ಕೊರೋನಾ ಕಾಲದ ಒಂದು ಮಧುರ ಪ್ರೇಮಕಥೆ!
ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಒಬ್ಬರಿಗೊಬ್ಬರು ಸಮಯ ನೀಡುವ ಮೂಲಕ ಸಂಬಂಧಗಳು ಗಟ್ಟಿಯಾಗುತ್ತಿದೆ. ಕೆಲವರು ಮದುವೆಯನ್ನು ಮುಂದೂಡಿದರೆ ಇನ್ನು ಕೆಲವರು ತಮ್ಮ ಮನೆಯಲ್ಲಿಯೇ ಅರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಮಯದಲ್ಲಿ ನಡೆಯುವ ಲವ್ ಸ್ಟೋರಿ ಹೇಗಿರುತ್ತದೆ ನೋಡಿ....

ಕೈ ಕುಲುಕುಲವುದಕ್ಕೂ ಹಿಂದೆ ಹಿಂದೆ ನೋಡುವ ಈ ಕಾಲದಲ್ಲಿ ಒಂದು ಪ್ರೇಮ ಸಂಭವಿಸಿತು.

ಮೊದಲ ಭೇಟಿಯಲ್ಲಿ ಕೈಕುಲುಕಲಿಲ್ಲ. ದೂರದಿಂದಲೇ ನಮಸ್ಕಾರ.

ಎರಡನೇ ಭೇಟಿಯಲ್ಲಿ ಎದುರು ಬದುರು ಕೂರಲಿಲ್ಲ. ನಾಲ್ಕು ಚೇರ್‌ಗಳಿರುವ ಟೇಬಲ್‌ನ ಒಂದು ತುದಿಯಲ್ಲಿ ಅವನು, ಮತ್ತೊಂದು ಬದಿಯಲ್ಲಿ ಅವಳು.

ಅವನು ಅವಳು ಸಿಕ್ಕಾಗ ಕೈ ತೊಳೆದಾಗಿದೆಯಾ ಎಂದು ಕಾಳಜಿ ತೆಗೆದುಕೊಂಡಿದ್ದು ನೋಡಿ ಅವಳಿಗೆ ಭಯಂಕರ ಖುಷಿ.

ಅವಳು ತನ್ನ ಹ್ಯಾಂಡ್ ಸ್ಯಾನಿಟೈಸರ್ ಹೊಗಳಿದಾಗ ಅವನಿಗೆ ಸಂತಸವೋ ಸಂತಸ.

ಅವನಲ್ಲಿ ಇವಳಿಲ್ಲಿ. ಫೋನಲ್ಲೇ ಗುಟ್ಟುಗಳು ರವಾನೆಯಾದವು. ಮಾತಾಡುತ್ತಾ ತಾವು ಮೇಡ್ ಫಾರ್ ಈಚ್ ಅದರ್ ಅನ್ನಿಸಿತು.

ಅವನು ಅವಳನ್ನು ತನ್ನ ಇನ್ನೋವಾ ಕಾರಲ್ಲಿ ಮನೆಗೆ ಕರೆದುಕೊಂಡು ಹೋದ. ಪಾಪ ಅವಳು ಲಾಸ್ಟ್ ಸೀಟಲ್ಲಿ ಕೂರಬೇಕಾಯಿತು.

ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಒಂದೇ ಮನೆಯಲ್ಲಿ ಕ್ವಾರಂಟೈನ್ ಆಗಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ಜತೆಗೆ ಓಡಿದರು. ಜತೆಗೆ ತಿಂದರು. ಜತೆಗೆ ಜಗಳವೂ ಆಡಿದರು. ಕ್ವಾರಂಟೈನ್ ಮುಗಿಯಿತು.

ಶಾಪಿಂಗ್ ಹೋದರು. ಮನೆಗೆ ಬೇಕಾದ ವಸ್ತುಗಳನ್ನು ತಂದರು. ಎಲ್ಲವೂ ಸರಿಯಾಗುತ್ತದೆ ಎಂದಾಗ ವಿಡಿಯೋ ಕಾಲಿಂಗ್ ಆ್ಯಪ್ ತೆರೆದು ಬೇಕು ಬೇಕಾದವರನ್ನು ಕರೆದು ಲೈವ್‌ನಲ್ಲಿ ಮದುವೆಯಾದರು.

ವಿಡಿಯೋ ಕಾಲ್‌ಗಳ ಸ್ಕ್ರೀನ್ ಶಾಟ್‌ಗಳು ಸೋಷಲ್ ಮೀಡಿಯಾದ ತುಂಬಾ ಓಡಾಡಿದವು. ಬಹಳ ಸರಳ ಕೊರೋನಾ ಮದುವೆ ಎಂದು ಜಗತ್ತಿಡೀ ಕೊಂಡಾಡಿತು.

ಪಕ್ಕದ ಬೀದಿಯ ಮೆಗಾ ಮಾರ್ಟ್‌ಗೆ ಸುತ್ತಾಡಲು ಹೋದರು. ನಾಲ್ಕು ಗೊಂಬೆ ತಂದು ಮನೆಯಲ್ಲಿಟ್ಟರು. ಸುಖ ಸಂಸಾರ ಆರಂಭಿಸಿದರು.

ಕತೆಯ ಕೊನೆಯಾಗುವ ಹಂತದಲ್ಲಿ ಇಬ್ಬರಿಗೂ ಒಂದು ವಿಷಯ ನೆನಪಾಯಿತು. ಇಷ್ಟೆಲ್ಲಾ ನಡೆದುಹೋಯಿತು. ಆದರೆ ಈ ಕೊರೋನಾದಿಂದಾಗಿ ಮೊದಲ ಮುತ್ತು ಕೊಡುವುದು ಬಾಕಿಯೇ ಉಳಿಯಿತು.