ಬೇಡ್ವೇ ಬೇಡ ಒನ್ ಸೈಡ್ ಲವ್ ಸಹವಾಸ, ಮೆಂಟಲ್ ಮಾಡಿ ಬಿಡುತ್ತೆ ಈ ತರದ ಪ್ರೀತಿ!
ಒನ್ ಸೈಡ್ ಲವ್ ಅಂದ್ರೆ ಸೂಪರ್ ಅಂತ ಆರ್ಯ ಸೇರಿ, ಹಲವು ಸಿನಿಮಾಗಳಲ್ಲಿ ನೀವು ನೋಡಿರಬಹುದು. ನಿಜವಾಗ್ಲೂ ಒನ್ ಸೈಡ್ ಲವ್ ಒಳ್ಳೇದಾ? ಖಂಡಿತಾ ಅಲ್ಲ, ಸಿನಿಮಾ ಕಥೆಗಳಲ್ಲಿ ಮಾತ್ರ ಚೆನ್ನಾಗಿರೋ ಒನ್ ಸೈಡ್ ಲವ್, ನಿಜ ಜೀವನದಲ್ಲಿ ವ್ಯಕ್ತಿಯನ್ನ ಮೆಂಟಲ್ ಮಾಡುತ್ತೆ.
ಒನ್ ಸೈಡ್ ಲವ್ (one side love) ಕಥೆಗಳು ಸಿನಿಮಾಗಳು ಮತ್ತು ಪುಸ್ತಕಗಳಲ್ಲಿ ಮಾತ್ರ ಚೆನ್ನಾಗಿ ಕಾಣುತ್ತವೆ. ನಿಜ ಜೀವನದಲ್ಲಿ, ಇದು ಮಾನಸಿಕ ಆರೋಗ್ಯವನ್ನು ಹಾಳುಮಾಡಲು ಮಾತ್ರ ಕೆಲಸ ಮಾಡುತ್ತಾರೆ. ನೀವು ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ಅದನ್ನು ಸರಿಪಡಿಸಲು ಪ್ರಯತ್ನಿಸದಿದ್ರೆ ಅಂತಹ ಪ್ರೀತಿ ನಿಮ್ಮ ಭವಿಷ್ಯದ ಸಂಬಂಧದ ಮೇಲೂ ಪರಿಣಾಮ ಬೀರಬಹುದು.
ಸಿನಿಮಾಗಳು, ನಾವೆಲ್ ಓದುವಾಗ ಅದರಲ್ಲಿ ಬರೋ ಒನ್ ಸೈಡ್ ಲವ್ ಶಕ್ತಿನೇ ಬೇರೆ, ಇದೊಂದು ಸುಂದರ ಅನುಭವ ಅನ್ನೋ ಸಂಭಾಷಣೆ ಕೇಳಿದಾಗ, ಖಂಡಿತವಾಗಿ ಯಾರು ಬೇಕಾದ್ರೂ ಒನ್ ಸೈಡ್ ಲವ್ ಮಾಡೋದಕ್ಕೆ ಉತ್ಸುಕರಾಗ್ತಾರೆ. ಆದರೆ ನಿಮ್ಮ ಹೃದಯದ ಮೇಲೆ ನಿಮ್ಮ ಕೈಯನ್ನು ಇರಿಸಿ, ಒನ್ ಸೈಡ್ ಲವ್ ನಿಂದ ನಿಮಗೆ ನಿಜವಾಗಿಯೂ ನೆಮ್ಮದಿ ಇದೆಯೆ ