ಶಿವ -ಪಾರ್ವತಿಯಂತೆ ಆದರ್ಶ ಸತಿ-ಪತಿಗಳಾಗ್ತಾರೆ ಈ ರಾಶಿಯ ಜೋಡಿಗಳು
ಶಿವ ಪಾರ್ವತಿಯನ್ನು ಈ ಲೋಕದ ಆದರ್ಶ ದಂಪತಿಗಳು ಎನ್ನಲಾಗುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಶಿವ ಮತ್ತು ಪಾರ್ವತಿಯಂತಹ ಜೋಡಿ ಎಂದು ಪರಿಗಣಿಸಲಾಗುವ ಕೆಲವು ರಾಶಿಗಳಿವೆ. ಅವು ಯಾವುವು ನೋಡೋಣ.

ಶಿವ ಮತ್ತು ಪಾರ್ವತಿಯಂತಹ ಜೋಡಿ ಎಲ್ಲೂ ಇರೋದಕ್ಕೆ ಸಾಧ್ಯವಿಲ್ಲ. ಪತ್ನಿಗಾಗಿ ಅರ್ಧ ದೇಹವನ್ನೇ ನೀಡಿ ಅರ್ಧನಾರೀಶ್ವರನಾದ ಶಿವ. ಈ ಬ್ರಹ್ಮಾಂಡದಲ್ಲಿ ಆದರ್ಶ ದಂಪತಿಗಳಿಗೆ ಬೆಸ್ಟ್ ಉದಾಹರಣೆ ಅಂದ್ರೆ ಅದು ಶಿವ ಪಾರ್ವತಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಜನರು ಶಿವ ಪಾರ್ವತಿಯಂತೆ ಬೆಸ್ಟ್ ಜೋಡಿಯಾಗಬಲ್ಲರು. ಆ ರಾಶಿಗಳು ಯಾವುವು ನೋಡೋಣ.
ವೃಶ್ಚಿಕ ಮತ್ತು ವೃಷಭ ರಾಶಿಯ ಜನರು ಅದ್ಭುತ ಜೋಡಿಯಾಗುತ್ತಾರೆ. ವೃಶ್ಚಿಕ ರಾಶಿಯವರು ಆಳವಾಗಿ ಯೋಚನೆ ಮಾಡುವವರೂ ಹಾಗೂ ನಿಗೂಢ ವ್ಯಕ್ತಿಗಳಾಗಿದ್ದರೆ, ವೃಷಭ ರಾಶಿಯವರು ತಾಳ್ಮೆ ಮತ್ತು ಸ್ಥಿರ ಸ್ವಭಾವದವರು. ಈ ಎರಡು ರಾಶಿಯ ಜೋಡಿ ಆದರ್ಶ ದಂಪತಿಗಳಾಗುತ್ತಾರೆ.
ಈ ಜೋಡಿಯು ಶಿವ ಮತ್ತು ಪಾರ್ವತಿಯಂತೆ, ಅಲ್ಲಿ ವೃಶ್ಚಿಕ ರಾಶಿಯ ನಿಗೂಢ ಮತ್ತು ಭಾವನಾತ್ಮಕ ಭಾಗವು ವೃಷಭ ರಾಶಿಯ ಸ್ಥಿರತೆಯಿಂದ ಸಮತೋಲನ ಮಾಡುತ್ತೆ. ಈ ಜೋಡಿಯು ಶಿವ ಮತ್ತು ಪಾರ್ವತಿಯಂತೆ ಅದ್ಭುತ ಜೋಡಿಗಳಾಗುತ್ತಾರೆ.
