MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ವಿವಾಹೇತರ ಸಂಬಂಧ ಅಪರಾಧವಲ್ಲ: ಆದ್ರೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಾಗ ಪೊಲೀಸರು ಬರುವುದೇಕೆ?

ವಿವಾಹೇತರ ಸಂಬಂಧ ಅಪರಾಧವಲ್ಲ: ಆದ್ರೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಾಗ ಪೊಲೀಸರು ಬರುವುದೇಕೆ?

Extramarital affairs: Extramarital affairs: ವಿವಾಹೇತರ ಸಂಬಂಧಗಳು ಅಪರಾಧವಲ್ಲ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾದ್ರೆ ವಿವಾಹೇತರ ಜೋಡಿ ಹೋಟೆಲ್‌ನಲ್ಲಿದ್ದಾಗ ಪೊಲೀಸರು ಬರುವುದೇಕೆ? ಕಾನೂನು ಏನು ಹೇಳುತ್ತದೆ ತಿಳಿಯಿರಿ.

2 Min read
Author : Ravi Janekal
Published : Jul 16 2026, 09:41 AM IST
Share this Photo Gallery
  • FB
  • TW
  • Linkdin
  • Whatsapp
14
ವಿವಾಹೇತರ ಸಂಬಂಧಗಳು ಅಪರಾಧವಲ್ಲ
Image Credit : Asianet News

ವಿವಾಹೇತರ ಸಂಬಂಧಗಳು ಅಪರಾಧವಲ್ಲ

ಎಲ್ಲಿಂದಲೋ ಇಬ್ಬರು ವಯಸ್ಕ ಯುವಕ-ಯುವತಿ ಅಥವಾ ಇಬ್ಬರು ಬೇರೆ ಬೇರೆ ಮದುವೆಯಾಗಿರುವ ಜೋಡಿಗಳು ಹೋಟೆಲ್‌ನಲ್ಲಿ ಬಂದು ತಂಗುತ್ತಾರೆ. ಆಗ ಯಾರಿಂದಲೋ ಮಾಹಿತಿ ಸಿಕ್ಕು ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡುತ್ತಾರೆ. ಈ ಪೊಲೀಸರು ಹೋಟೆಲ್‌ ಮೇಲೆ ದಾಳಿ ಮಾಡಿ ವಯಸ್ಕ ಜೋಡಿಗಳನ್ನ ಹೊರಹಾಕುವುದು, ವಶಕ್ಕೆ ಪಡೆಯುವುದು ಆಗಾಗ ಇಂಥ ಸುದ್ದಿಗಳನ್ನ ಮಾಧ್ಯಮಗಳಲ್ಲಿ ನೋಡುತ್ತಿರುತ್ತವೆ. ಭಾರತದಲ್ಲಿ ವಿವಾಹೇತರ ಸಂಬಂಧಗಳು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವಾಗ ಪೊಲೀಸರು ಏಕೆ ಮಧ್ಯ ಪ್ರವೇಶಿಸುತ್ತಾರೆ, ಅವರಿಗೇನು ಹಕ್ಕಿದೆ ಎಂದು ಅನೇಕರು ಪ್ರಶ್ನೆಗಳನ್ನ ಕೇಳುತ್ತಿರುತ್ತಾರೆ. ಹೌದು ನಿಜವಾಗಿಯೂ ಕಾನೂನು ಈ ಬಗ್ಗೆ ಏನು ಹೇಳುತ್ತದೆ? ಇಲ್ಲಿ ತಿಳಿದುಕೊಳ್ಳೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
2018ರ ಸುಪ್ರೀಂ ತೀರ್ಪು - ಅಕ್ರಮ ಸಂಬಂಧ ಅಪರಾಧವಲ್ಲ
Image Credit : Asianet News

