MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಯಾಕೆ ಪ್ರೀತಿಯಲ್ಲಿ ಹುಡುಗಿಯರೇ ಹೆಚ್ಚಾಗಿ ಮೋಸ ಮಾಡ್ತಾರೆ?

ಯಾಕೆ ಪ್ರೀತಿಯಲ್ಲಿ ಹುಡುಗಿಯರೇ ಹೆಚ್ಚಾಗಿ ಮೋಸ ಮಾಡ್ತಾರೆ?

ನೀವು ಕೂಡ ಒಬ್ಬ ಹುಡುಗಿಯಿಂದ ಮೋಸ ಹೋಗಿದ್ರೆ, 'ಅವಳು ನನಗೆ ಏಕೆ ಮೋಸ ಮಾಡಿದಳು' ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂದಿರಬೇಕು ಅಲ್ವಾ?, ಇವತ್ತು ನಾವು ನಿಮ್ಗೆ ಒಳ್ಳೆಯ ಸಂಬಂಧದಲ್ಲಿ ಇದ್ರೂ ಸಹ ಹುಡುಗೀರು ಯಾಕೆ ಮೋಸ ಮಾಡ್ತಾರೆ ಅನ್ನೋದನ್ನ ತಿಳಿಯೋಣ.  

2 Min read
Author : Pavna Das
Published : Jun 22 2024, 12:50 PM IST
Share this Photo Gallery
  • FB
  • TW
  • Linkdin
  • Whatsapp
18

ಪ್ರೀತಿ ಅನ್ನೋದು ತುಂಬಾನೆ ವಿಶೇಷ ಫೀಲಿಂಗ್ (bests feeling) ಆಗಿದೆ. ಅದರಲ್ಲೂ ತಮಗಿಂತ ಹೆಚ್ಚಾಗಿ ನಮ್ಮನ್ನು ಪ್ರೀತಿಸುವ ವ್ಯಕ್ತಿ ನಮಗೆ ಸಿಕ್ಕಾಗ, ಈ ಸಂತೋಷವು ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಪ್ರೀತಿ ಇರುವಲ್ಲಿ, ಕೆಲವೊಮ್ಮೆ ಮೋಸಹೋಗುವ ಸಾಧ್ಯತೆಯೂ ಇರುತ್ತದೆ. ಸಂಬಂಧ ಉತ್ತಮ ರೀತಿಯಲ್ಲಿದ್ರೂ ಸಹ ಕೆಲವೊಮ್ಮೆ ಹುಡುಗೀರು ಕೈಕೊಡ್ತಾರೆ. ಆದ್ರೆ ಯಾಕೆ ಹೀಗೆ ಇದ್ದಕ್ಕಿದ್ದಂತೆ ಹುಡುಗಿಯರು ಮೋಸ ಮಾಡ್ತಾರೆ ಅಂತ ನಿಮಗೆ ಗೊತ್ತಾ? 
 

28

ನೀವೂ ಸಹ ಪ್ರೀತಿಸುವ ಹುಡುಗಿಯಿಂದ ಮೋಸಹೋಗಿದ್ದರೆ (cheating) ಅಥವಾ ಯಾರಾದರೂ ನಿಮ್ಮನ್ನು ತೊರೆದಿದ್ದರೆ, ಅವರು ನಿಮ್ಮನ್ನ ಯಾಕೆ ಬಿಟ್ಟು ಹೋದ್ರು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡದೇ ಇರದು? ಆದ್ದರಿಂದ ಇಂದು ನಾವು ಈ ಲೇಖನದಲ್ಲಿ ಅದೇ ಕಾರಣಗಳ ಬಗ್ಗೆ ನಿಮಗೆ ಹೇಳಲಿದ್ದೇವೆ, ಯಾವ ಕಾರಣದಿಂದಾಗಿ ಹುಡುಗಿಯರು ತಮ್ಮ ಸಂಬಂಧವನ್ನು ತ್ಯಜಿಸುತ್ತಾರೆ ಅನ್ನೋದನ್ನ ತಿಳಿಸ್ತೀವಿ ಕೇಳಿ. 
 

38

ಆಕೆಗೆ ತುಂಬಾನೆ ಹರ್ಟ್ ಆಗಿದ್ರೆ (She was hurt)
ನೀವು ಯಾವುದೇ ಮಹಿಳೆ ಅಥವಾ ಹುಡುಗಿಯನ್ನು ಪದೇ ಪದೇ ನೋಯಿಸಿದಾಗ ಅವರು ಖಂಡಿತವಾಗಿಯೂ ನಿಮ್ಮನ್ನ ಬಿಟ್ಟು ಹೋಗ್ತಾರೆ.. ನೀವು ಪದೇ ಪದೇ ಅವರನ್ನ ಹೀಯಾಳಿಸೋದು ಮತ್ತು ನೋಯಿಸೋದು ಮಾಡಿದ್ರೆ ಅವರು ಬಿಟ್ಟು ಹೋಗದೇ ಇರ್ತಾರೆಯೇ?. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧ ಉಳಿಸಲು ನೀವು ಬಯಸಿದರೆ, ನಿಮ್ಮ ತಪ್ಪುಗಳನ್ನು ಸರಿಪಡಿಸಿ ಮತ್ತು ದೊಡ್ಡ ತಪ್ಪು ಇದ್ದರೆ, ಅದಕ್ಕಾಗಿ ಸಾರಿ ಕೇಳಿ ಅಷ್ಟೇ. 
 

