ಇದು ಟೀಮ್ ಇಂಡಿಯಾದ ಡಿವೋರ್ಸ್ XI; ಮನೀಷ್ ಪಾಂಡೆ, ಚಾಹಲ್ ಹೊಸ ಎಂಟ್ರಿ!
ಟೀಮ್ ಇಂಡಿಯಾದ ಹಲವು ಕ್ರಿಕೆಟಿಗರು ವಿಚ್ಛೇದನ ಪಡೆದುಕೊಂಡಿದ್ದಾರೆ. ಶಿಖರ್ ಧವನ್, ಅಜರುದ್ದೀನ್, ಕಾಂಬ್ಳಿ, ರವಿಶಾಸ್ತ್ರಿ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಮನೋಜ್ ಪ್ರಭಾಕರ್, ಚಾಹಲ್, ಶ್ರೀನಾಥ್, ಶಮಿ ಈ ಪಟ್ಟಿಯಲ್ಲಿದ್ದಾರೆ.
ಕೊನೆಗೂ ಟೀಮ್ ಇಂಡಿಯಾದ ಡಿವೋರ್ಸ್ ಇಲೆವೆನ್ ರೆಡಿಯಾಗಿದೆ. ಮನೀಷ್ ಪಾಂಡೆ, ಯಜುವೇಂದ್ರ ಚಾಹಲ್ ಈ ಲಿಸ್ಟ್‌ಗೆ ಹೊಸ ಸೇರ್ಪಡೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಇವರಿಂದ ವಿಚ್ಛೇದನದ ಸುದ್ದಿ ಬರದೇ ಇದ್ದರೂ, ಮೂಲಗಳ ಪ್ರಕಾರ ಇವರಿಬ್ಬರ ವೈಯಕ್ತಿಕ ಜೀವನದಲ್ಲೂ ಡಿವೋರ್ಸ್ ನಿಜವಾಗುವ ಲಕ್ಷಣ ಕಾಣುತ್ತಿದೆ.
ಶಿಖರ್ ಧವನ್: ಟೀಮ್ ಇಂಡಿಯಾ ಆರಂಭಿಕ ಆಟಗಾರ ಆಯೇಷಾ ಮುಖರ್ಜಿಗೆ 2021ರಲ್ಲಿ ವಿಚ್ಛೇದನ ನೀಡಿದ್ದರು. 8 ವರ್ಷಗಳ ಮದುವೆ ಡಿವೋರ್ಸ್ ಮೂಲಕ ಅಂತ್ಯವಾಯಿತು. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಚೇದನ ಪಡೆದಿದ್ದಾಗಿ ದಂಪತಿ ತಿಳಿಸಿದರೂ, ಇವರಿಬ್ಬರ ನಡುವಿನ ರಂಪಾಟ ಸಾರ್ವಜನಿಕವಾಗಿ ಸುದ್ದಿಯಾಯಿತು.
ಮೊಹಮದ್ ಅಜರುದ್ದೀನ್: ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಜೀವನದಲ್ಲಿ ಎರಡೆರಡು ವಿಚ್ಛೇದನಗಳಾಗಿವೆ. ಮೊದಲಿಗೆ ನೌರೀನ್ ಎನ್ನುವ ಯುವತಿಯ ವಿವಾಹವಾಗಿದ್ದ ಅಜರುದ್ದೀನ್ ಆಕೆಗೆ ವಿಚ್ಛೇದನ ನೀಡಿ ಬಾಲಿವುಡ್ ನಟಿ ಸಂಗೀತಾ ಬಿಜಲಾನಿಯನ್ನು 1996ರಲ್ಲಿ ವಿವಾಹವಾಗಿದ್ದರು. ಬಳಿಕ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಜೊತೆಗಿನ ಅನೈತಿಕ ಸಂಬಂಧ ಸುದ್ದಿಯಾದ ಬಳಿಕ 2010ರಲ್ಲಿ ಸಂಗೀತಾ ಬಿಜಲಾನಿ, ಅಜರುದ್ದೀನ್‌ಗೆ ವಿಚ್ಛೇದನ ನೀಡಿದ್ದರು.
ವಿನೋದ್ ಕಾಂಬ್ಳಿ: ಮಾಜಿ ಆಟಗಾರ ವಿನೋದ್ ಕಾಂಬ್ಳಿ 2005ರಲ್ಲಿ ತನ್ನ ಬಾಲ್ಯದ ಗೆಳತಿ ನಿಯೋಲ್ಲಾ ಲೆವಿಸ್‌ಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ಆಂಡ್ರೆಯಾ ಹೆವಿಟ್‌ರನ್ನು ಮದುವೆಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರು.
ರವಿಶಾಸ್ತ್ರಿ: ಟೀಮ್ ಇಂಡಿಯಾ ಆಟಗಾರ ಹಾಗೂ ಮಾಜಿ ಕೋಚ್ ರವಿಶಾಸ್ತ್ರಿ ಬಾಲ್ಯದ ಗೆಳತಿ ರಿತು ಸಿಂಗ್‌ರನ್ನು ಮದುವೆಯಾಗಿದ್ದರು. ಅಲೇಕಾ ಶಾಸ್ತ್ರಿ ಹೆಸರಿನ ಪುತ್ರಿಯನ್ನೂ ಹೊಂದಿದ್ದಾರೆ. 22 ವರ್ಷಗಳ ಮದುವೆಯ ಬಳಿಕ 2012ರಲ್ಲಿ ಇವರು ವಿಚ್ಛೇದನ ಪಡೆದುಕೊಂಡಿದ್ದರು.
ಹಾರ್ದಿಕ್ ಪಾಂಡ್ಯ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಟಿ ನತಾಶಾ ಸ್ಟಾಂಕೋವಿಕ್‌ರನ್ನು ಮದುವೆಯಾಗಿದ್ದರು. ಇಬ್ಬರೂ ಅಗಸ್ತ್ರ್ಯ ಹೆಸರಿನ ಪುತ್ರನನ್ನು ಹೊಂದಿದ್ದಾರೆ. ಕಳೆದ ವರ್ಷ ಇವರಿಬ್ಬರ ವಿಚ್ಛೇದನವಾಗಿದೆ.
ದಿನೇಶ್ ಕಾರ್ತಿಕ್: ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿರುವ ದಿನೇಶ್ ಕಾರ್ತಿಕ್ ಡಿವೋರ್ಸ್ ಇಲೆವೆನ್‌ನ ಕ್ಯಾಪ್ಟನ್ ಅಂತೆ.2007ರಲ್ಲಿ ನಿಕಿತಾ ವಂಜಾರಾ ಎನ್ನುವ ಯುವತಿಯ ವಿವಾಹವಾಗಿದ್ದರು. 2012ರಲ್ಲಿ ಇವರ ವಿಚ್ಛೇದನವಾಗಿತ್ತು. ನಿಕಿತಾ ಬಳಿಕ ದಿನೇಶ್ ಕಾರ್ತಿಕ್‌ರ ಟೀಮ್‌ಮೇಟ್ ಮುರಳಿ ವಿಜಯ್‌ರನ್ನು ವಿವಾಹವಾದರು.
ಮನೀಷ್ ಪಾಂಡೆ: ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ 2019ರಲ್ಲಿ ಆಶ್ರಿತಾ ಶೆಟ್ಟಿ ಅವರ ಕೈಹಿಡಿದಿದ್ದರು. ಮೂಲಗಳ ಪ್ರಕಾರ ಇವರಿಬ್ಬರ ವಿಚ್ಛೇದನ ಕೂಡ ಹಾದಿಯಲ್ಲಿದೆ. ಇಬ್ಬರೂ ಕೂಡ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಮನೋಜ್ ಪ್ರಭಾಕರ್: ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ 2013ರಲ್ಲಿ ತಮ್ಮ ಪತ್ನಿ ಸಂಧ್ಯಾಗೆ ವಿಚ್ಛೇದನ ನೀಡಿದ್ದರು. ಸಂಧ್ಯಾ ಅವರು ಮನೋಜ್ ವಿರುದ್ಧ ಕಿರುಕುಳ ಹಾಗೂ ವರದಕ್ಷಿಣ ಆರೋಪ ಮಾಡಿದ್ದರು. ವಿಚ್ಛೇದನದ ಬಳಿಕ ಮನೋಜ್ ಪ್ರಭಾಕರ್ ನಟಿ ಫರ್ಹೀನ್‌ರನ್ನು ಮದುವೆಯಾದರು.
ಯಜುವೇಂದ್ರ ಚಾಹಲ್: ಅಗ್ರ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರದ್ದೂ ಇದೇ ಕಥೆ. 2020ರಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದರು. ಇವರೂ ಕೂಡ ಅಧಿಕೃತವಾಗಿ ವಿಚ್ಛೇದನ ಪಡೆದುಕೊಳ್ಳುವ ಹಾದಿಯಲ್ಲಿದ್ದಾರೆ.
ಜಾವಗಲ್ ಶ್ರೀನಾಥ್: ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್ ಶ್ರೀನಾಥ್ 1999ರಲ್ಲಿ ಜೋತ್ಸ್ನಾ ಎನ್ನುವ ಮಹಿಳೆಯ ವಿವಾಹವಾಗಿದ್ದರು. ವಿಚ್ಛೇದನ ಪಡೆದುಕೊಂಡ ಬಳಿಕ ಪತ್ರಕರ್ತೆ ಮಾಧವಿ ಪತ್ರವಲ್ಲಿ ಅವರನ್ನು 2008ರಲ್ಲಿ ವಿವಾಹವಾದರು.
ಚಹಲ್ ಹಾದಿ ಹಿಡಿದ್ರಾ ಕನ್ನಡಿಗ; ಟೀಂ ಇಂಡಿಯಾ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಗಾಳಿ?
ಮೊಹಮದ್ ಶಮಿ: ವೇಗಿ ಮೊಹಮದ್ ಶಮಿ ಕೂಡ ವಿಚ್ಚೇದನ ಪಡೆದುಕೊಂಡು ಕೆಲವು ವರ್ಷವಾಗಿದೆ. ಹಸೀನ್ ಜಹಾನ್ ಅವರನ್ನು 2014ರಲ್ಲಿ ಮದುವೆಯಾಗಿದ್ದರು. ಕೆಲ ವರ್ಷಗಳ ಹಿಂದೆ ಹಸೀನ್ ಜಹಾನ್, ಶಮಿ ವಿರುದ್ಧ ಸಾಕಷ್ಟು ಆರೋಪ ಮಾಡಿ ವಿಚ್ಛೇದನ ಪಡೆದುಕೊಂಡಿದ್ದರು.