ಪ್ರೀತಿಸಿದಾಕೆಗೆ ಗಂಡು ಹುಡುಕಿದ್ದ ಸ್ತ್ರೀ-2 ನಟ: ಯಾವ ಸಿನಿಮಾಗೂ ಕಡಿಮೆ ಇಲ್ಲ ಪಂಕಜ್ ತ್ರಿಪಾಠಿ ಲವ್ ಸ್ಟೋರಿ
ಸ್ತ್ರೀ-2 ನಟ ಪಂಕಜ್ ತ್ರಿಪಾಠಿ ಹಾಗೂ ಮೃದುಲಾ ಅವರ ಲವ್ ಸ್ಟೋರಿ ಬಾಲಿವುಡ್‌ನ ಯಾವುದೇ ರೋಮ್ಯಾಂಟಿಕ್ ಲವ್ ಸ್ಟೋರಿಗಿಂತ ಕಡಿಮೆ ಏನಿಲ್ಲ, ಲವ್ ಅಟ್ ಫಸ್ಟ್ ಸೈಟ್ ಪ್ರೀತಿಯಾದ್ರೂ ಸಂದರ್ಭಕ್ಕೆ ಸಿಲುಕಿ ತಾನು ಪ್ರೀತಿಸಿದ ಹುಡುಗಿಗೆ ಯೋಗ್ಯ ವರನನ್ನು ಹುಡುಕಿದ್ರು ತಿವಾರಿ. ಅವರ ರೋಚಕ ಲವ್‌ಸ್ಟೋರಿ ಇಲ್ಲಿದೆ.
ಬಾಲಿವುಡ್‌ನಾ ಪ್ರಸ್ತುತ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶ್ರದ್ಧಾ ಕಪೂರ್ ಅಭಿನಯದ ಸ್ತ್ರೀ ಸಿನಿಮಾದ ನಟ ಪಂಕಜ್ ತ್ರಿಪಾಠಿ ಅವರ ರಿಯಲ್ ಲೈಫ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಡಿಮೆಯೇನಿಲ್ಲ, ಹಲವು ಸಿನಿಮಾ ಹಾಗೂ ವೆಬ್‌ಸೀರಿಸ್‌ಗಳಲ್ಲಿ ನಟಿಸಿರುವ ಪಂಜಕ್ ತ್ರಿಪಾಠಿ ಅವರು ಹಿಂದೆ ತಾನು ಪ್ರೀತಿಸಿದ ಹುಡುಗಿಗೇ ಯೋಗ್ಯನಾದ ವರನನ್ನು ಹುಡುಕಿದ್ರು ಎಂಬ ಅಚ್ಚರಿ ವಿಚಾರ ನಿಮಗೆ ಗೊತ್ತಾ? ಆದರೆ ಅದೃಷ್ಟವಶಾತ್ ಇವರ ಪ್ರೀತಿಯ ಹುಡುಗಿ ಇವರನ್ನು ಬಿಟ್ಟು ಇನ್ಯಾರನ್ನೂ ಮದುವೆಯಾಗಲ್ಲ ಎಂದು ಗಟ್ಟಿಯಾಗಿ ಎದುರು ನಿಂತ ಪರಿಣಾಮ ಪ್ರೀತಿಸಿದವಳನ್ನೇ ಮದುವೆಯಾಗುವ ಯೋಗ ಇವರದಾಗಿದೆ. ಇವರ ಈ ಲವ್ ಸ್ಟೋರಿಗೆ ಸಿನಿಮಾ ಪ್ರೇಮಿಗಳು ಅಚ್ಚರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಪಂಕಜ್ ತಿವಾರಿ ತನ್ನ ಗೆಳತಿಯನ್ನು ಮೊದಲು ಭೇಟಿಯಾಗಿದ್ದು, ಎಲ್ಲಿ ಇಲ್ಲಿದೆ ಅವರ ಡಿಟೇಲ್ ಲವ್ ಸ್ಟೋರಿ...
ಪಂಕಜ್ ತ್ರಿಪಾಠಿ ಹಾಗೂ ಮೃದುಲಾ ಅವರದ್ದು ಲವ್ ಅಟ್ ಫಸ್ಟ್ ಸೈಟ್ ಪ್ರೀತಿ..
ಪಂಕಜ್ ತ್ರಿಪಾಠಿ ಹಾಗೂ ಮೃದುಲಾ ಅವರ ಲವ್ ಸ್ಟೋರಿ ಬಾಲಿವುಡ್‌ನ ಯಾವುದೇ ರೋಮ್ಯಾಂಟಿಕ್ ಲವ್ ಸ್ಟೋರಿಗಿಂತ ಕಡಿಮೆ ಏನಿಲ್ಲ, ಇವರು ಮೊದಲು ಭೇಟಿಯಾಗಿದ್ದಾಗ ಇಬ್ಬರೂ ವಿದ್ಯಾರ್ಥಿಗಳೇ ಆಗಿದ್ದರು. ಮೊದಲ ನೋಟದಲ್ಲೇ ಇಬ್ಬರಿಗೂ ಏನೋ ಆಕರ್ಷಣೆ ಶುರುವಾಗಿತ್ತು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪ್ರೇಮಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾನೆ. ಆದರೆ ಅದರೆ ಪಂಕಜ್ ತ್ರಿಪಾಠಿ ಪ್ರಕರಣದಲ್ಲಿ ಪತ್ನಿ ಮೃದುಲಾ ತಮ್ಮ ಪ್ರೀತಿಯನ್ನು ನೇರವಾಗಿ ಪಂಕಜ್ ಮುಂದೆ ವ್ಯಕ್ತಪಡಿಸಿದ್ದರಿಂದ ಇಂದು ಅವರ ಪತ್ನಿಯಾಗುವ ಜೊತೆಗೆ ಅವರ ದೊಡ್ಡ ಬೆನ್ನೆಲುಬಿನಂತೆ ಜೊತೆ ನಿಂತರು.
ಪಂಕಜ್ ಹಿಂದೊಮ್ಮೆ ಸಂದರ್ಶನದಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದರು. ತಾನು ಮೊದಲ ಬಾರಿಗೆ ಮೃದುಲಾರನ್ನು ಭೇಟಿಯಾದಾಗ ಆಕೆ 9ನೇ ತರಗತಿಯಲ್ಲಿದ್ದಳು. ಹಾಗೂ ಇವರು 11ನೇ ತರಗತಿಯಲ್ಲಿದ್ದರಂತೆ. ಇದು ಅವರ ಪೆಹಲಿ ನಜರ್‌ಕಾ ಪ್ಯಾರ್ ಎಂದರೆ ಮೊದಲ ನೋಟದ ಪ್ರೀತಿಯಾಗಿತ್ತು. ತಾವು ಹೇಗೆ ಮೃದುಲಾ ಜೊತೆ ಪ್ರೀತಿಯಲ್ಲಿ ಬಿದ್ದೆ ಎಂಬುದನ್ನು ನೆನೆದ ತ್ರಿಪಾಠಿ, ಅದು 1993ರ ನನ್ನ ಸೋದರಿಯ ಮದುವೆಯ ಸಮಯ, ಆ ಮದುವೆಯಲ್ಲೇ ನಾನು ಆಕೆಯನ್ನು ನೋಡಿದೆ. ಟೆರೇಸ್‌ನ ಬಾಲ್ಕನಿ ಮೇಲೆ ಆಕೆ ನಿಂತಿದ್ದಳು, ಆಕೆಯನ್ನು ಮೊದಲ ಬಾರಿ ನೋಡಿದಾಗಲೇ ಈಕೆಯ ಜೊತೆಯೇ ನನ್ನ ಉಳಿದ ಜೀವನವನ್ನು ಕಳೆಯಬೇಕು ಎಂಬ ಯೋಚನೆ ಬಂತು. ಆದರೆ ಆಕೆ ಯಾರು ಅವಳ ಹೆಸರೇನು ಎಂಬುದು ನನಗೆ ಆಗ ತಿಳಿದಿರಲಿಲ್ಲ,
ಪಂಕಜ್‌ಗೆ ಇದು ಸೋದರಿಯ ಮದುವೆಯಾದರೆ ಅತ್ತ ಮೃದುಲಾಗೆ ಇದು ತನ್ನ ಸೋದರನ ಮದುವೆ, ಇದೇ ಮದುವೆಯಲ್ಲಿ ಮೃದುಲಾ ಪಂಕಜ್ ಅವರ ಕಳ್ಳ ನೋಟಗಳನ್ನು ಗಮನಿಸಿದ್ದರು. 'ಅದು ನನ್ನ ಹಿರಿಯ ಸೋದರನ ಮದುವೆಯಾಗಿತ್ತು. ನಾನು ಮದುವೆಗೆ ಸಿದ್ದಗೊಳ್ಳುವುದಕ್ಕಾಗಿ ಮನೆಯ ಟೆರೇಸ್ ಮೇಲಿರುವ ಸಣ್ಣ ರೂಮ್‌ಗೆ ಹೋಗುತ್ತಿದ್ದೆ, ಈ ವೇಳೆ ಹಸಿರು ಹಾಗೂ ಕಂದು ಮಿಶ್ರಿತ ಕಣ್ಣುಗಳನ್ನು ಹೊಂದಿದ್ದ ಸಣ್ಣದಾಗಿ ಗಡ್ಡ ಬಿಟ್ಟಿದ್ದ ಹುಡುಗ ನನ್ನನ್ನು ದಾಟಿ ಹೋದ. ಇದೇ ಕಣ್ಣುಗಳು ಆ ಇಡೀ ಸಮಾರಂಭದಲ್ಲಿ ನನ್ನ ಕಣ್ಣುಗಳನ್ನು ಹಿಂಬಾಲಿಸುತ್ತಿದ್ದವು' ಎಂದು ಮೃದುಲಾ ಆ ದಿನಗಳ ನೆನಪು ಮಾಡಿಕೊಂಡಿದ್ದಾರೆ. ಇಬ್ಬರೂ ತಕ್ಷಣವೇ ಪರಸ್ಪರ ಆಕರ್ಷಿತರಾಗಿದ್ದರೂ, ಇಬ್ಬರೂ ಕೂಡ ತಮ್ಮ ಭಾವನೆಗಳನ್ನು ಯಾವತ್ತೂ ಹಂಚಿಕೊಂಡಿರಲಿಲ್ಲ, ಇತ್ತ 5 ತಿಂಗಳಿಗೊಮ್ಮೆ ಅಕ್ಕನ ನೋಡುವ ನೆಪದಲ್ಲಿ ಪಂಕಜ್ ತ್ರಿಪಾಠಿ ಮೃದುಲಾ ಮನೆಗೆ ಬಂದಾಗ ಅವರು ಗಂಟೆಗಟ್ಟಲೇ ಹರಟುತ್ತಿದ್ದರು. 'ನಾನು ಬೆಳಗ್ಗೆ ಶಾಲೆಗೆ ಹೋಗುತ್ತಿದ್ದೆ ಹೀಗಾಗಿ, ರಾತ್ರಿ ಊಟದ ನಂತರ ಮಾತ್ರ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿತ್ತು. ಅದು ನಮ್ಮ ಸಮಯವಾಗಿತ್ತು. ನಾವು ಕುಳಿತುಕೊಂಡು ಮಾತನಾಡುತ್ತಿದ್ದೆವು. ಈ ಮಾತು ಮುಂಜಾನೆವರೆಗೂ ಮುಂದುವರೆಯುತ್ತಿತ್ತು.
ನಾವಿಬ್ಬರೂ ಓದುವುದನ್ನು ಇಷ್ಟಪಡುತ್ತಿದ್ದೆವು. ಹೀಗಾಗಿ ಓದಿದ ಪುಸ್ತಕಗಳ ಬಗ್ಗೆ, ಕಾದಂಬರಿಯ ಪಾತ್ರಗಳ ಬಗ್ಗೆ, ಕತೆಗಳ ಬಗ್ಗೆ, ಲೇಖಕರ ಬಗ್ಗೆ ಮಾತನಾಡಲು ತುಂಬಾ ವಿಚಾರಗಳಿರುತ್ತಿದ್ದವು' ಎಂದು ಮೃದುಲಾ ಹೇಳಿಕೊಂಡಿದ್ದಾರೆ. ಹೀಗೆ ಎಂಟು ವರ್ಷಗಳು ಕಳೆದು ಹೋದವು, ಪಂಕಜ್ ಹಾಗೂ ಮೃದುಲಾ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಒಬ್ಬರಿಗೊಬ್ಬರು ಹೇಳಿಕೊಳ್ಳಲೇ ಇಲ್ಲ, ಇದೇ ಸಮಯದಕ್ಕೆ ಮೃದುಲಾರ ತಂದೆ ಹಾಗೂ ಸೋದರ ಮೃದುಲಾಗಾಗಿ ಮನೆಯಲ್ಲಿ ಗಂಡು ನೋಡಲು ಶುರು ಮಾಡಿದ್ದರು. ನೀವು ನಂಬ್ತಿರೋ ಇಲ್ವೋ, ಇತ್ತ ಈ ಯೋಗ್ಯ ಹುಡುಗನ ಹುಡುಕುವ ಕೆಲಸಕ್ಕೆ ಜೊತೆಗೆ ಪಂಕಜ್‌ನನ್ನು ಕರೆದೊಯ್ದಿದ್ದರು. ತನ್ನ ಕ್ರಶ್‌ಗಾಗಿ ಹುಡುಗನನ್ನು ನೋಡಲು ಮೃದುಲಾ ಸೋದರನ ಜೊತೆ ಪಂಕಜ್ ಹೋಗಿದ್ದರು. ಬರೀ ಇಷ್ಟೇ ಅಲ್ಲ, ಮರಳಿ ಬಂದು ಮೃದುಲಾಗೆ ನಾವು ನೋಡಿರುವ ಹುಡುಗ ನಿನಗೆ ಅನುರೂಪನಾದ ವರನಾಗುತ್ತಾನೆ ತುಂಬಾ ಚೆನ್ನಾಗಿ ಇದ್ದಾನೆ ಎಂದು ಬಣ್ಣಿಸಿದ್ದರು.
ಇತ್ತ ಈ ವೇಳೆ ತಾನು ಬಾಯ್ಬಿಡದೇ ಹೋದರೆ ಜೀವನದ ಅತ್ಯಂತ ಅಮೂಲ್ಯವಾದುದನ್ನು ನಾನು ಕಳೆದುಕೊಂಡು ಬಿಡುತ್ತೇನೆ ಎಂಬ ಅರಿವು ಮೃದುಲಾಗೆ ಆಗಿತ್ತು. ಹೀಗಾಗಿ ಆ ಮದುವೆ ಪ್ರಪೋಸಲನ್ನು ಮುರಿದ ಮೃದುಲಾ ಪಂಕಜ್ ಜೊತೆ ಈ ವಿಚಾರವಾಗಿ ಮಾತನಾಡಲು ತಿಂಗಳುಗಳ ಕಾಲ ಕಾದರು. ಆ ಸಮಯದಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಓದುತ್ತಿದ್ದ ಆಕೆ ಆ ದಿನಗಳು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ. ನನ್ನ ಭಾವನೆಗಳನ್ನು ಆತನ ಜೊತೆ ಹಂಚಿಕೊಳ್ಳಲು ನಾನು ಬಹಳ ಕಷ್ಟಪಟ್ಟೆ, ಆದರ ಅದು ಆತನಿಗೆ ಅರ್ಥವಾಗಲಿಲ್ಲ, ಹೀಗಾಗಿ ಆತನಿಗ ಅರ್ಥ ಮಾಡಿಸಲು ದೀರ್ಘ ಸಮಯ ಬೇಕಾಯ್ತು. ಇದಾಗಿ ವರ್ಷಗಳ ಕಾಲ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿ 10 ದಿನಗಳಿಗೊಮ್ಮೆ ಪತ್ರ ಹಾಗೂ 8 ಗಂಟೆಗೊಂದು ಫೋನ್ ಕಾಲ್‌ನ ಮೂಲಕ ತಮ್ಮ ಸಂಬಂಧವನ್ನು ಜೀವಂತವಾಗಿರಿಸಿಕೊಂಡರು. ಇದೆಲ್ಲದರ ಜೊತೆ 12 ವರ್ಷಗಳೇ ಕಳೆದು ಹೋಗಿದ್ದು, ಮೊದಲೇ ಇವರು ಸಂಬಂಧಿಗಳಾಗಿದ್ದರಿಂದ ಪಂಕಜ್ ಹಾಗೂ ಮೃದುಲಾ ಅವರ ಕುಟುಂಬವನ್ನು ಒಪ್ಪಿಸಲು ಈ ಜೋಡಿಗೆ ಕೆಲ ಕಾಲ ಹಿಡಿಯಿತು. ಇದಾದ ನಂತರ 2004ರ ಜನವರಿ 15ರಂದು ಈ ಜೋಡಿ ಮದುವೆಯಾದರು. 2006ರಲ್ಲಿ ಈ ಜೋಡಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು.