- Home
- Life
- Relationship
- Father's Day Ideas: ಫಾದರ್ಸ್ ಡೇಗೆ ನಿಮ್ಮ ತಂದೆಗೆ ನೀಡಿ ಈ ಸರ್ಪ್ರೈಸ್.... ಖಂಡಿತಾ ಖುಷಿ ಪಡ್ತಾರೆ
Father's Day Ideas: ಫಾದರ್ಸ್ ಡೇಗೆ ನಿಮ್ಮ ತಂದೆಗೆ ನೀಡಿ ಈ ಸರ್ಪ್ರೈಸ್.... ಖಂಡಿತಾ ಖುಷಿ ಪಡ್ತಾರೆ
ಈ ಫಾದರ್ಸ್ ಡೇಗೆ ನಿಮಗಾಗಿ ಎಲ್ಲವನ್ನೂ ಮಾಡಿದ, ನೀವು ಏನು ಹೇಳದೆ, ಎಲ್ಲವನ್ನೂ ನೀಡಿದ ನಿಮ್ಮ ತಂದೆಗಾಗಿ ಏನನ್ನಾದರೂ ವಿಶೇಷವಾದುದನ್ನು ನೀವು ಮಾಡಲು ಬಯಸಿದ್ರೆ, ಇಲ್ಲಿದೆ ಬೆಸ್ಟ್ ಆಯ್ಕೆಗಳು.

ನಿಮ್ಮ ಜೀವನದಲ್ಲಿ ಮೌನವಾಗಿ ನಿಮಗಾಗಿ ಎಲ್ಲವನ್ನೂ ಮಾಡುವ ವ್ಯಕ್ತಿ ನಿಮ್ಮ ತಂದೆಯೇ ಹೊರತು ಬೇರೆ ಯಾರೂ ಅಲ್ಲ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಅವರು ಎಲ್ಲವನ್ನೂ ತೋರಿಸಿಕೊಳ್ಳುವುದರಲ್ಲಿ ನಂಬಿಕೆ ಇಡುವುದಿಲ್ಲ ಅಥವಾ ದೂರು ನೀಡುವುದಿಲ್ಲ, ಅವರು ಪ್ರತಿದಿನ ತಮ್ಮದೇ ಆದ ರೀತಿಯಲ್ಲಿ ನಿಮ್ಮ ಮೇಲಿನ ಪ್ರೀತಿ ಮತ್ತು ಸಮರ್ಪಣೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ತಂದೆಯರ ದಿನವು (Fathers Day) ಕೇವಲ ಒಂದು ದಿನಾಂಕವಲ್ಲ, ಆದರೆ ಅವರ ಪ್ರತಿಯೊಂದು ತ್ಯಾಗ, ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಹಾಯ ಮತ್ತು ಅವರ ಬೇಷರತ್ತಾದ ಪ್ರೀತಿಗಾಗಿ ನೀವು ಅವರಿಗೆ "ಧನ್ಯವಾದಗಳು" ಎಂದು ಹೇಳಬಹುದಾದ ಸಂದರ್ಭವಾಗಿದೆ. ಈ ಬಾರಿ ತಂದೆಯರ ದಿನವನ್ನು ಸ್ಮರಣೀಯವನ್ನಾಗಿಸಿ, ನಿಮ್ಮ ತಂದೆಗೆ ಸರ್ಪ್ರೈಸ್ (surprise him)ನೀಡಿ.
ಕೈಯಿಂದ ಮಾಡಿದ ಉಡುಗೊರೆಗಳು
ಮಾರ್ಕೆಟ್ ನಿಂದ ಅಪ್ಪನಿಗೆ ಗಿಫ್ಟ್ ಖರೀದಿಸುವುದು ಸುಲಭ, ಆದರೆ ನೀವು ನಿಮ್ಮ ಕೈಗಳಿಂದ (handmade gifts) ಅವರಿಗೆ ಏನನ್ನಾದರೂ ಮಾಡಿದಾಗ, ಅದರ ಪರಿಣಾಮ ನೇರವಾಗಿ ಹೃದಯಕ್ಕೆ ತಟ್ಟುತ್ತೆ. ನೀವು ಅವರಿಗಾಗಿ ಕೈಯಿಂದ ಮಾಡಿದ ಕಾರ್ಡ್ ಅನ್ನು ತಯಾರಿಸಬಹುದು, ಅದರಲ್ಲಿ ಅವರಿಗಾಗಿ ಒಂದು ಸುಂದರವಾದ ನೋಟ್ ಅಥವಾ ಕವಿತೆ ಬರೆಯಬಹುದು. ನೀವು ಬಯಸಿದರೆ, ಅವರೊಂದಿಗೆ ಕಳೆದ ಕೆಲವು ವಿಶೇಷ ಕ್ಷಣಗಳ ಫೋಟೋಗಳನ್ನು ಕೊಲಾಜ್ ಆಗಿ ಪರಿವರ್ತಿಸಬಹುದು ಮತ್ತು ಅದನ್ನು ಫ್ರೇಮ್ ಮಾಡಬಹುದು.
ತಂದೆ ಜೊತೆ ಡಿನ್ನರ್ ಡೇಟ್
ತಂದೆ ಬೆಳಿಗ್ಗೆ ಎದ್ದಾಗ ಅವರ ನೆಚ್ಚಿನ ಚಹಾ ಅಥವಾ ಬ್ರೇಕ್ ಫಾಸ್ಟ್ ಅವರ ಮುಂದೆ ಇಡಿ, ಅದೂ ಕೂಡ ನಿಮ್ಮ ಕೈಯಾರೆ ತಯಾರಿಸಿದ್ದು (prepare his favourite food) ಆಗಿದ್ರೆ ಉತ್ತಮ, ಈ ದೃಶ್ಯವು ಅವರ ಮುಖದಲ್ಲಿ ನಗುವನ್ನು ತರೋದಂತೂ ಖಚಿತಾ. ಬೆಳಿಗ್ಗೆ ಅದು ಸಾಧ್ಯವಾಗದಿದ್ದರೆ, ಸಂಜೆ ಒಂದು ಸಣ್ಣ ಫ್ಯಾಮಿಲಿ ಡಿನ್ನರ್ ಪ್ಲ್ಯಾನ್ ಮಾಡಿ, ಅಡುಗೆಮನೆಯಲ್ಲಿ ಸ್ವಲ್ಪ ಸಮಯ ಕಳೆಯಿರಿ, ಅವರ ನೆಚ್ಚಿನ ಆಹಾರವನ್ನು ಕುಕ್ ಮಾಡಿ ಮತ್ತು ಒಟ್ಟಿಗೆ ಕುಳಿತು ಮಾತನಾಡಿ, ಒಟ್ಟಿಗೆ ಊಟ ಮಾಡಿ.
ಭಾವನಾತ್ಮಕ ಪತ್ರ ಬರೆಯಿರಿ
ಪ್ರತಿಯೊಬ್ಬರೂ ತಮ್ಮ ತಂದೆಗೆ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಹಾಗಾದರೆ ಈ ತಂದೆಯ ದಿನದಂದು ಅವರಿಗೆ ಪತ್ರ ಅಥವಾ ನೋಟ್ ಬರೆಯೋದಕ್ಕೆ (write a letter to him) ಟ್ರೈ ಮಾಡಿ, ಅದರಲ್ಲಿ ನೀವು ಅವರ ಬಗ್ಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಅವರ ಕಠಿಣ ಪರಿಶ್ರಮ, ಹೋರಾಟ ಮತ್ತು ಹೇಳಲಾಗದ ಪ್ರೀತಿ ಎಲ್ಲವನ್ನೂ ಆ ಕಾಗದದ ಮೇಲೆ ಬರೆಯಬೇಕು, ಇದನ್ನು ಅವರು ಖಂಡಿತವಾಗಿಯೂ ತುಂಬಾನೆ ಇಷ್ಟ ಪಡುತ್ತಾರೆ.
ವೀಡಿಯೊ ಸಂದೇಶ ಕಳುಹಿಸಿ
ನೀವು ಬಯಸಿದರೆ, ಇಡೀ ಕುಟುಂಬದ ಸಣ್ಣ ವೀಡಿಯೊ ತುಣುಕುಗಳನ್ನು ಸಂಗ್ರಹಿಸಿ "ನಾವು ನಿಮ್ಮನ್ನು ಪ್ರೀತಿಸುತ್ತೇವೆ ಅಪ್ಪ" ಎಂಬ ವೀಡಿಯೊವನ್ನು (send him video message) ಮಾಡಬಹುದು. ಇದರಲ್ಲಿ, ಪ್ರತಿಯೊಬ್ಬ ಸದಸ್ಯರು ಅಪ್ಪನಿಗಾಗಿ ಒಂದು ಸಾಲು ಹೇಳಬೇಕು, ಈ ವೀಡಿಯೊ ಅವರನ್ನು ಭಾವನಾತ್ಮಕವಾಗಿಸುವುದಲ್ಲದೆ, ವರ್ಷಗಳ ಕಾಲ ಅವರ ನೆನಪಿನಲ್ಲಿ ಉಳಿಯುತ್ತದೆ.
ಒಟ್ಟಿಗೆ ಸಮಯ ಕಳೆಯಿರಿ
ಹೆಚ್ಚಿನ ಸಮಯ, ತಂದೆಗೆ ದುಬಾರಿ ಉಡುಗೊರೆಗಳು (costly gifts) ಬೇಕಾಗಿರೋದಿಲ್ಲ, ನಿಮ್ಮೊಂದಿಗೆ ಸಮಯ ಕಳೆಯಬೇಕು. ಹಾಗಾಗಿ ಆ ದಿನ ಅವರೊಂದಿಗೆ ಟಿವಿ ನೋಡುವುದು, ಹೊರಗೆ ನಡೆಯುವುದು ಅಥವಾ ಅವರ ನೆಚ್ಚಿನ ಚಟುವಟಿಕೆಗಳಲ್ಲಿ ಅವರೊಂದಿಗೆ ಸೇರುವುದು. ಒಂದು ಕಪ್ ಚಹಾ ಮತ್ತು ಸಾಕಷ್ಟು ಮಾತನಾಡುವುದು ಸಂಬಂಧವನ್ನು ಅತ್ಯಂತ ಸುಂದರವಾಗಿಸುತ್ತದೆ.