Happy Birthday Shivarajkumar: ನೋಡಲೇ ಬೇಕು ಶಿವಣ್ಣನ ಈ 10 ಸಿನಿಮಾಗಳು!
1986ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೂರು ತಲೆಮಾರುಗಳನ್ನು ಮನೋರಂಜಿಸುತ್ತಿರುವ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್...

ಆನಂದ್ - 1986ರಲ್ಲಿ ಆನಂದ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು ಶಿವಣ್ಣ. ಸುಧಾರಾಣಿ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಸಂಗೀತಮ್ ಶ್ರೀನಿವಾಸ್ ರಾವ್ ನಿರ್ದೇಶನ ಮಾಡಿದ್ದಾರೆ, ಶಂಕರ್-ಗಣೇಶ್ ಸಂಗೀತ ನೀಡಿದ್ದಾರೆ.
ಗಂಧದ ಗುಡಿ 2 -1994ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಮತ್ತು ಡಾ. ಶಿವರಾಜ್‌ಕುಮಾರ್ ಕಂಬಿನೇಷನ್‌ನ ನೋಡಬಹುದು. ವಿಜಯ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಾಜೇಶ್ವರಿ ಮತ್ತು ತಾರಾ ಅಭಿನಯಿಸಿದ್ದಾರೆ ಹಾಗೇ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ.
ಮುತ್ತಣ್ಣ - 1994ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಶಿವಣ್ಣ ಅಣ್ಣ-ತಂಗಿ ಸಂಬಂಧವನ್ನು ಅದ್ಭುತವಾಗಿ ತೋರಿಸಿದ್ದಾರೆ. ಎಮ್‌ಎಸ್ ರಾಜಶೇಖರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ.
ಓಂ - 1995ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಪ್ರೇಮಾ ಅಭಿನಯಿಸಿದ್ದಾರೆ. ಉಪೇಂದ್ರ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ.
ಜನುಮದ ಜೋಡಿ - 1996ರಲ್ಲಿ ರಿಲೀಸ್ ಆದ ಈ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಚಿತ್ರ ಅಭಿನಯಿಸಿದ್ದಾರೆ. ಟಿಎಸ್ ನಾಗಾಭರಣ ನಿರ್ದೇಶನ ಮಾಡಿರುವ ಈ ಸಿನಿಮಾ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಎಕೆ 47 - 1999ರಲ್ಲಿ ರಿಲೀಸ್ ಆಗಿರುವ ಈ ಸಿನಿಮಾವನ್ನು ಕೋಟಿ ರಾಮು ನಿರ್ಮಾಣ ಮಾಡಿದ್ದಾರೆ, ಓಂ ಪ್ರಕಾಶ್ ರಾವ್ ನಿರ್ದೇಶನ ಮತ್ತು ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಮ್ಮೂರ ಮಂದಾರ ಹೂವೇ - ಮತ್ತೆ ಪ್ರೇಮಾ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರವನ್ನು ಸುನಿಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿದ್ದಾರೆ. ಇಳಯ ರಾಜ್ ಸಂಗೀತವಿದೆ.
ತವರಿಗೆ ಬಾ ತಂಗಿ - 2002ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅನುಪ್ರಭಾಕರ್, ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ಸಾಯಿ ಪ್ರಕಾಶ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.
ಚಿಗುರಿದ ಕನಸು - ಶಿವಣ್ಣ, ಅನಂತ್ ನಾಗ್, ಅವಿನಾಶ್ ಸೇರಿದಂತೆ ದೊಡ್ಡ ತಾರಾ ಬಳಗ ಹೊಂದಿರುವ ಈ ಸಿನಿಮಾವನ್ನು ಟಿಎಸ್ ನಾಗಾಭರಣ ನಿರ್ದೇಶನ ಮಾಡಿದ್ದಾರೆ. ವಿ ಮನೋಹರ್ ಸಂಗೀತ ನೀಡಿದ್ದಾರೆ.
ಜೋಗಿ - 2005ರಲ್ಲಿ ಪ್ರೇಮ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಶಿವಣ್ಣ ಮತ್ತು ಜೆನಿಫರ್ ಅಭಿನಯಿಸಿದ್ದಾರೆ. ತಾಯಿ ಸೆಂಟಿಮೆಂಟ್‌ನ ಅದ್ಭುತವಾಗಿ ತೋರಿಸಲಾಗಿದ್ದು, ಶಿವಣ್ಣ ಲಾಂಗ್ ಹಿಡಿದಿ ಮೊದಲ ಸಿನಿಮಾ ಇದು.