ಇನ್ನು ಸಿಂಹ ಮತ್ತು ಕನ್ಯಾ ರಾಶಿಗಳು ಸಹ ಶಿವ ಪಾರ್ವತಿಯಂತೆ ಹೇಳಿ ಮಾಡಿಸಿದ ಜೋಡಿಯಾಗುತ್ತಾರೆ. ಸಿಂಹದ ಉರಿಯುವ ಸ್ವಭಾವವು ಕನ್ಯೆಯ ಶಾಂತತೆಯನ್ನು ಸಮತೋಲನಗೊಳಿಸುತ್ತದೆ. ಶಿವ ಮತ್ತು ಪಾರ್ವತಿಯ ನಡುವಿನ ಸಂಬಂಧದಂತೆ, ಈ ಜೋಡಿಯೂ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ, ಅಲ್ಲಿ ಒಂದು ದೃಢತೆಯನ್ನು ನೀಡುತ್ತದೆ ಮತ್ತು ಇನ್ನೊಂದು ಭಾವನಾತ್ಮಕ ಸ್ಥಿರತೆಯನ್ನು ನೀಡುತ್ತದೆ.
ಇದಲ್ಲದೇ ಮೇಷ ರಾಶಿ ಹಾಗೂ ತುಲಾ ರಾಶಿಗಳು ಸಹ ಉತ್ತಮ ಜೋಡಿಗಳೇ. ಮೇಷ ರಾಶಿಯ ವ್ಯಕ್ತಿಗಳು ಸಾಹಸಮಯ, ನಾಯಕತ್ವ ಆಧಾರಿತ, ಹಾಗೂ ಬ್ರೈಟ್ ಆಗಿರುವ ಸ್ವಭಾವ ಹೊಂದಿದ್ದರೆ, ತುಲಾ ರಾಶಿಯ ವ್ಯಕ್ತಿಗಳು ಸಮತೋಲಿತ, ಶಾಂತಿ ಪ್ರಿಯ ಮತ್ತು ರಾಜತಾಂತ್ರಿಕರಾಗಿರುತ್ತಾರೆ.
ಪಾರ್ವತಿಯ ಬುದ್ಧಿವಂತಿಕೆಯು ಶಿವನ ಉಗ್ರ ರೂಪವನ್ನು ಹೇಗೆ ಸಮತೋಲನಗೊಳಿಸುತ್ತದೆಯೋ ಅದೇ ರೀತಿ ಮೇಷ ರಾಶಿಯ ಸಾಹಸಮಯ, ಕೆಚ್ಚಿನ ಸ್ವಭಾವವನ್ನು ತುಲಾ ರಾಶಿಯ ಶಾಂತ ಸ್ವಭಾವ ಬ್ಯಾಲೆನ್ಸ್ ಮಾಡುತ್ತೆ. ಈ ಎರಡು ರಾಶಿಗಳ ಸಂಬಂಧವು ಧೈರ್ಯ, ಪ್ರಣಯ ಮತ್ತು ಸಾಮರಸ್ಯದಿಂದ ತುಂಬಿರುತ್ತೆ.
ಮೀನಾ ಮತ್ತು ಕಿಂಭಾ ರಾಶಿಯ ಜೋಡಿಗಳು ಸಹ ಶಿವ -ಪಾರ್ವತಿಯಂತೆ ಉತ್ತಮ ಜೋಡಿ. ಮೀನ ರಾಶಿಯಲ್ಲಿ ಜನಿಸಿದ ಜನರು ಆಧ್ಯಾತ್ಮಿಕ, ಸೂಕ್ಷ್ಮ ಮತ್ತು ಭಾವನಾತ್ಮಕವಾಗಿದ್ದರೆ, ಕುಂಭ ರಾಶಿಯಯವರು ಬೌದ್ಧಿಕ, ಸ್ವತಂತ್ರ ಮತ್ತು ನಾವೀನ್ಯತೆಯಲ್ಲಿ ನಂಬಿಕೆ ಹೊಂದಿದ್ದಾರೆ. ಅವರಿಬ್ಬರೂ ಪರಸ್ಪರ ಸ್ವಾತಂತ್ರ್ಯವನ್ನು ನೀಡುತ್ತಾರೆ ಮತ್ತು ಆಳವಾದ ಆಧ್ಯಾತ್ಮಿಕ ತಿಳುವಳಿಕೆಯೊಂದಿಗೆ ಸಂಪರ್ಕ ಸಾಧಿಸುತ್ತಾರೆ.