ಪ್ರೀತಿ ಅಂದ್ರೆನೇ ದೂರ ಓಡುವವರೂ ಕೂಡ ಲವ್ವಲ್ಲಿ ಬೀಳೋದು ಹೇಗೆ?
ಪ್ರೀತಿ ಅಂದರೇನೆ ವಿಚಿತ್ರವಾದುದು, ಯಾವಾಗ? ಎಲ್ಲಿ ? ಯಾರ ಮೇಲೆ ಲವ್ ಆಗುತ್ತೆ ಅನ್ನೋದೆ ಗೊತ್ತಾಗುವುದಿಲ್ಲ. ಆದರೆ ಕೆಲವೊಮ್ಮೆ ಪ್ರೀತಿ ಅಂದ್ರೆ ದೂರ ಓಡುವವರೂ ಕೂಡ ಈ ಪ್ರೀತಿಯ ಬಲೆಯಲ್ಲಿ ಹೇಗೆ ಬೀಳುತ್ತಾರೆ ಅನ್ನೋದನ್ನು ನೋಡೋಣ.

ಅನೇಕ ಜನರು ಪ್ರೀತಿ, ಪ್ರೇಮ, ಪ್ರಣಯದಿಂದ ತಮ್ಮನ್ನು ಆದಷ್ಟು ದೂರ ಇಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೂ, ಅವರು ಬಯಸದಿದ್ದರೂ ಸಹ, ಅವರು ಪ್ರೀತಿಯಲ್ಲಿ ಬಿದ್ದು ಬಿಡುತ್ತಾರೆ. ಬದ್ಧತೆಗೆ ಹೆದರುವವರು, ಭರವಸೆಗಳನ್ನು ಈಡೇರಿಸಲು ಹೆದರುವವರು ಮತ್ತು ಸಂಬಂಧಕ್ಕೆ ಬಂದ ನಂತರ ತಮ್ಮ ಸ್ವಾತಂತ್ರ್ಯವು ಕೊನೆಗೊಳ್ಳುತ್ತೆ ಎಂದು ಅಂದುಕೊಳ್ಳುವವರು ಸಹ ಪ್ರೀತಿಯ ಬಲೆಗೆ ಬೀಳುತ್ತಾರೆ.ಒಬ್ಬ ವ್ಯಕ್ತಿಯೂ ಪ್ರೀತಿಯಿಂದಲೇ ದೂರ ಓಡುವಂತಹ ಸ್ಥಿತಿಯಲ್ಲಿದ್ದರೂ ಅವರು, ಮತ್ತೆ ಪ್ರೀತಿಯ ಕಡೆಗೆ ವಾಲೋದು (fall in love) ಯಾಕೆ? ಪ್ರೀತಿ ಬೇಡ ಅಂದವರಿಗೆ ಮತ್ತೆ ಪ್ರೀತಿ ಆಗೋದು ಯಾಕೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.
ಭಾವನಾತ್ಮಕವಾಗಿ ಕನೆಕ್ಟ್ ಆಗೋದು
ಕೆಲವರು ಪ್ರೀತಿಯ ಬಲೆಗೆ ಬೀಳೋದನ್ನು ತಪ್ಪಿಸುತ್ತಾರೆ. ಬದ್ಧತೆ ಮತ್ತು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು, ಅಂತಹ ವ್ಯಕ್ತಿಗಳು ಹೆಚ್ಚಾಗಿ ಯಾರೊಂದಿಗೂ ಕನೆಕ್ಟ್ ಆಗೋದೆ ಇಲ್ಲ. ಯಾಕಂದ್ರೆ ಅವರು ಭಾವನಾತ್ಮಕವಾಗಿ (emotional conncetion) ದುರ್ಬಲರಾಗುತ್ತಾರೆ ಎಂದು ಅವರು ಅಂದುಕೊಂಡಿರುತ್ತಾರೆ. ಆದರೆ, ಯಾರಾದರೂ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ ಮತ್ತು ಅವರ ಅಗತ್ಯದ ಸಮಯದಲ್ಲಿ ಇತರ ವ್ಯಕ್ತಿಯು ಅವರ ಜೊತೆ ಇದ್ದಾಗ, ಅಂತಹ ಸಮಯದಲ್ಲಿ ಅವರಿಗೆ ಖಂಡಿತವಾಗಿಯೂ ಪ್ರೀತಿಯಾಗುತ್ತೆ.
ತಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸದ ವ್ಯಕ್ತಿಯು ಸಹ ಕ್ರಮೇಣ ಯಾವುದೇ ಷರತ್ತುಗಳಿಲ್ಲದೆ ಕಾಳಜಿ ವಹಿಸುವ ಇನ್ನೊಬ್ಬ ವ್ಯಕ್ತಿಗೆ ಹತ್ತಿರವಾಗಲು ಪ್ರಾರಂಭಿಸುತ್ತಾನೆ. ಈ ಭಾವನಾತ್ಮಕ ಸಂಪರ್ಕವು ಆ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವಂತೆ ಮಾಡುತ್ತೆ, ಅವರು ಅದನ್ನು ಅರ್ಥ ಮಾಡಿಕೊಳ್ಳುವ ಮೊದಲು, ಅವರು ಪ್ರೀತಿಯಲ್ಲಿ ಬೀಳುತ್ತಾರೆ. ನೀವು ಏನನ್ನೂ ಹೇಳದೆ ಯಾರಾದರೂ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡಾಗ ಮತ್ತು ಯಾವುದೇ ಭಯ ಅಥವಾ ನಿರ್ಣಯವಿಲ್ಲದೆ ನಿಮ್ಮನ್ನು ಸ್ವೀಕರಿಸಿದಾಗ, ಭಾವನಾತ್ಮಕ ಸಂಪರ್ಕವು ಇನ್ನಷ್ಟು ಗಾಢವಾಗುತ್ತದೆ.
ಆಕರ್ಷಣೆ ಮತ್ತು ಕೆಮೆಸ್ಟ್ರಿ
ಪ್ರೀತಿ ಉಂಟಾಗಲು ಯಾವುದೇ ನಿಯಮಗಳ ಅಗತ್ಯವಿಲ್ಲ. ಇದು ಯಾರಿಗಾದರೂ ಯಾವುದೇ ಸಮಯದಲ್ಲಿ ಉಂಟಾಗಬಹುದಾದ ಭಾವನೆಯಾಗಿದೆ. ಕೆಲವೊಮ್ಮೆ, ಇಬ್ಬರು ವ್ಯಕ್ತಿಗಳಾ ನಡುವಿನ ಕೆಮೆಸ್ಟ್ರಿ ತುಂಬಾ ತೀವ್ರವಾಗಿರುತ್ತೆ, ಅವರು ಒಬ್ಬರನ್ನೊಬ್ಬರು ವಿರೋಧಿಸೋದಕ್ಕೆ ಸಾಧ್ಯವಿರೊದಿಲ್ಲ. ಬದ್ಧತೆಗೆ ಹೆದರುವವರು ಸಹ ಕೆಮೆಸ್ಟ್ರಿ ಮತ್ತು ಆಕರ್ಷಣೆಯಿಂದ ಹಿಂದೆ ಸರಿಯಲು ಸಾಧ್ಯವಾಗುವುದಿಲ್ಲ. ಇದು ಕೇವಲ ದೈಹಿಕ ಆಕರ್ಷಣೆ ಮಾತ್ರವಲ್ಲ, ಭಾವನಾತ್ಮಕ ಮತ್ತು ಮಾನಸಿಕ ಆಕರ್ಷಣೆಯೂ ಆಗಿದೆ. ಇಬ್ಬರು ವ್ಯಕ್ತಿಗಳ ನಡುವೆ ಕೆಮೆಸ್ಟ್ರಿ ಚೆನ್ನಾಗಿದ್ದರೆ, ಇಬ್ಬರ ನಡುವೆ ಪ್ರೀತಿ ಬೆಳೆಯಲು ಹೆಚ್ಚು ಸಮಯ ಬೇಕಾಗೋದಿಲ್ಲ.
ಪರ್ಫೆಕ್ಟ್ ವ್ಯಕ್ತಿಯ ಭೇಟಿ
ಕೆಲವೊಮ್ಮೆ ನೀವು ಯಾವುದೆ ಸಂದರ್ಭದಲ್ಲಿ ನಿಮ್ಮೊಂದಿಗೆ ನಿಲ್ಲುವ ವ್ಯಕ್ತಿಯನ್ನು ನೀವು ಭೇಟಿಯಾಗುತ್ತೀರಿ. ಅವರು ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿಮಗೆ ಅವರು ಪರ್ಫೆಕ್ಟ್ ವ್ಯಕ್ತಿ (perfect person) ಆಗಿರ್ತಾರೆ. ಜೀವನದಲ್ಲಿ ಸರಿಯಾದ ವ್ಯಕ್ತಿಯ ಆಗಮನವು ಕಮೀಟ್ ಮೆಂಟ್ ಭಯವನ್ನು ಕಡಿಮೆ ಮಾಡುತ್ತದೆ. ನಿಮ್ಮನ್ನು ಬದಲಾಯಿಸದೇ, ನೀವು ಇದ್ದಂತೆ ನಿಮ್ಮನ್ನು ಸ್ವೀಕರಿಸುವ ವ್ಯಕ್ತಿ ಅವರಾಗಿದ್ದರೆ, ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಬಗ್ಗೆ ನೀವು ಚಿಂತಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಎಲ್ಲವನ್ನೂ ಮರೆತು ಆ ವ್ಯಕ್ತಿಯನ್ನು ಪ್ರೀತಿಸುತ್ತೀರಿ.
ಸ್ಪೆಷಲ್ ಟ್ರೀಟ್’ಮೆಂಟ್ ನೀಡುವ ವ್ಯಕ್ತಿ
ಪ್ರತಿಯೊಬ್ಬರೂ ಸ್ಪೆಷಲ್ ಟೄಟ್’ಮೆಂಟ್ ಇಷ್ಟ ಪಡ್ತಾರೆ. ಯಾರಾದರೂ ನಿಮಗೆ ಸ್ಪೆಷಲ್ ಟ್ರೀಟ್ ನೀಡಿದಾಗ, ನಿಮ್ಮ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳಿಗೆ ಹೆಚ್ಚಿನ ಗಮನ ನೀಡಿದಾಗ, ಕ್ರಮೇಣ ಆ ವ್ಯಕ್ತಿಗೆ ಆಕರ್ಷಣೆ ಬೆಳೆಯಲು ಪ್ರಾರಂಭಿಸುತ್ತದೆ. ಕಮೀಟ್’ಮೆಂಟ್ ಗೆ ಹೆದರುವವರು ಸಹ, ಸ್ಪೆಷಲ್ ಟ್ರೀಟ್’ಮೆಂಟ್ ನೀಡುವ ವ್ಯಕ್ತಿಯನ್ನು ತನಗೆ ಗೊತ್ತಿಲ್ಲದೇ ಆ ವ್ಯಕ್ತಿಗೆ ಹತ್ತಿರವಾಗಲು ಪ್ರಾರಂಭಿಸುತ್ತಾರೆ. ಯಾರಾದರೂ ನಮ್ಮ ಸಣ್ಣ ವಿಷಯಗಳನ್ನು ಎಚ್ಚರಿಕೆಯಿಂದ ಆಲಿಸಿದಾಗ, ಅವುಗಳನ್ನು ನೆನಪಿಸಿಕೊಂಡಾಗ ಮತ್ತು ನೀವು ಅವರಿಗೆ ಎಷ್ಟು ಮುಖ್ಯ ಎಂದು ನಿಮಗೆ ಅನಿಸಿದಾಗ, ಗೊತ್ತಿಲ್ಲದೇ ಅವರ ಮೇಲೆ ಲವ್ ಆಗುತ್ತೆ.
ಒಂಟಿತನ
ಒಬ್ಬ ವ್ಯಕ್ತಿಯು ಎಷ್ಟೇ ಸ್ವಾವಲಂಬಿಯಾಗಿರಲಿ ಅಥವಾ ಆತ್ಮವಿಶ್ವಾಸದಿಂದಿರಲಿ, ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ತಮ್ಮವರು ಬೇಕು ಎಂದು ಅನಿಸದೇ ಇರದು. ಮಾನವರು ಸಾಮಾಜಿಕ ಜೀವಿಗಳು. ಆದ್ದರಿಂದ, ಒಂಟಿತನವು ಯಾವಾಗಲೂ ಅವರಿಗೆ ಹಿತಾನುಭವ ನೀಡೋದಿಲ್ಲ. ಒಂಟಿತನದ ಭಯವು ಜನರನ್ನು ಇತರರ ಕಡೆಗೆ ಆಕರ್ಷಿಸುತ್ತದೆ. ಕಮೀಟ್’ಮೆಂಟ್ ತಪ್ಪಿಸುವವರು ಸಹ ತಮ್ಮ ಜೀವನದಲ್ಲಿ ಏನೋ ಕೊರತೆಯಿದೆ ಎಂದು ಅರಿತುಕೊಂಡಾಗ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಅರಿವಿಲ್ಲದೆ, ಅವರು ತಮ್ಮ ಒಂಟಿತನವನ್ನು ನಿವಾರಿಸಲು ಪ್ರೀತಿಯ ಕಡೆಗೆ ಆಕರ್ಷಿತರಾಗಲು ಪ್ರಾರಂಭಿಸುತ್ತಾರೆ.