ಸಂಗಾತಿ ಹೀಗೆ ಮಾಡ್ತಿದ್ರೆ ಅವ್ರು ನಿಮ್ಮನ್ನ ಲವ್ ಮಾಡ್ತಿಲ್ಲ, ಯೂಸ್ ಮಾಡ್ತಿದ್ದಾರೆ ಅನ್ನೋದನ್ನ ತಿಳ್ಕೊಳಿ!
ನೀವು ನಿಮ್ಮ ಸಂಗಾತಿಯನ್ನು ತುಂಬಾನೆ ಪ್ರೀತಿಸುತ್ತೀದ್ದೀರಿ. ಆದರೆ ಅವರು ಮಾತ್ರ ನಿಮ್ಮನ್ನು ಪ್ರೀತಿಸೋ ಬದಲು ಯೂಸ್ ಮಾಡ್ತಾ ಇದ್ದಾರೆ. ಇದನ್ನ ಕಂಡು ಹಿಡಿಯೋದು ಹೇಗೆ?
ಯಾವುದೇ ಸಂಬಂಧದಲ್ಲಿ ಟ್ರಾನ್ಸಪರೆನ್ಸಿ, ನಂಬಿಕೆ, ಪ್ರೀತಿ ಇರೋದು ಬಹಳ ಮುಖ್ಯ, ಆದರೆ ಈ ಸಂಬಂಧದಲ್ಲಿ ಎಲ್ಲವೂ ಸರಿಯಾಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸಂಬಂಧದಲ್ಲಿ ಡಾಮಿನೇಟ್ ಮಾಡಿದರೆ, ಮತ್ತೆ ಕೆಲವರು ಸ್ವಾರ್ಥಿಗಳಾಗಿರುತ್ತಾರೆ. ಆದರೆ ಇನ್ನೂ ಕೆಲವರು ಇರುತ್ತಾರೆ ಅವರು ತಮ್ಮ ಸಂಗಾತಿಯನ್ನು ಯೂಸ್ ಮಾಡ್ತಾರೆ.
ಹೌದು, ನಿಮ್ಮ ಸಂಗಾತಿಯು ನಿಮ್ಮನ್ನು ಟೇಕನ್ ಫಾರ್ ಗ್ರಾಂಟೆಡ್ (Taken for granted) ಆಗಿ ಯೂಸ್ ಮಾಡ್ತಿದ್ದಾರಾ? ಅವರ ದೈಹಿಕ ಮತ್ತು ಆರ್ಥಿಕ ಅಗತ್ಯಗಳನ್ನು ಪೂರೈಸಲು ಮಾತ್ರ ನಿಮ್ಮೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುತ್ತಿದ್ದರೆ, ನೀವು ಜಾಗರೂಕರಾಗಿರಬೇಕು. ನಿಮ್ಮ ಸಂಗಾತಿ ನಿಮ್ಮನ್ನು ಬಳಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಹೇಗೆ ಕಂಡುಹಿಡಿಯಬಹುದು ನೋಡೋಣ.
ಯಾವಾಗಲೂ ಗಿಫ್ಟ್ ಕೇಳುವುದು: ನಿಮ್ಮ ಸಂಗಾತಿ ಯಾವಾಗಲೂ ದುಬಾರಿ ಉಡುಗೊರೆಗಳನ್ನು ನೀಡಲು, ಪ್ರಯಾಣಿಸಲು ಮತ್ತು ಐಷಾರಾಮಿ ಹವ್ಯಾಸಗಳನ್ನು(luxury lifestyle) ಪೂರೈಸಲು ಮತ್ತು ಖರ್ಚು ಮಾಡಲು ನಿಮ್ಮನ್ನು ಒತ್ತಾಯಿಸುತ್ತಿದ್ದರೆ, ಅವರು ನಿಮ್ಮನ್ನು ತಮ್ಮ ಲೈಫ್ ಸ್ಟೈಲನ್ನು ಕಾಪಾಡಿಕೊಳ್ಳಲು ಮಾತ್ರ ಬಳಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಿ.
ಕೆಲಸವಿದ್ದಾಗ ಮಾತ್ರ ನಿಮ್ಮನ್ನು ನೆನಪಿಸೋರು: ನಿಮ್ಮಿಂದ ಏನಾದರೂ ಕೆಲಸ ಆಗಬೇಕು ಎಂದಾಗ ಮಾತ್ರ ನಿಮ್ಮ ಸಂಗಾತಿಯು ನಿಮ್ಮನ್ನು ಮಿಸ್ ಮಾಡಿಕೊಂಡರೆ ಮತ್ತು ಉಳಿದ ಸಂದರ್ಭಗಳಲ್ಲಿ ನಾನು ಬ್ಯುಸಿ ಇದ್ದೇನೆ ಎಂದು ಹೇಳುವ ಮೂಲಕ ವಿಷಯವನ್ನು ತಪ್ಪಿಸಿದರೆ, ನಿಮ್ಮ ಸಂಗಾತಿ ನಿಮ್ಮನ್ನು ಬಳಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಿ.
ರಿಲೇಶನ್ ಶಿಪ್ ಅಂದ್ರೆ ಜೊತೆಯಾಗಿ ಸುತ್ತಾಡೋದು ಮಾತ್ರ ಅಲ್ಲ: ಸಂಬಂಧ (relationship) ಎಂದರೆ ಸಂಗಾತಿಯೊಂದಿಗೆ ಡೇಟಿಂಗ್ ಗೆ ಹೋಗುವುದು, ಸುತ್ತಾಡುವುದು, ಚಲನಚಿತ್ರಗಳನ್ನು ನೋಡುವುದು ಮಾತ್ರವಲ್ಲದೆ ಪರಸ್ಪರ ಭಾವನಾತ್ಮಕವಾಗಿ ಸಂಪರ್ಕ ಹೊಂದಿರುವುದು ಮುಖ್ಯ. ನಿಮ್ಮ ಸಂಗಾತಿಯೊಂದಿಗೆ ಆ ಸಂಪರ್ಕವನ್ನು ಅನುಭವಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಈ ಸಂಬಂಧವನ್ನು ಬಿಟ್ಟು ಬಿಡೋದು ಉತ್ತಮ.
ನೀವು ಮಾತ್ರ ಮಾತನಾಡೋದು: ಸಂಬಂಧದಲ್ಲಿ ಪರಸ್ಪರ ಮಾತುಕತೆ ಹೊಂದಿರುವುದು (communication)ಬಹಳ ಮುಖ್ಯ, ಆದರೆ ಪ್ರತಿ ಬಾರಿ ನೀವೆ ಮಾತನಾಡೋದು, ಮೆಸೆಜ್ ಮಾಡೋದು, ಫೋನ್ ಮಾಡೋದು ಮಾಡಿದ್ರೆ, ಅವರು ಅಗತ್ಯ ಇದ್ದಾಗ ಮಾತ್ರ ಕರೆ ಮಾಡಿದ್ರೆ, ಅದರರ್ಥ ಅವರು ನಿಮ್ಮನ್ನ ಯೂಸ್ ಮಾಡ್ತಿದ್ದಾರೆ.
ಅಗತ್ಯವಿದ್ದಾಗ ನಿಮ್ಮ ನೆರವಿಗೆ ಬರದವರು: ನಿಮಗೆ ಸಂಗಾತಿಯ ಅಗತ್ಯವಿದ್ದಾಗ ಮತ್ತು ಆ ಸಮಯದಲ್ಲಿ ಅವರು ಬ್ಯುಸಿಯಾಗಿದ್ರೆ, ನಿಮ್ಮ ಕಷ್ಟದಲ್ಲಿ ಅವರು ಯಾವತ್ತೂ ನೆರವಿಗೆ ಬಾರದೇ ಇದ್ರೆ,, ಅವರಿಗೆ ನಿಮ್ಮ ಬಗ್ಗೆ ಯಾವುದೇ ಫೀಲಿಂಗ್ಸ್ ಇಲ್ಲ, ಬದಲಾಗಿ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪಡೆಯಲು ಪ್ರಯತ್ನಿಸುತ್ತಾರೆ ಅನ್ನೋದನ್ನು ನೆನಪಿಡಿ.