ಲೈಂಗಿಕ ಕ್ರಿಯೆ ಆದ್ಮೇಲೆ ಪುರುಷರು, ಮಹಿಳೆಯರು ಏನ್ ಥಿಂಕ್ ಮಾಡ್ತಾರೆ
ಲೈಂಗಿಕತೆಯ ನಂತರ ಪುರುಷರು ಮತ್ತು ಮಹಿಳೆಯರು ಏನೆಲ್ಲಾ ಯೋಚಿಸುತ್ತಾರೆ ಎಂಬ ವಿಷಯ ಕುತೂಹಲ ಮೂಡಿಸುವಂತದ್ದು. ಸಂಗಾತಿಗಳಿಬ್ಬರು ಸಂಭೋಗದ ನಂತರ ಖುಷಿಯಾಗಿರುತ್ತಾರೆ ಎಂಬುದು ನಿಜವಾದರೂ ಅವರ ಮನಸ್ಸಿನಲ್ಲಿ ಯಾವೆಲ್ಲಾ ಯೋಚನೆಗಳು ಬರುತ್ತವೆ ಎಂಬುದು ಪ್ರಶ್ನಾರ್ಥಕವಾಗಿ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸಂಭೋಗದ ನಂತರ, ಅದು ಆರೋಗ್ಯಕರ ಮುದ್ದಾಡುವಿಕೆಯಾಗಿರಬಹುದು ಅಥವಾ ಕೋಣೆಯಿಂದ ಬೇಗನೆ ಹೊರಹೋಗುವ ಪ್ರಚೋದನೆಯಾಗಿರಬಹುದು. ಕೆಲವು ಜನರು ಲೈಂಗಿಕತೆಯ ನಂತರ ತಮ್ಮ ಸಂಗಾತಿಗೆ ಚುಂಬಿಸಲು ಮತ್ತು ಹತ್ತಿರವಾಗಲು ಬಯಸುತ್ತಾರೆ, ಕೆಲವರು ತಕ್ಷಣವೇ ನಿದ್ರಿಸಲು ಬಯಸುತ್ತಾರೆ. ಲೈಂಗಿಕತೆಯ ನಂತರ ಅನೇಕ ವಿಷಯಗಳು ಮನಸ್ಸಿನಲ್ಲಿ ಬರುತ್ತವೆ. ಏಕೆಂದರೆ ಅದು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಉತ್ತೇಜಿಸುತ್ತದೆ. ಆದರೆ ಲೈಂಗಿಕತೆಯ ನಂತರ ಪುರುಷರು ಮತ್ತು ಮಹಿಳೆಯರು ನಿಜವಾಗಿಯೂ ಏನು ಯೋಚಿಸುತ್ತಾರೆ?
ತುಂಬಾ ಕನೆಕ್ಟೆಡ್ ಭಾವನೆ ಅನುಭವಿಸುತ್ತಾರೆ
ಸಂಭೋಗದ ನಂತರ ಸಂಗಾತಿಗಳಿಗೆ ಹೆಚ್ಚು ಆಪ್ತತೆಯ ಅನುಭವವಾಗುತ್ತದೆ. ಇಬ್ಬರೂ ಯಾವಾಗಲೂ ಜೊತೆಗಿರಲು ಇಷ್ಟಪಡುತ್ತಾರೆ. ಅವನು, ಅವಳ ದೈಹಿಕ ಸಾಮೀಪ್ಯವು ಮನಸ್ಸಿಗೆ ಶಾಂತತೆಯನ್ನು ನೀಡುತ್ತದೆ. ಸಂಗಾತಿ ಇಷ್ಟ-ಕಷ್ಟಗಳ ಬಗ್ಗೆ ಕಾಳಜಿ ವಹಿಸಲು ಮುಂದಾಗುತ್ತಾರೆ.
ಏಕಾಂಗಿಯಾಗಿರಲು ಬಯಸುತ್ತಾರೆ
ಇನ್ನು ಕೆಲವೊಬ್ಬರು ಲೈಂಗಿಕತೆಯ ನಂತರ ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಒಂಟಿಯಾಗಿದ್ದು, ಗಾಢವಾಗಿ ಯೋಚಿಸಲು ಆರಂಭಿಸುತ್ತಾರೆ. ಅವರು ಏಕಾಂತದಲ್ಲಿ ತಮ್ಮ ಸುಖದ ಸಮಯವನ್ನು ಮೆಲುಕು ಹಾಕಿಕೊಂಡು ಖುಷಿಯಾಗಿರಲು ಇಷ್ಟಪಡುತ್ತಾರೆ.
ವಿಲಕ್ಷಣ ಆಲೋಚನೆಗಳು
ಮತ್ತೆ ಹಲವರು ಸೆಕ್ಸ್‌ನ ಬಳಿಕ ವಿಲಕ್ಷಣ ಆಲೋಚನೆಗಳನ್ನು ಹೊಂದಿರುತ್ತಾರೆ. ತಾವು ಮಾಡಿರುವುದು ಸರಿಯಾಗಿದೆಯೇ ಇಲ್ಲವೇ ಎಂದು ಯೋಚಿಸುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ಮತ್ತೇನನ್ನೋ ಪ್ರಯತ್ನಿಸಬಹುದೇನೋ ಎಂಬ ಬಗ್ಗೆಆಲೋಚನೆ ಮಾಡುತ್ತಾರೆ. ಮುಂದಿನ ಸಂಭೋಗದಲ್ಲಿ ವಿಶಿಷ್ಟವಾಗಿ ಏನು ಮಾಡಬಹುದು ಎಂಬ ವಿಲಕ್ಷಣ ಆಲೋಚನೆಯೂ ಅವರಿಗಿರುತ್ತದೆ.
ನಿಜವಾದ ಆಲೋಚನೆಗಳು
ನಾವು ಯಾರನ್ನಾದರೂ ನಿಜವಾಗಿಯೂ ಇಷ್ಟಪಟ್ಟಾಗ, ಲೈಂಗಿಕ ಕ್ರಿಯೆಯ ನಂತರ ಆ ವ್ಯಕ್ತಿಯನ್ನು ದಿಟ್ಟಿಸುವುದನ್ನು ಇಷ್ಟಪಡುತ್ತೇವಡ. ಪ್ರೀತಿಯ ನೋಟ, ಅಪ್ಪುಗೆ ಖುಷಿ ನೀಡುತ್ತದೆ. ಈ ಖುಷಿ ನಿರಂತರವಾಗಿರಬೇಕು, ಭವಿಷ್ಯ ಚೆನ್ನಾಗಿರಬೇಕು ಎಂದು ಇಬ್ಬರೂ ಪ್ರಾರ್ಥಿಸುತ್ತಾರೆ
ನೈರ್ಮಲ್ಯದ ಬಗ್ಗೆ ಚಿಂತೆ
ಮತ್ತೆ ಕೆಲವರಿಗೆ ಸಂಭೋಗದ ನಂತರ ಸಂಗಾತಿಯ ನೈಮರ್ಲ್ಯದ ಬಗ್ಗೆ ಅನುಮಾನ ಮೂಡುತ್ತದೆ. ಆತ ಸ್ನಾನ ಮಾಡಿದ್ದಾನೆಯೋ ಇಲ್ಲವೋ, ಹಲ್ಲುಜಿದ್ದನೋ ಇಲ್ಲವೋ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಮುಂದಿನ ಲೈಂಗಿಕ ಕ್ರಿಯೆಯ ಬಗ್ಗೆ ನೈಮರ್ಲ್ಯದ ಬಗ್ಗೆ ನೆನಪಿಸಿಕೊಳ್ಳಬೇಕು ಅಂದುಕೊಳ್ಳುತ್ತಾರೆ.
ಕಾರ್ಯಕ್ಷಮತೆಯ ಸಮಸ್ಯೆಗಳು
ಎಲ್ಲಾ ಪುರುಷರು ಲೈಂಗಿಕತೆಯ ನಂತರ ಕನಿಷ್ಠ ಕೆಲವು ಬಾರಿ ಈ ಬಗ್ಗೆ ಯೋಚಿಸುತ್ತಾರೆ. ನಾನು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆಯೇ ಎಂಬ ಬಗ್ಗೆ ಚಿಂತೆ ಮಾಡುತ್ತಾರೆ. ಕಾರ್ಯಕ್ಷಮತೆಯ ಆತಂಕವು ನಿಜವಾಗಿದೆ ಮತ್ತು ಪುರುಷರು ಕೆಲವೊಮ್ಮೆ ಇದನ್ನು ಪಡೆಯಲು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಆದ್ದರಿಂದ, ಲೈಂಗಿಕತೆಯ ನಂತರ ಒಬ್ಬ ವ್ಯಕ್ತಿ ತಾನು ಹಾಸಿಗೆಯಲ್ಲಿ ಚೆನ್ನಾಗಿದ್ದಾನೋ ಅಥವಾ ಇಲ್ಲವೋ ಎಂದು ಯೋಚಿಸುವುದು ಸಹಜ.