2018ರ ಸುಪ್ರೀಂ ತೀರ್ಪು - ಅಕ್ರಮ ಸಂಬಂಧ ಅಪರಾಧವಲ್ಲ

2018 ರಲ್ಲಿ, ಜೋಸೆಫ್ ಶೈನ್ vs. ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿತು. ಈ ತೀರ್ಪಿನಲ್ಲಿ ನ್ಯಾಯಾಲಯವು 150 ವರ್ಷಗಳಷ್ಟು ಹಳೆಯದಾದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ಘೋಷಿಸಿ ಅದನ್ನು ರದ್ದುಗೊಳಿಸಿತು. ಇದು ಹೆಣ್ಣು ಪುರುಷನ ಸೊತ್ತು ಎಂದು ಪರಿಗಣಿಸುತ್ತದೆ ಎಂದು ಹೇಳಿತು. ಹಿಂದೆ ಈ ಸೆಕ್ಷನ್ ಅಡಿಯಲ್ಲಿ ಗಂಡನ ಒಪ್ಪಿಗೆಯಿಲ್ಲದೆ ಮಹಿಳೆಯೊಬ್ಬಳು ಇನ್ನೊಬ್ಬ ವಿವಾಹಿತ ಪುರುಷನೊಂದಿಗೆ ದೈಹಿಕ ಸಂಬಂಧ ಬೆಳೆಸಿದರೆ, ಅದು ಗಂಡನಿಗೆ ಗೊತ್ತಾದರೆ ಜೈಲು ಶಿಕ್ಷೆ ಅನುಭವಿಸಬೇಕಿತ್ತು. ಆದರೆ ಇದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿತು. ಪರಿಣಾಮವಾಗಿ, ಭಾರತದಲ್ಲಿ ವಿವಾಹೇತರ ಸಂಬಂಧಗಳು ಇನ್ನು ಮುಂದೆ ಕ್ರಿಮಿನಲ್ ಅಪರಾಧವಲ್ಲ.ಇದನ್ನ ಪ್ರಗತಿಪರರು ಸ್ವಾಗತಿಸಿದರೆ, ಸಂಪ್ರದಾಯವಾದಿಗಳು ಈ ತೀರ್ಪು ಭಾರತೀಯ ಹಿಂದೂ ವಿವಾಹ ವ್ಯವಸ್ಥೆಯನ್ನೇ ಹಾಳುಮಾಡುತ್ತದೆ ಎಂದರು.

Related Articles

Related image1
ಎಲ್ಲಾ ಅಸಭ್ಯ ಹೇಳಿಕೆ ಕ್ರಿಮಿನಲ್ ಅಪರಾಧವಲ್ಲ : ಚಂದ್ರಚೂಡ್‌
Related image2
ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ ಎಂದ ಹೈಕೋರ್ಟ್‌!
34
ಹಾಗಾದರೆ ಪೊಲೀಸರು ಯಾಕೆ ಹೋಟೆಲ್‌ಗೆ ಬರ್ತಾರೆ
Image Credit : Asianet News

ಹಾಗಾದರೆ ಪೊಲೀಸರು ಯಾಕೆ ಹೋಟೆಲ್‌ಗೆ ಬರ್ತಾರೆ

ಹೋಟೆಲ್‌ನಲ್ಲಿ ವಿವಾಹೇತರ ಜೋಡಿ ಕಾನೂನುಬದ್ಧವಾಗಿ ತಂಗಿದ್ದರೂ ಪೊಲೀಸರು ಕೆಲವು ಸಂದರ್ಭ ದಾಳಿ ಮಾಡುತ್ತಾರೆ ಇದು ಅಪರಾಧವಲ್ಲದಿದ್ದರೂ ಪೊಲೀಸರು ವಿಚಾರಣೆಗೆ ಬರುತ್ತಾರೆ. ಬಹಳಷ್ಟು ಕೇಸ್‌ಗಳಲ್ಲಿ ತನ್ನ ಹೆಂಡತಿ ಅಥವಾ ಗಂಡ ಬೇರೆಯವರೊಂದಿಗೆ ಹೋಟೆಲ್ ಲಾಡ್ಜ್‌ನಲ್ಲಿರುವುದು ತಿಳಿದಾಗ ಪೊಲೀಸ್ ಠಾಣೆ ಕಾಣೆಯಾದ ಬಗ್ಗೆ ಅಥವಾ ಅಪಹರಣದ ಬಗ್ಗೆ ದೂರು ನೀಡಿರತ್ತಾರೆ. ಈ ದೂರನ್ನು ಆಧರಿಸಿ ಪೊಲೀಸರು ಹೋಟೆಲ್ ಪ್ರವೇಶಿಸುತ್ತಾರೆ. ಅಂದರೆ ಅವರು ಕೊಟ್ಟ ದೂರು ಸುಳ್ಳೋ ಅಥವಾ ನಿಜವಾಗಿಯೂ ಅಪಹರಣವಾಗಿದೆಯೋ ಅನ್ನುವುದು ಪತ್ತೆಹಚ್ಚುವುದು, ವಿಚಾರಿಸವುದು ಪೊಲೀಸರ ಕರ್ತವ್ಯ. ಕೆಲವೊಮ್ಮೆ ಅಪೂರ್ಣ ಮಾಹಿತಿಯೊಂದಿಗೆ ಯಾರೋ ಕರೆ ಮಾಡಿ ಲಾಡ್ಜ್ ಮೇಲೆ ದಾಳಿ ಎಂದು ಮಾಹಿತಿ ನೀಡಿದಾಗ ವಿಚಾರಣೆಗೆ ಬರುತ್ತಾರೆ. ಬಹುತೇಕರು ಕ್ರಿಮಿನಲ್ ಚಟುವಟಿಕೆಗಳಿಗೆ, ದುರುದ್ದೇಶಗಳಿಗಾಗಿ ಹೋಟೆಲ್‌ಗೆ ಕರೆಸಿಕೊಳ್ಳುವ ಸಾಧ್ಯತೆ ಇರುತ್ತದೆ. 

ಇತ್ತೀಚಿನ ಉದಾಹರಣೆ ಹೇಳುವುವದಾದರೆ ಯಾದಗಿರಿ ಹೋಟೆಲ್‌ ಒಂದರಲ್ಲಿ ತಂಗಿದ್ದ ವ್ಯಕ್ತಿಯೋರ್ವನನ್ನ ಅವನ ಸಂಬಂಧಿಗಳೇ ಕೊಂದಿದ್ದರು. ಒಂದೇ ಕುಟುಂಬದವರು ಹೋಟೆಲ್‌ಗೆ ಮಧ್ಯೆ ಪ್ರವೇಶಿಸಿದಾಗ ಕೊಲೆ ಉದ್ದೇಶಶಕ್ಕೆ ಬಂದಿದ್ದಾರೆಂದು ಹೋಟೆಲ್‌ನವರಿಗೂ ಸಹ ಗೊತ್ತಾಗಲ್ಲ. ಹೀಗಿರುವಾಗ ವಿಚಾರಿಸುವ ಉದ್ದೇಶದಿಂದ ಪೊಲೀಸರು ಮಧ್ಯೆಪ್ರವೇಶಿಸುತ್ತಾರೆ ಸರಿಯಾದ ದಾಖಲೆ ಕೊಟ್ಟರೆ, ಸಂಬಂಧ ಕಾನೂನುಬದ್ಧವಾಗಿದ್ದರೆ ಕ್ರಮ ಜರುಗಿಸಲಾಗಲ್ಲ.

44
ವಯಸ್ಕ ದಂಪತಿಗಳ ನಿಜವಾದ ಹಕ್ಕುಗಳೇನು?
Image Credit : Asianet News

ವಯಸ್ಕ ದಂಪತಿಗಳ ನಿಜವಾದ ಹಕ್ಕುಗಳೇನು?

ಇಬ್ಬರೂ ವಯಸ್ಕರಾಗಿದ್ದರೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರೆ, ಅವರಿಗೆ ಗೌಪ್ಯತೆಗೆ ಸಂಪೂರ್ಣ ಹಕ್ಕಿದೆ. ಇದರರ್ಥ ಪೊಲೀಸರು ಅಥವಾ ಯಾವುದೇ ಇತರ ಸಂಸ್ಥೆಯು ಸರಿಯಾದ ಕಾರಣ ಅಥವಾ ದೂರು ಇಲ್ಲದೆ ಅವರನ್ನು ಕಿರುಕುಳ ನೀಡಲು, ಬೆದರಿಸಲು ಅಥವಾ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಯಾರನ್ನಾದರೂ ಕಾನೂನುಬಾಹಿರವಾಗಿ ತಡೆದರೆ, ಬೆದರಿಕೆ ಹಾಕಿದರೆ ಅಥವಾ ಸುಲಿಗೆ ಮಾಡಿದರೆ, ಬಲಿಪಶು ಅದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಮತ್ತು ಕಾನೂನು ಕ್ರಮ ಕೈಗೊಳ್ಳಬಹುದು. ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿರುವುದು ಮುಖ್ಯವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಸಂಬಂಧಗಳು
ದಂಪತಿಗಳು
ಪೊಲೀಸ್

Latest Videos
Recommended Stories
Recommended image1
ಪತಿ ವಿರುದ್ಧವೇ 9 ಕೇಸ್‌ ದಾಖಲಿಸಿದ ಪತ್ನಿ: ಗಂಡನ 'ಬದುಕು ಜಟಕಾಬಂಡಿ' ಕಥೆ!
Recommended image2
ತನ್ನ ಬಳಿ ₹25 ಕೋಟಿ ಆಸ್ತಿ ಇದ್ದರೂ, ಅಪ್ಪನ ₹45 ಲಕ್ಷ ಸಾಲ ತೀರಿಸಲು ನಯಾಪೈಸೆ ಕೊಡದೆ ಬೀದಿಗೆ ತಳ್ಳಿದ ಮಗಳು!
Recommended image3
Men-Women Relationship: ಮಹಿಳೆಯರ ಈ ಸಮಸ್ಯೆಗಳನ್ನು ಹೆಚ್ಚಿನ ಪುರುಷರು ಅರ್ಥಮಾಡಿಕೊಳ್ಳುವುದೇ ಇಲ್ಲ!
Related Stories
Recommended image1
ಎಲ್ಲಾ ಅಸಭ್ಯ ಹೇಳಿಕೆ ಕ್ರಿಮಿನಲ್ ಅಪರಾಧವಲ್ಲ : ಚಂದ್ರಚೂಡ್‌
Recommended image2
ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ ಎಂದ ಹೈಕೋರ್ಟ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved