ಮನೆಯಲ್ಲಿಯೇ ನೋಡಿದ ಹುಡುಗಿ, ಹುಡುಗನನ್ನು ಮದುವೆಯಾಗೋ ಮುನ್ನ...
ಭಾರತದಲ್ಲಿ ಸಂಬಂಧಗಳು ತೀವ್ರ ಪ್ರಮಾಣದಲ್ಲಿ ಬದಲಾಗಿವೆ, ಆದರೆ ವ್ಯವಸ್ಥಿತ ಅರೇಂಜ್ಡ್ ಮ್ಯಾರೇಜ್ ನಮ್ಮ ಸಂಸ್ಕೃತಿಯಲ್ಲಿ ಇನ್ನೂ ಸಾಮಾನ್ಯವಾಗಿದೆ. ಲವ್ ಮ್ಯಾರೇಜ್ ಆಗಲು ಜನರು ಇಷ್ಟಪಟ್ಟರೂ, ಕೆಲವರು ಸಾಂಪ್ರದಾಯಿಕ ರೀತಿಯಲ್ಲಿ ಅರೇಂಜ್ಡ್ ಮ್ಯಾರೇಜ್ ಇಷ್ಟಪಡುತ್ತಾರೆ. ಅರೇಂಜ್ಡ್ ಮದುವೆಗಳು ನಮ್ಮ ಸಮಾಜದ ಒಂದು ದೊಡ್ಡ ಭಾಗ. ಆದರೆ ಅರೇಂಜ್ಡ್ ಮ್ಯಾರೇಜ್ ಆಗುವ ಮುನ್ನ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏನವು?
ಮದುವೆ ಎಂದರೆ ಅದು ಸ್ವರ್ಗದಲ್ಲಿ ನಿಶ್ಚಿತವಾಗಿರುತ್ತದೆ. ಮದುವೆಯಾದಾಗ, ಕಾಳಜಿವಹಿಸುವ ಮತ್ತು ಪ್ರೀತಿಸುವ ಒಬ್ಬ ವ್ಯಕ್ತಿಯನ್ನು ಕಂಡುಕೊಳ್ಳುತ್ತೀರಿ. ಅರೇಂಜ್ಡ್ ಮ್ಯಾರೇಜ್ ಆಗುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ. ಸಂಪೂರ್ಣ ಪರಿಕಲ್ಪನೆಯನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ತಿಳಿದಿರಬೇಕಾದ ಕೆಲವು ವಿಷಯಗಳಿವು.
ಇಟ್ ವಿಲ್ ಟೇಕ್ ಟೈಮ್
ಮದುವೆ ಎಂದರೆ ಸುಲಭದ ಮಾತಲ್ಲ, ಸೂಕ್ತವಾದ ಮ್ಯಾಚ್ ಹುಡುಕುವುದರಿಂದ ಹಿಡಿದು ಅವರನ್ನು ಭೇಟಿಯಾಗುವವರೆಗೆ, ಇವೆಲ್ಲವೂ ಬೇಗನೆ ಆಗಲು ಸಾಧ್ಯವಿಲ್ಲ. ಸಮಯ ತೆಗೆದುಕೊಳ್ಳುತ್ತದೆ ಏಕೆಂದರೆ ಅರೇಂಜ್ಡ್ ಮ್ಯಾರೇಜ್ ಪ್ರಕ್ರಿಯೆಗಳೇ ಸುದೀರ್ಘವಾದವು.
ಅರೇಂಜ್ಡ್ ಮ್ಯಾರೇಜ್ ಆಗುವಾಗ ನಿಮಗೆ ವ್ಯಕ್ತಿಯ ಬಗ್ಗೆ ಏನೂ ತಿಳಿದಿರುವುದಿಲ್ಲ. ಇದು ಕುಟುಂಬವು ನಿಮಗೆ ಪರಿಚಯಿಸುತ್ತಿರುವ ವ್ಯಕ್ತಿಯಾಗಿದ್ದು, ಎಲ್ಲವೂ ಸರಿಯಾಗಲು ಸಮಯ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಮದುವೆಯಾಗುವವರು ತಿಳಿದುಕೊಳ್ಳಬೇಕಾದ ಕೆಲವು ಬೌಂಡರಿಗಳಿವೆ. ಎಲ್ಲವನ್ನೂ ನಿಧಾನವಾಗಿ ಅರ್ಥ ಮಾಡಿ. ಯಾವುದನ್ನು ಅವಸರದಲ್ಲಿ ನಿರ್ಧರಿಸಲು ಹೋಗಬೇಡಿ.
ಫ್ರಾಂಕ್ ಆಗಿರಿ
ಲವ್ ಮಾಡುತ್ತಿದ್ದರೆ, ಒಬ್ಬರಿಗೊಬ್ಬರು ತಿಳಿದುಕೊಳ್ಳಲು ಸಾಕಷ್ಟು ಸಮಯವಿರುತ್ತದೆ. ಆದರೆ ಅರೇಂಜ್ಡ್ ಮ್ಯಾರೇಜ್ ಆದರೆ ಅದು ಸವಾಲಿನ ಸಂಗತಿಯಾಗಿದೆ.ಅರೇಂಜ್ಡ್ ಮ್ಯಾರೇಜ್ ಆಗುವಾಗ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ಕಷ್ಟ. ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಸಮಯ ಬೇಕಾಗಿರುತ್ತದೆ.
