- Home
- Entertainment
- Sandalwood
- ಕ್ರೌಡ್ ಫಂಡಿಂಗ್ ಸಿನಿಮಾ ಪೆರಿಪೆರಿ ಪಿತೂರಿ ಟೀಸರ್ ಬಿಡುಗಡೆ: ಪತ್ರಕರ್ತನ ಪಾತ್ರದಲ್ಲಿ ಅಚ್ಯುತ್ ಕುಮಾರ್
ಕ್ರೌಡ್ ಫಂಡಿಂಗ್ ಸಿನಿಮಾ ಪೆರಿಪೆರಿ ಪಿತೂರಿ ಟೀಸರ್ ಬಿಡುಗಡೆ: ಪತ್ರಕರ್ತನ ಪಾತ್ರದಲ್ಲಿ ಅಚ್ಯುತ್ ಕುಮಾರ್
ಅಚ್ಯುತ್ ಕುಮಾರ್ ಅವರು ಇಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸಿದ್ದು, ಪತ್ರಕರ್ತ ಮತ್ತು ಅವರ ಇಂಟರ್ನ್ ಹುಡುಗಿ ಹೊಸತೊಂದು ಯೂಟ್ಯೂಬ್ ಚಾನಲ್ ಮಾಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

ಮುಂಬೈ ಐಐಟಿ ವಿದ್ಯಾರ್ಥಿ, ಕನ್ನಡಿಗ ಗಿರೀಶ್ ಎ.ಎಂ ನಿರ್ದೇಶಿಸಿರುವ, ಅಚ್ಯುತ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಪೆರಿ ಪೆರಿ ಪಿತೂರಿ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಅಚ್ಯುತ್ ಕುಮಾರ್ ಅವರು ಇಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸಿದ್ದು, ಪತ್ರಕರ್ತ ಮತ್ತು ಅವರ ಇಂಟರ್ನ್ ಹುಡುಗಿ ಹೊಸತೊಂದು ಯೂಟ್ಯೂಬ್ ಚಾನಲ್ ಮಾಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ಈ ಸಿನಿಮಾ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು. ವಿಶೇಷ ಎಂದರೆ ಈ ಸಿನಿಮಾ ನಿರ್ಮಾಣ ಮಾಡಲು 300ಕ್ಕೂ ಹೆಚ್ಚು ನಿರ್ಮಾಪಕರು ನಿರಾಕರಿಸಿದ್ದರು ಎಂದು ಚಿತ್ರತಂಡ ತಿಳಿಸಿದೆ. ಇದೀಗ ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ನಿರ್ಮಾಣಗೊಂಡಿದೆ.
ವರ್ಷಾ ರಾಮಚಂದ್ರ, ಕಿರಣ್ ಲಖಾನಿ, ಪ್ರಶಾಂತ್.ವಿ. ಕುಮಾರ್ ತಾರಾಗಣದಲ್ಲಿದ್ದಾರೆ. ತಾಂತ್ರಿಕ ಮತ್ತು ಕಥಾತ್ಮಕ ಕ್ರಾಂತಿ ಐಐಟಿ ಬಾಂಬೆಯ ಸಿನಿಮಾ ತಂಡವು ಚಿತ್ರೀಕರಣದಲ್ಲಿ ಹೊಸ ತಂತ್ರಗಳನ್ನು ಅಳವಡಿಸಿದೆ.
12mm ಲೆನ್ಸ್ ಬಳಸಿ ಮಾನಸಿಕ ಆಳವನ್ನು ತಲುಪಿಸುವ ಶಾಟ್ಗಳು, ಲಾಂಗ್ ಟೇಕ್‌ಗಳು ಮತ್ತು ಲೈವ್-ಆಕ್ಷನ್-ಆನಿಮೆ ಮಿಶ್ರಣದ ಮೊಕ್ಯುಮೆಂಟರಿ ಶೈಲಿ ಚಿತ್ರಕ್ಕೆ ವಿಶಿಷ್ಟತೆ ನೀಡಿದೆ.
ಹಿಂದಿ ಹೇರಿಕೆಗೆ ಎದುರಾದ ನಿಲುವು ಚಿತ್ರವು ಪ್ರಾದೇಶಿಕ ರಾಜಕೀಯವನ್ನು ಸ್ಪರ್ಶಿಸುತ್ತದೆ. ನಿರ್ಮಾಪಕರು 'ಹಿಂದಿ ಹೇರಿಕೆ' ವಿರುದ್ಧ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದಾರೆ.