ಮದುವೆ ಬೇಗನೆ ಮುರಿದುಬೀಳಲು ಕಾರಣವೇನು? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ…
ಮದುವೆ ಬಹಳ ಜವಾಬ್ದಾರಿಯುತ ಸಂಬಂಧವ. ಇದನ್ನು ಅರ್ಥಮಾಡಿಕೊಳ್ಳದ ಜನರಿಂದಲೇ ಈ ಸಂಬಂಧಗಳು ಮುರಿದು ಬೀಳೋದು ಅಲ್ಲದೇ ಇದು ವಿಚ್ಛೇದನ ಅಥವಾ ವಿಷಕಾರಿ ಸಂಬಂಧಕ್ಕೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೈವಾಹಿಕ ಜೀವನವನ್ನು ದೀರ್ಘಕಾಲದವರೆಗೆ ಸಂತೋಷವಾಗಿಡಲು ನೀವು ಬಯಸಿದರೆ, ಖಂಡಿತವಾಗಿಯೂ ಸುಧಾ ಮೂರ್ತಿ ಅವರ ಈ ಸಲಹೆಗಳನ್ನು ತಿಳಿದುಕೊಳ್ಳಿ.
ಮದುವೆಗೆ ಸಂಬಂಧಿಸಿದ ಅನೇಕ ವಿಧಾನಗಳು ಸಮಯ ಕಳೆದಂತೆ ಬದಲಾಗುತ್ತಿವೆ. ಜನರ ಜೀವನದಲ್ಲಿ ಅದರ ಪ್ರಾಮುಖ್ಯತೆ ನಗಣ್ಯವಾಗುತ್ತಿದೆ. ಪರಸ್ಪರ ಒಪ್ಪಿಗೆಯೊಂದಿಗೆ ಈ ಪವಿತ್ರ ಬಂಧದಲ್ಲಿ ಬಂಧಿಸಲ್ಪಟ್ಟ ದಂಪತಿ ದೀರ್ಘಕಾಲದವರೆಗೆ ಈ ಸಂಬಂಧದ ಜವಾಬ್ದಾರಿಯನ್ನು (responsibility) ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರೆ. ಆದರೆ ಅದರ ಹಿಂದಿನ ಕಾರಣವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಉತ್ತರ 'ಇಲ್ಲ' ಎಂದಾದರೆ ಈ ಲೇಖನ ನಿಮಗಾಗಿ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಜೀವನ ಸಂಗಾತಿ ಮತ್ತು ಬರಹಗಾರ್ತಿ ಸುಧಾ ಮೂರ್ತಿ (Sudha Murthy) ಅವರು ಸಂಬಂಧದ ಬಗ್ಗೆ ಏನು ಹೇಳುತ್ತಾರೆ ಕೇಳಿ. ಆಧುನಿಕ ಕಾಲದಲ್ಲಿ ಬದಲಾಗುತ್ತಿರುವ ಸಂಬಂಧಗಳು ಮತ್ತು ಮದುವೆ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ತಮ್ಮ ಸಂದರ್ಶನವೊಂದರಲ್ಲಿ ಎಷ್ಟು ಸೊಗಸಾಗಿ ವ್ಯಕ್ತಪಡಿಸಿದ್ದಾರೆ ಎಂದರೆ ಅದನ್ನು ಒಪ್ಪದೆ ಅಥವಾ ಅದರ ಬಗ್ಗೆ ಯೋಚಿಸದೆ ಇರಲು ಸಾಧ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಮದುವೆ ಸಂಬಂಧ ಬೇಗ ಮುರಿಯಲು ಕಾರಣ ಏನು? ಮತ್ತು ಅದನ್ನು ಹೇಗೆ ದೀರ್ಘ ಕಾಲ ಕಾಪಾಡಬಹುದು ಎನ್ನುವ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಅದರ ಬಗ್ಗೆ ಸುಧಾ ಮೂರ್ತಿಯವರ ಮಾತನ್ನು ನೀವೂ ತಿಳಿಯಿರಿ.
ಅಂತಹ ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ
ಸಂಬಂಧಗಳ ಬಗ್ಗೆ ಮಾತನಾಡಿದ ಸುಧಾ ಮೂರ್ತಿ, ಯಾವ ರೀತಿ ಭವಿಷ್ಯದ ಜನರಿಗೆ ಪ್ರೇರಣೆ ನೀಡುವಂತಹ ಸಂಬಂಧಗಳು ಸಮಾಜದಿಂದ ಕ್ರಮೇಣ ಹೇಗೆ ಕೊನೆಗೊಳ್ಳುತ್ತಿವೆ ಅನ್ನೋದನ್ನು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮದುವೆಗಳು ಹಣದ ಆಧಾರದ (money is imprtant) ಮೇಲೆ ಮಾತ್ರ ನಡೆಯುತ್ತಿವೆ ಮತ್ತು ಹಣ ಅಥವಾ ಅಗತ್ಯಗಳನ್ನು ಆಧರಿಸಿದ ಮದುವೆಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಹೇಳಿದರು.
ಏಕೆಂದರೆ ಹಣವಿದ್ದಾಗ ಇರುವ ಸಂತೋಷ ಹಣ ಮುಗಿದ ತಕ್ಷಣ ದುಃಖವಾಗಿ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮದುವೆ ಉಳಿಯೋದಾದರೂ ಹೇಗೆ? ಇದು ದಂಪತಿಗಳ ಪ್ರತ್ಯೇಕತೆಗೆ (seperation) ಮುಖ್ಯ ಕಾರಣವಾಗುತ್ತದೆ. ಹಣದ ಬದಲು ಪ್ರೀತಿಯ ಬಗ್ಗೆ ಯೋಚಿಸಿದರೆ ಸಂಬಂಧ ಉಳಿಯಬಹುದು.
ಹಣಕ್ಕಿಂತ ಪ್ರೀತಿ ಮುಖ್ಯ
ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧದ ಆಧಾರವು ಪ್ರೀತಿಯಾಗಿರಬೇಕು. ತಮ್ಮ ಜೀವನದಲ್ಲಿ ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವವರು ಜೀವನದಲ್ಲಿ ಯಾವುದೇ ಪರಿಸ್ಥಿತಿಯನ್ನು ಒಟ್ಟಿಗೆ ಎದುರಿಸಬಹುದು. ಅವರಿಗೆ, ಹಣವು ಪ್ರೀತಿಗಿಂತ ಮುಖ್ಯವಾಗಿರೋದಿಲ್ಲ.
ಪರಸ್ಪರ ಗೌರವವಿಲ್ಲದೆ ಸಂಬಂಧ ಉಳಿಯೋದಿಲ್ಲ
ಸಂಗಾತಿಗಳ ನಡುವೆ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಹೊಂದಿರುವುದು ಬಹಳ ಮುಖ್ಯ, ಆಗ ಮಾತ್ರ ಮದುವೆಯಂತಹ ಸಂಬಂಧವನ್ನು ಕಾಪಾಡಿಕೊಳ್ಳಬಹುದು ಎಂದು ಸುಧಾ ಮೂರ್ತಿ ಹೇಳುತ್ತಾರೆ. ಆದ್ದರಿಂದ ಅದು ಸಂತೋಷ ಅಥವಾ ದುಃಖ, ಬಡತನ ಅಥವಾ ಶ್ರೀಮಂತಿಕೆ ಆಗಿರಲಿ ... ಒಬ್ಬರನ್ನೊಬ್ಬರು ಗೌರವಿಸಿ, (respect each other) ಪರಸ್ಪರ ಪ್ರೀತಿಸಿ. ಏಕೆಂದರೆ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುತ್ತಲೇ ಇರುತ್ತವೆ ಮತ್ತು ಹೋಗುತ್ತವೆ, ಆದರೆ ಕರ್ಮವು ಎಂದಿಗೂ ಕೊನೆಗೊಳ್ಳುವುದಿಲ್ಲ.