Tips for Couple: ಹೊಸದಾಗಿ ಮದುವೆಯಾದ ಕಪಲ್ಸ್ ಈ ರಹಸ್ಯಗಳನ್ನು ತಿಳ್ಕೊಳ್ಳಿ
ಹೊಸದಾಗಿ ಮದುವೆಯಾದ ಜೋಡಿಗಳು (married couple) ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಹೇಗೆ ಒಬ್ಬರಿಗೊಬ್ಬರು ಜೊತೆಯಾಗಿ ಇರಬೇಕು? ಜೀವನವನ್ನು ಹೇಗೆ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡುತ್ತಾರೆ. ನೀವು ಈ ರೀತಿಯಾಗಿ ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ನಿಮಗಾಗಿ ಸೂಪರ್ ಟಿಪ್ಸ್
ಹೊಸ ಆರಂಭ
ಮದುವೆಯ ಆರಂಭಿಕ ದಿನಗಳಲ್ಲಿ ಸಂಗಾತಿಯನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು, ಅವರ ಇಷ್ಟ - ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಹೊಸ ಆರಂಭಕ್ಕೆ ಮುಖ್ಯವಾಗಿರುವುದೇ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ (understanding) ಮಾಡಿಕೊಳ್ಳುವುದು.
ಅರೇಂಜ್ಡ್ ಮ್ಯಾರೇಜ್ ನಲ್ಲಿ ಹೊಂದಾಣಿಕೆ
ನೀವು ಅರೇಂಜ್ಡ್ ಮ್ಯಾರೇಜ್ (arranged marriage) ಅನ್ನು ಆರಿಸಿಕೊಂಡಿದ್ದರೆ, ಅರ್ಥಮಾಡಿಕೊಳ್ಳಲು ಸಮಯ ನೀಡಿ. ಇದು ಮೊದಲಿನಿಂದಲೂ ಸಂಬಂಧದಲ್ಲಿ ತಿಳುವಳಿಕೆಗೆ ಕಾರಣವಾಗುತ್ತದೆ. ಅರೇಂಜ್ ಮ್ಯಾರೇಜ್ ಎಂದರೆ ಒಬ್ಬರಿಗೊಬ್ಬರ ಬಗ್ಗೆ ಹೆಚ್ಚು ಗೊತ್ತಿರುವುದಿಲ್ಲ. ಹೇಗಿದ್ದಾರೆ ಎನ್ನುವುದು ಸಹ ಗೊತ್ತಿರುವುದಿಲ್ಲ, ಆದುದರಿಂದ ಅರ್ಥ ಮಾಡಿಕೊಳ್ಳಿ.
ಮನಸ್ಸಿನ ಮಾತನ್ನು ತಿಳಿಸಿ
ನಿಮ್ಮ ಸಂಗಾತಿಯೊಂದಿಗೆ (partner) ಮುಕ್ತವಾಗಿ ಮಾತನಾಡಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ ಮತ್ತು ಎಂದಾದರೂ ತಪ್ಪು ತಿಳುವಳಿಕೆ ಇದ್ದರೆ, ತಕ್ಷಣವೇ ಅದನ್ನು ತೆಗೆದುಹಾಕಿ. ಮನಸ್ಸು ಬಿಚ್ಚಿ ಮಾತನಾಡಿದರೆ ಹೊಂದಾಣಿಕೆಯಾಗಿ ಬಾಳಲು ಸುಲಭವಾಗುತ್ತದೆ.
ನಿರ್ಬಂಧ ಹೇರಬೇಡಿ
ನಿಮ್ಮ ಸಂಗಾತಿಗೆ ಅಡ್ಡಿಪಡಿಸುವುದು ಮತ್ತು ಸಂಭಾಷಣೆಯ ಮೇಲೆ ನಿರ್ಬಂಧಗಳನ್ನು ಹೇರುವುದು ನಿಮ್ಮ ಮುಂದಿರುವ ವ್ಯಕ್ತಿಯ ಮನಸ್ಸಿನಲ್ಲಿ ಸಂದೇಹಗಳನ್ನು ಸೃಷ್ಟಿಸುತ್ತದೆ. ಅವರ ಅಸೆ ಮತ್ತು ಆಕಾಂಕ್ಷೆಗಳನ್ನು ಅವರಿಗೆ ಮಾಡಲು ಬಿಡಿ. ಯಾವುದನ್ನೂ ತಡೆಯಬೇಡಿ.
ಜೀವನ ಯೋಜನೆಯನ್ನು ಹಂಚಿಕೊಳ್ಳಿ
ನೀವಿಬ್ಬರೂ ಇನ್ನು ಜೊತೆಯಾಗಿ ಜೀವಿಸಬೇಕಾದವರು, ಆದುದರಿಂದ ನೀವು ಭವಿಷ್ಯದ ಯೋಜನೆಯನ್ನು (future planning) ಹೊಂದಿದ್ದರೆ, ಅದನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಮತ್ತು ಅವರ ಯೋಜನೆಯನ್ನು ಜಾಗರೂಕತೆಯಿಂದ ಆಲಿಸಿ. ಪ್ರತಿ ಹೆಜ್ಜೆಯನ್ನು ಜೊತೆಯಾಗಿ ಯೋಜನೆ ಮಾಡಿದರೆ ಕಾರ್ಯ ಸಾಧನೆ ಮಾಡಲು ಸುಲಭವಾಗುತ್ತದೆ.
ಸ್ಪೇಸ್ ನೀಡಿ (give space)
ಒಬ್ಬರನ್ನೊಬ್ಬರು ನೋಡಿಕೊಳ್ಳಿ, ಎಲ್ಲಾ ವಿಷಯದಲ್ಲೂ ಜೊತೆಯಾಗಿ ಸೇರಿ ಮಾಡಬೇಕು ನಿಜಾ, ಆದರೆ ಸ್ಪೇಸ್ ನೀಡುವುದನ್ನು ಮಾತ್ರ ಮರೆಯಬೇಡಿ. ಪರಸ್ಪರರ ಜೀವನದಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಅವರಿಗೆ ಹೇಗೆ ಬೇಕೋ ಹಾಗೆ ಇರಲು ಬಿಡಿ.
ಫ್ಯಾಮಿಲಿ ಬಾಂಡ್ (familu bonding)
ಸಂಗಾತಿಯ ಕುಟುಂಬವನ್ನು ಭೇಟಿ ಮಾಡಿ ಮತ್ತು ಅವರೊಂದಿಗೆ ಸಂವಹನ ನಡೆಸಿ, ಇದು ಅವರೊಂದಿಗಿನ ನಿಮ್ಮ ಬಾಂಧವ್ಯವನ್ನು ಸಹ ಬಲಪಡಿಸುತ್ತದೆ. ಎರಡು ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದರೆ ಅದರಿಂದ ಎಲ್ಲರ ಬಾಂಧವ್ಯ ಹೆಚ್ಚುತ್ತದೆ.
ವಿಶೇಷವಾದ ಭಾವನೆಯನ್ನು ಅನುಭವಿಸಿ
ನೀವು ಸಣ್ಣ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಗಂಡನನ್ನು ಸಂತೋಷಪಡಿಸಬಹುದು. ಅವರಿಗೆ ಇಂಪ್ರೆಸ್ ಮಾಡುವಂತಹ ಕೆಲಸಗಳನ್ನು ಮಾಡುತ್ತಿರಿ. ಅವರನ್ನು ಹೊಗಳಿ, ಅವರ ಜೊತೆ ಯಾಕೆ ಜೀವಿಸಲು ಬಯಸುತ್ತೀರಿ ಅನ್ನೋದನ್ನು ಮನಸ್ಸು ಬಿಚ್ಚಿ ಹೇಳಿ. ಇದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ.