30 ನೇ ವಯಸ್ಸಿನ ನಂತರ ಮದುವೆಯಾಗುವುದು ಸರಿಯೇ?... ಇದು ಖಂಡಿತಾ ತಪ್ಪು ನಿರ್ಧಾರ!
ಮದುವೆಯಾದಲು ಸರಿಯಾದ ವಯಸ್ಸು ಯಾವುದು ಎನ್ನುವ ವಿಷಯದ ಬಗ್ಗೆ ತುಂಬಾ ಗೊಂದಲದಲ್ಲಿದ್ದರೆ, ಈ ಸುದ್ದಿ ನಿಮಗಾಗಿ. 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ ಅಥವಾ ಇಲ್ಲವೇ ಅನ್ನೋದನ್ನ ಇಂದು ನಾವು ನಿಮಗೆ ಹೇಳುತ್ತೇವೆ.
Special Marriage
ವಿವಾಹವು (Marriage) ಎರಡು ಹೃದಯಗಳನ್ನು ಬೆಸೆಯೋದಕ್ಕೆ ಸಹಾಯ ಮಾಡುವ ಅಮೂಲ್ಯವಾದ ಬಂಧವಾಗಿದೆ. ಗಂಡ ಮತ್ತು ಹೆಂಡತಿಯ ನಡುವಿನ ಆಳವಾದ ಸಂಬಂಧದ ಹೆಸರೇ ಮದುವೆ, ಇದರಲ್ಲಿ ಇಬ್ಬರೂ ಸಂತೋಷ ಮತ್ತು ದುಃಖದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ. ಆದರೆ ಹೆಚ್ಚಿನ ಜನರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ ಅಥವಾ ಅಲ್ಲವೇ?
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು 29 ರಿಂದ 30 ನೇ ವಯಸ್ಸಿನಲ್ಲಿ (marriage after 30) ಮದುವೆಯಾಗುತ್ತಾರೆ. ಹೆಚ್ಚಿನ ಜನರ ಯೋಚನೆಯ ಪ್ರಕಾರ ಮೂವತ್ತನೇ ವಯಸ್ಸಿನಲ್ಲಿ ತಾವು ಆರ್ಥಿಕವಾಗಿ ಸದೃಢರಾಗಿರ್ಯಾರೆ, ಇದೇ ಮದುವೆಗೆ ಸರಿಯಾದ ವಯಸ್ಸು ಅನ್ನೋದು. ಆದರೆ ನಿಜವಾಗಿಯೂ ಈ ವಯಸ್ಸಲ್ಲಿ ಮದುವೆಯಾಗೋದು ಸರೀನಾ? ತಪ್ಪಾ? ಅಂತ ಹಲವು ಜನರಲ್ಲಿ ಪ್ರಶ್ನೆಗಳು ಏಳುತ್ತವೆ.
ನೀವು ಕೂಡ ಮದುವೆಯಾದಲು ಸರಿಯಾದ ವಯಸ್ಸು ಯಾವುದು ಎನ್ನುವ ವಿಷಯದ ಬಗ್ಗೆ ತುಂಬಾ ಗೊಂದಲದಲ್ಲಿದ್ದರೆ, ಈ ಸುದ್ದಿ ನಿಮಗಾಗಿ. 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ ಅಥವಾ ಇಲ್ಲವೇ ಅನ್ನೋದನ್ನ ಇಂದು ನಾವು ನಿಮಗೆ ಹೇಳುತ್ತೇವೆ.
30ನೇ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ?
ತಜ್ಞರ ಪ್ರಕಾರ, 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ತಪ್ಪು ನಿರ್ಧಾರ ಅಂತಾನೇ ಹೇಳಬಹುದು. ದಂಪತಿಗಳು 30 ವರ್ಷದ ನಂತರ ಮದುವೆಯಾದರೆ, ಮಹಿಳೆಯರ ಫಲವತ್ತತೆ ವಿಶೇಷವಾಗಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಗರ್ಭಿಣಿಯಾಗಲು ಸಾಧ್ಯವಾಗೋದಿಲ್ಲ ಎಂದುಹೇಳುತ್ತಾರೆ.
ಅಷ್ಟೇ ಅಲ್ಲ , ತಜ್ಞರ ಪ್ರಕಾರ, 30 ವರ್ಷದವರೆಗೆ ವೀರ್ಯಾಣುಗಳ ಗುಣಮಟ್ಟ ಮತ್ತು ವೀರ್ಯಾಣುಗಳ (sperm count)ಸಂಖ್ಯೆ ಉತ್ತಮವಾಗಿರುತ್ತದೆ, ಆದರೆ 30 ರ ನಂತರ, ವೀರ್ಯಾಣುಗಳ ಗುಣಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ಗರ್ಭಧಾರಣೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ತಡವಾಗಿ ಮದುವೆಯಾಗುವ ದಂಪತಿಗಳು ಮಗುವಿನ ಪ್ಲ್ಯಾನ್ ಬಗ್ಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೀವು ಸಹ 30 ವರ್ಷದ ನಂತರ ಮದುವೆಯಾಗಲು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಆ ಆಲೋಚನೆಯನ್ನು ಬದಲಾಯಿಸಿ. ಏಕೆಂದರೆ ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರ ಫಲವತ್ತತೆ ಮತ್ತು ಪುರುಷರ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಗರ್ಭಧಾರಣೆಗೆ ಸಮಸ್ಯೆಯನ್ನುಂಟು ಮಾಡುತ್ತೆ, ಇದಲ್ಲದೆ, ದಂಪತಿಗಳು ತಡವಾಗಿ ಮದುವೆಯಾದರೆ, ಅವರ ಕುಟುಂಬ ಜೀವನವು ಅಷ್ಟು ಚೆನ್ನಾಗಿ ನಡೆಯುವುದಿಲ್ಲ ಎನ್ನುವುದೂ ಸಹ ನಿಜಾ.
ಲೈಂಗಿಕ ಜೀವನದ ಮೇಲೆ ಪರಿಣಾಮಗಳು
30 ರ ನಂತರ ಮದುವೆಯಾದರೆ ಜನರು ಹೆಚ್ಚಾಗಿ ತಮ್ಮ ಕರಿಯರ್ ನಲ್ಲೇ ಮುಳುಗಿರುತ್ತಾರೆ, ಅವರು ಸಂಸಾರದ ಬಗ್ಗೆ ಹೆಚ್ಚು ಗಮನ ಹರಿಸೋದೆ ಇಲ್ಲ. ಇದಲ್ಲದೆ, ತಡವಾಗಿ ಮದುವೆಯಾಗುವುದರಿಂದ ದೈಹಿಕ ಅನ್ಯೋನ್ಯತೆಯ (physical intimacy) ಸಮಸ್ಯೆಗಳು ಕಂಡುಬಂದಿವೆ. ಅಂದ್ರೆ ಸೆಕ್ಸ್ ಮಾಡೋದಕ್ಕೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ತಡವಾಗಿ ಮದುವೆಯಾಗುವುದರಿಂದ, ಜನರು ಆಗಾಗ್ಗೆ ಕಿರಿಕಿರಿಗೊಳ್ಳುತ್ತಾರೆ ಮತ್ತು ಪ್ರತಿ ಸಣ್ಣ ವಿಷಯಕ್ಕೂ ಜಗಳವಾಡಲು ಪ್ರಾರಂಭಿಸುತ್ತಾರೆ, ಇದು ಸಂಬಂಧವನ್ನು ಹಾಳುಮಾಡುತ್ತದೆ. 30 ವರ್ಷದ ನಂತರ, ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದಂಪತಿಗಳು ಪರಸ್ಪರರ ಆಸೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.
24 ರಿಂದ 25 ನೇ ವಯಸ್ಸಿನಲ್ಲೇ ಮದುವೆಯಾಗೋದು ಬೆಸ್ಟ್. ಇದರ ನಂತರ, 27 ರಿಂದ 28 ವರ್ಷ ವಯಸ್ಸಿನವರೆಗೆ, ಅವರು ಮಗುವಿನ ಬಗ್ಗೆ ಪ್ಲ್ಯಾನ್ ಸಹ ಮಾಡಬೇಕು. ಏಕೆಂದರೆ ಮಕ್ಕಳನ್ನ ಪಡೆಯೋದಕ್ಕೆ ಮತ್ತಷ್ಟು ತಡ ಮಾಡಿದಷ್ಟು, ಮುಂದೆ ಮಕ್ಕಳಾಗೋದಕ್ಕೆ ಸಮಸ್ಯೆಗಳು ಉಂಟಾಗುತ್ತೆ.