ಅರೇಂಜ್ಡ್ ಮ್ಯಾರೇಜ್ ಆಗುವ ಎಲ್ಲಾ ವಿಷಯಗಳನ್ನು ಸಂದರ್ಭದಲ್ಲಿ ಯೋಚಿಸಿ ನಿರ್ಧಾರ ಮಾಡಬೇಕು. ಸುಮ್ಮನೆ ಮದುವೆ ಒಪ್ಪಿಗೆ ಸೂಚಿಸುವ ಬದಲು ಸಂಗಾತಿಯಿಂದ ನಿಮಗೆ ಬೇಕಾದುದನ್ನು ಅವರಿಗೆ ತಿಳಿಸಿ ಮತ್ತು ಅವರು ಏನು ಹುಡುಕುತ್ತಿದ್ದಾರೆ ಎಂಬುದನ್ನು ಕೇಳಿ ತಿಳಿಯಿರಿ.
ಹೊಂದಾಣಿಕೆ
ಅರೇಂಜ್ಡ್ ಮ್ಯಾರೇಜ್‌ಗೆ ಓಕೆ ಹೇಳುವ ಮೊದಲು ಯೋಚಿಸಬೇಕಾದ ಒಂದು ಪ್ರಮುಖ ವಿಷಯವೆಂದರೆ ಹೊಂದಾಣಿಕೆ. ಮದುವೆಗೆ ಬಂದಾಗ ಭಾವನಾತ್ಮಕ ಮತ್ತು ಆರ್ಥಿಕ ಹೊಂದಾಣಿಕೆ ಮುಖ್ಯ. ಮದುವೆಯಾದ ಮೇಲೆ ಒಟ್ಟಾಗಿ ಜೀವನ ಸಾಗಿಸಬೇಕಾಗಿರುವುದರಿಂದ ಹೊಂದಾಣಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.
ಈಗಿನ ಸಮಯದ ಮತ್ತು ವಯಸ್ಸಿನ ಬಗ್ಗೆ ಮಾತನಾಡುವಾಗ ಹೊಂದಾಣಿಕೆಯು ಇದು ಒಂದು ಪ್ರಮುಖ ಅಂಶವಾಗಿದೆ ಮತ್ತು ಭವಿಷ್ಯದಲ್ಲಿ ಯಾವುದೇ ತಪ್ಪು ಗ್ರಹಿಕೆಯಾಗದಂತೆ ಆರ್ಥಿಕ ಹೊಂದಾಣಿಕೆ ಕೂಡ ಮುಖ್ಯವಾಗಿದೆ. ಆದುದರಿಂದ ಮದುವೆಗೆ ಮುನ್ನ ಸಾಧ್ಯವಾದಷ್ಟು ಜೊತೆಯಾಗಿ ಸಮಯ ಕಳೆಯಿರಿ.
ಪಾಸ್ಟ್ ಬಗ್ಗೆ ಮುಕ್ತವಾಗಿರಿ
ಅರೇಂಜ್ಡ್ ಮ್ಯಾರೇಜ್ ನ್ನು ನಡೆಸಲು ಹೆಚ್ಚು ಸಮಯವಿಲ್ಲದ ಕಾರಣ, ಸಂಗಾತಿಗೆ ನಿಮ್ಮ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಹೊಸ ಜೀವನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ನಿಮ್ಮ ಹಿಂದಿನ ಜೀವನದ ಕುರಿತು ಮಾತನಾಡುವುದು ಯಾವಾಗಲೂ ಒಳ್ಳೆಯದು. ಇದರಿಂದ ಒಬ್ಬರಿಗೊಬ್ಬರನ್ನು ತಿಳಿಯಲು ಸಹಾಯವಾಗುತ್ತದೆ.
ಇಬ್ಬರೂ ಪರಸ್ಪರರ ಹಿಂದಿನದನ್ನು ಅಂದರೆ ವಿದ್ಯಾಭ್ಯಾಸ, ಕೆಲಸ, ಲವ್ ಲೈಫ್ ಹೀಗೆ ಹಲವು ವಿಷಯಗಳನ್ನು ತಿಳಿದುಕೊಳ್ಳುವುದು ವ್ಯಕ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ವ್ಯಕ್ತಿಯ ಬಗ್ಗೆಯೂ ಸಾಕಷ್ಟು ತಿಳಿಸುತ್ತದೆ.
ಕುಟುಂಬವನ್ನು ತಿಳಿದುಕೊಳ್ಳಿ
ಅರೇಂಜ್ಡ್ ಮ್ಯಾರೇಜ್ ಆಗುವಾಗ, ಕುಟುಂಬವನ್ನೂ ತಿಳಿದುಕೊಳ್ಳಬೇಕು. ಅರೇಂಜ್ಡ್ ಮ್ಯಾರೇಜ್ ಆದಾಗ ಹೊಂದಾಣಿಕೆ ಅತ್ಯಗತ್ಯ. ಅಷ್ಟೇ ಅಲ್ಲ ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುವುದು ಅತ್ಯಗತ್ಯ ಏಕೆಂದರೆ ನೀವು ಅವರ ಕುಟುಂಬದೊಂದಿಗೆ ಜೀವನ ಕಳೆಯುತ್ತೀರಿ.
ಭವಿಷ್ಯದಲ್ಲಿ ಆರೋಗ್ಯಕರ ಸಂಬಂಧವನ್ನು ಹೊಂದಲು ಮದುವೆಯಾಗುವ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡರೆ, ಮುಂದೆ ಅವರೊಂದಿಗೆ ಬೆರೆಯಲು ಸುಲಭವಾಗುತ್ತದೆ. ಇದರಿಂದ ಬಾಂಧವ್ಯವೂ ಗಟ್ಟಿಯಾಗುತ್ತದೆ.