ಭಕ್ತರು. ಆಗಾಗ ಮಂತ್ರಾಲಯದ ರಾಯರಮಠಕ್ಕೆ ಭೇಟಿ ನೀಡುತ್ತಿರುತ್ತಾರೆ.
ಪತ್ನಿ ಪರಿಮಳ ಜೊತೆ ಜಗ್ಗೇಶ್ ರಾಯರಮಠದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ ಬಾರಿ ಜಗ್ಗೇಶ್ ರಾಯರಮಠದಲ್ಲಿ ಕಾಣಿಸಿಕೊಂಡಿದ್ದು ದೆಹಲಿಯಲ್ಲಿ. ದೆಹಲಿಯ ರಾಯರ ಮಠದಲ್ಲಿ ಬೃಂದಾವನ ದರ್ಶನಪಡೆದಿದ್ದಾರೆ. ಈ ಫೋಟೋಗಳನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಅಂದಹಾಗೆ ಜಗ್ಗೇಶ್ ರಾಜ್ಯ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ದೇವರ ಆಶೀರ್ವಾದ ಪಡೆದಿದ್ದಾರೆ. ಜಗ್ಗೇಶ್ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ಇಂದು (ಜುಲೈ 8) ಪ್ರವಾಣ ವಚನ ಸ್ವೀಕರ ಮಾಡಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೂ ಮೊದಲು ಜಗ್ಗೇಶ್ ರಾಯರದರ್ಶನ ಮಾಡಿದ್ದಾರೆ. ಈ ಬಗ್ಗೆ ಜ್ಗಗೇಶ್ ಸಾಮಾಜಿಕ ಜಾಲತಾಣದಲ್ಲಿ, 'ದೆಹಲಿಯ ರಾಯರಮಠದಲ್ಲಿ ಬೃಂದಾವನ ದರ್ಶನ, ರಾಜ್ಯಸಭೆ ಪ್ರಮಾಣ ಸ್ವೀಕರಿಸುವ ಮುನ್ನ. ಹರಿ ಸರ್ವೋತ್ತಮ ವಾಯು ಜೀವೋತ್ತಮ.ಶುಭ ಶುಕ್ರವಾರ'ಎಂದು ಹೇಳಿದ್ದಾರೆ.
ನಟ ಜಗ್ಗೇಶ್ ಸಿನಿಮಾ ಜೊತೆಗೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದ ಜಗ್ಗೇಶ್ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಸದ್ಯ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಜಗ್ಗೇಶ್ ಬ್ಯುಸಿಯಾಗಿದ್ದಾರೆ.
ಇತ್ತೀಚಿಗಷ್ಟೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಜಗ್ಗೇಶ್ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಮೋದಿ ಜೊತೆ ಇರುವ ಫೋಟೋವನ್ನು ಜಗ್ಗೇಶ್ ಶೇರ್ ಮಾಡಿದ್ದರು.
ಸದ್ಯ ದೆಹಲಿಯಲ್ಲಿರುವ ಜಗ್ಗೇಶಗೆ ಪತ್ನಿ ಪರಿಮಳಾ ಸಾಥ್ ನೀಡಿದ್ದಾರೆ. ಜಗ್ಗೇಶ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.