48

ಇಗ್ನೋರ್ ಮಾಡೋದು
ದೀರ್ಘಕಾಲ ಜೊತೆಯಾಗಿದ್ರೆ, ಆ ರಿಲೇಶನ್ ಶಿಪ್ ನಲ್ಲಿ ಸ್ಪಾರ್ಕ್ (spark in relationship) ಕಡಿಮೆಯಾಗೋದು ಸಾಮಾನ್ಯ. ಹೀಗಿರೋವಾಗ ನೀವು ಸಹ ನಿಮ್ಮ ಸಂಗಾತಿಯ ಕಡೆ ಹೆಚ್ಚು ಗಮನ ಹರಿಸದೇ ಇದ್ರೆ, ಇದರಿಂದಾಗಿ ಆಕೆಗೆ ಇಗ್ನೋರ್ ಮಾಡಿದ ಭಾವನೆ ಮೂಡುತ್ತೆ. ಹುಡುಗನಿಗೆ ತನ್ನ ಮೇಲೆ ಯಾವುದೇ ಇಂಟ್ರೆಸ್ಟ್ ಇಲ್ಲ ಎಂದು ಗೊತ್ತಾದ ಬಳಿಕ ಆ ಸಂಬಂಧವನ್ನ ಬಿಡ್ತಾರೆ. ಇದನ್ನೆ ಜನ ಹುಡುಗಿ ಮೋಸ ಮಾಡಿದ್ಲು ಅಂತಾರೆ. 

58

ಭಾವನಾತ್ಮಕ ಬೆಂಬಲ ಸಿಗದೇ ಇದ್ದಾಗ
ನಿಮ್ಮ ಗೆಳತಿಗೆ ನೀವು ಸಮಯ ನೀಡದಿದ್ದಾಗ, ಅಥವಾ ಅವರಿಗೆ ನಿಮ್ಮ ತುಂಬಾ ಅಗತ್ಯ ಇದ್ದಂತಹ ಸಮಯದಲ್ಲಿ ಅವರು ನಿಮಗೆ ತುಂಬಾ ಸಲ, ಕಾಲ್, ಮೆಸೇಜ್ ಮಾಡುತ್ತಿದ್ದರೂ ಸಹ ನೀವು ಉತ್ತರಿಸದೇ ಇದ್ದರೆ, ನಂತರ ಕ್ರಮೇಣ ಹುಡುಗಿಯರು ಬ್ರೇಕ್ ಅಪ್ ಮಾಡಿಕೊಳ್ತಾರೆ. ನೀವು ಇದನ್ನು ಪದೇ ಪದೇ ಮಾಡುವುದರಿಂದ ಆರಂಭದಲ್ಲಿ ಅವರು ತುಂಬಾನೆ ವೀಕ್ ಆಗ್ತಾರೆ, ಆದರೆ ಸ್ವಲ್ಪ ಸಮಯದ ನಂತರ ಅವರು ನಿಮ್ಮನ್ನು ಬಿಡಲು ನಿರ್ಧರಿಸುತ್ತಾರೆ. ಹುಡುಗರದ್ದೇ ತಪ್ಪಿನಿಂದಾಗಿ, ಹುಡುಗಿಯರು ಅವರನ್ನು ಬಿಡುತ್ತಾರೆ, ಆದರೆ ಮೋಸಗಾರ್ತಿ ಅನ್ನೋ ಟ್ಯಾಗ್ ಮಾತ್ರ ಹುಡುಗಿಯರಿಗೆ. 

68

ನೀವು ಭೌತಿಕವಾಗಿ ಲಭ್ಯವಿಲ್ಲದೇ ಇರೋದು
ಸಂಬಂಧದಲ್ಲಿರುವ ಪ್ರತಿಯೊಬ್ಬ ಹುಡುಗಿಗೆ ತನ್ನದೇ ಆದ ಸಾಮಾನ್ಯ ಅಗತ್ಯಗಳಿವೆ, ಅವುಗಳಲ್ಲಿ ಒಂದು ಲೈಂಗಿಕ ಅಗತ್ಯಗಳು (physical desire). ಪ್ರತಿಯೊಬ್ಬ ಹುಡುಗಿಯು ತನ್ನ ಸಂಗಾತಿಯು ತನ್ನನ್ನು ಪ್ರೀತಿಸಬೇಕೆಂದು ಬಯಸುತ್ತಾಳೆ, ತಮ್ಮ ಸಂಗಾತಿಯೊಂದಿಗೆ ಕ್ವಾಲಿಟಿ ಟೈಂ ಕಳೆಯೋದಕ್ಕೆ ನಿರ್ಧರಿಸ್ತಾರೆ. ಆದರೆ ನೀವು ಅವರಿಗೆ ಯಾವುದೇ ಸಂತೋಷ ನೀಡಲು ಸಾಧ್ಯವಾಗದಿದ್ದಾಗ, ನಿಮ್ಮ ಕೆಲಸ ಮತ್ತು ಸ್ನೇಹಿತರಿಗಾಗಿ ಹುಡುಗಿಯನ್ನು ಇಗ್ನೋರ್ ಮಾಡಿ, ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಹುಡುಗಿ ಆ ಸಂಬಂಧದಲ್ಲಿ ಮುಂದುವರೆಯಲು ಬಯಸೋದೆ ಇಲ್ಲ. 

78

ಈ ಸೂಚನೆಗಳನ್ನ ಅರ್ಥ ಮಾಡಿಕೊಳ್ಳಬೇಕು
ಯಾವುದೇ ಸಂಬಂಧವನ್ನು ಕೊನೆಗೊಳಿಸುವ ಮೊದಲು, ಹುಡುಗಿಯರು ತಮ್ಮ ಸಂಗಾತಿಗೆ ಅನೇಕ ಅವಕಾಶಗಳನ್ನು ನೀಡುತ್ತಾರೆ, ಒಂದು ಬಾರಿ ಅಲ್ಲ, ಎರಡು ಬಾರಿ ಅಲ್ಲ, 10 ಬಾರಿ ನೀವು ಮಾಡುತ್ತಿರುವುದು ಸರಿಯಲ್ಲ, ನಿಮ್ಮ ಈ ವಿಷಯಗಳು ಅಥವಾ ನಡವಳಿಕೆಯಿಂದ ನನಗೆ ನೋವಾಗಿದೆ, ಅಗತ್ಯವಿದ್ದಾಗ ನೀವು ನನ್ನೊಂದಿಗೆ ಇಲ್ಲ ಅನ್ನೋದನ್ನು ಅವರು ಬಾಯಿ ಬಿಟ್ಟು ಹೇಳುತ್ತಾಳೆ.

88

ಒಬ್ಬ ಹುಡುಗಿ ನಿಮಗೆ ಈ ವಿಷಯಗಳನ್ನು ಹೇಳುತ್ತಿರುವಾಗ, ಸಂಬಂಧವನ್ನು ಸುಧಾರಿಸಲು ಮತ್ತು ಉಳಿಸಲು ಅವಳು ನಿಮಗೆ ಅವಕಾಶವನ್ನು ನೀಡುತ್ತಾಳೆ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಆದರೆ ನೀವು ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದಾಗ, ಹುಡುಗಿಯರು ಸಹ ಪ್ರಯತ್ನವನ್ನು ನಿಲ್ಲಿಸಿ ಸಂಬಂಧವನ್ನು ಕೊನೆಗೊಳಿಸಿ ಜೀವನದಲ್ಲಿ ಮುಂದೆ ಸಾಗುತ್ತಾರೆ. ಆದರೆ ಲೋಕದ ದೃಷ್ಟಿಯಲ್ಲಿ ಮಾತ್ರ ಹುಡುಗಿಯರು ಮೋಸಗಾರಾಗಿ ಉಳಿಯುತ್ತಾರೆ. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಂಬಂಧಗಳು
ಪ್ರೀತಿ

Latest Videos
Recommended Stories
Recommended image1
ಡಿವೋರ್ಸ್​ಗೆ ಪತ್ನಿ ಅರ್ಜಿ: ಜೀವನಾಂಶ ತಪ್ಪಿಸಿಕೊಳ್ಳಲು ಕಿಲಾಡಿ ಪತಿ ಭರ್ಜರಿ ಪ್ಲ್ಯಾನ್​! ಹೆಂಡ್ತಿ ಹೊಡೆದರೂ ನಕ್ಕ ಗಂಡ!
Recommended image2
ಈ 9 ಗುಣ ಹೊಂದಿರುವ ಜನರನ್ನು ನಿಮ್ಮ ಜೀವನದಿಂದಲೇ ದೂರವಿಡುವುದು ಉತ್ತಮ
Recommended image3
ಅಮ್ಮ ಹೊಲಿದ ಸ್ವೆಟರ್‌: ಹಾಸಿಗೆ ಹಿಡಿದಿದ್ದರೂ ಮಗನಿಗಾಗಿ ಸ್ವೆಟರ್ ಹೊಲಿದ 91 ವರ್ಷದ ತಾಯಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved