ಗಂಡ ನಿಮ್ಮ ಮಾತು ಕೇಳಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ!
ಕೆಲವೊಮ್ಮೆ ಹೆಂಗಸರಿಗೆ ಗಂಡಂದಿರು ನಮ್ಮ ಮಾತು ಕೇಳುವುದೇ ಇಲ್ಲವೆಂದು ಅನಿಸಲು ಶುರುವಾಗುತ್ತೆ, ನನ್ನ ಪತಿ ನನ್ನ ಮಾತೇ ಕೇಳಲ್ಲ ಅಂತ, ಅದು ನಿಜಾನೇ ಇರಬಹುದು. ಆದ್ರೆ ಅವರು ಮಾತು ಕೇಳುವಂತೆ ನೀವು ಏನಾದ್ರೂ ಮಾಡ್ತಿರಾ? ಜಗಳ ಮಾಡೋದಲ್ಲ…. ಈ ರೀತಿಯ ಬದಲಾವಣೆ ತಂದ್ರೆ ಗಂಡ ಖಂಡಿತಾ ನಿಮ್ಮ ಮಾತು ಕೇಳಿಯೇ ಕೇಳ್ತಾನೆ.
ನಿಜವಾಗಿ ಹೇಳೋದಾದ್ರೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ (relationship) ಸಮಾನವಾಗಿರುತ್ತದೆ. ಆದರೆ ಆಗ್ತಿರೋದು ಏನು? ಹೆಚ್ಚಿನ ಸಂಬಂಧಗಳಲ್ಲಿ, ಪತಿ ಹೆಂಡತಿ ಮೇಲೆ ಪ್ರಾಬಲ್ಯ ಸಾಧಿಸುತ್ತಾನೆ. ಅನೇಕ ಬಾರಿ ಹೆಂಡತಿಯರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನಾವು ನಿಮಗೆ ಹೇಳುತ್ತಿದ್ದೇವೆ.
ಮದುವೆ ಎಂಬ ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಗಂಡ -ಹೆಂಡತಿ ನಡುವಿನ ಸಂಹವನ ಅಂದ್ರೆ ಇಬ್ಬರ ನಡುವಿನ ಮಾತುಕತೆ ಚೆನ್ನಾಗಿರಬೇಕು. ಗಂಡ ಮತ್ತು ಹೆಂಡತಿ ತಮ್ಮ ಭಾವನೆಗಳನ್ನು ಪರಸ್ಪರ ಸರಿಯಾಗಿ ವ್ಯಕ್ತಪಡಿಸದ ಹೊರತು, ಸಂಬಂಧವು ಸ್ಟ್ರಾಂಗ್ ಆಗೋದೆ ಇಲ್ಲ. ಯಾವುದೇ ಸಂಬಂಧ ಇರಲಿ ಅದರಲ್ಲಿ ಮುಕ್ತವಾಗಿ ಮಾತನಾಡುವುದು ತುಂಬಾ ಅವಶ್ಯಕ.
ಹೆಚ್ಚಿನ ಸಂಬಂಧಗಳಲ್ಲಿ ಏನಾಗುತ್ತೆ ಅಂದ್ರೆ ಗಂಡಸರು ಹೆಂಗಸರ ಮೇಲೆ ಪ್ರಾಬಲ್ಯ ಬೀರುತ್ತಾರೆ. ತಾವು ಹೇಳಿದ್ದೇ ಸರಿ ಎನ್ನುವಂತೆ ನಡೆದುಕೊಳ್ಳುತ್ತಾರೆ. ನಿಮ್ಮ ಪತಿ ಕೂಡ ನಿಮ್ಮ ಮಾತನ್ನು ಕೇಳದಿದ್ದಾಗ, ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕಾಳಜಿ ವಹಿಸದಿದ್ದಾಗ ತುಂಬಾ ದುಃಖವಾಗುತ್ತದೆ. ಆವಾಗ ನೀವೇನು ಮಾಡಬಹುದು?
ಮಾತನಾಡಲು ಒಂದು ಸುಂದರವಾದ ವಾತಾವರಣ ಕ್ರಿಯೇಟ್ ಮಾಡಿ
ನೀವಿಬ್ಬರೂ ಶಾಂತ ಮತ್ತು ಗೊಂದಲರಹಿತ ಸಂಭಾಷಣೆ ನಡೆಸಬಹುದಾದ ಸಮಯ ಮತ್ತು ಸ್ಥಳವನ್ನು ಆರಿಸಿ. ಕೆಲಸದ ಸಮಯದಲ್ಲಿ ನಿಮ್ಮ ಗಂಭೀರ ಮತ್ತು ಸೂಕ್ಷ್ಮ ಭಾವನೆಗಳನ್ನು ನಿಮ್ಮ ಗಂಡನೊಂದಿಗೆ ಹಂಚಿಕೊಳ್ಳುವುದನ್ನು (share your feelings) ತಪ್ಪಿಸಿ. ಸಂಜೆ ಮನೆಯಲ್ಲಿಯೇ ಅದ್ಭುತ ವಾತಾವರಣ ಸೃಷ್ಟಿಸಿ ಅವರು ನಿಮ್ಮೊಂದಿಗೆ ಮಾತನಾಡುವಂತೆ ಮಾಡಿ.
ಎಚ್ಚರಿಕೆಯಿಂದ ಆಲಿಸಿ
ಬಹುಶಃ ನಿಮ್ಮ ಪತಿ ನಿಮ್ಮ ಮಾತನ್ನು ಕೇಳಲು ಆಸಕ್ತಿ ಹೊಂದಿಲ್ಲದಿರಬಹುದು ಏಕೆಂದರೆ ನೀವು ಸಹ ಅವರ ಮಾತನ್ನು ಎಚ್ಚರಿಕೆಯಿಂದ ಕೇಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವಿಬ್ಬರೂ ಮಾತನಾಡುವಾಗ, ಗಂಡ ಆಡುವ ಮಾತುಗಳನ್ನು ಗಂಭೀರವಾಗಿ ಆಲಿಸಿ (listen to him), ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿ, ಒಪ್ಪಿಗೆಯಿಂದ ತಲೆ ಅಲ್ಲಾಡಿಸುವ ಮೂಲಕ ಸೂಕ್ತ ಪ್ರತಿಕ್ರಿಯೆ ನೀಡಿ. ಇದನ್ನೆ ಅವರು ಸಹ ಮಾಡ್ತಾರೆ.
ನೇರವಾಗಿ ಮಾತನಾಡಿ
ನೀವು ಏನನ್ನು ತಿಳಿಸಲು ಬಯಸುತ್ತೀರೋ ಅದರ ಬಗ್ಗೆ ನೇರವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿ. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ. ನಿಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸಲು ಸುತ್ತು ಬಳಸಿ ಮಾತನಾಡಿದ್ರೆ, ಅದರಿಂದ ಸಮಸ್ಯೆಗಳೇ ಹೆಚ್ಚುತ್ತೆ.
ಗಂಡನನ್ನು ಅರ್ಥ ಮಾಡಿಕೊಂಡಿದ್ದೀರಿ ಅನ್ನೋದು ಅವರಿಗೆ ತಿಳಿಯಲಿ
ಒಬ್ಬರ ಬಗ್ಗೆ ಇನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡರೆ (understanding) ಸಂಬಂಧ ಸುಂದರವಾಗಿರುತ್ತೆ. ನೀವು ಅವರ ದೃಷ್ಟಿ ಕೋನವನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಅವರಿಗೆ ಅನಿಸುವಂತೆ ಮಾಡಿ. ನೀವು ಪ್ರತಿ ಬಾರಿಯೂ ಪತಿಯ ಮಾತುಗಳ ಬಗ್ಗೆ ಕಾಳಜಿ ವಹಿಸುವುದನ್ನು ಅವನು ನೋಡಿದಾಗ, ಅವರು ಸಹ ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ.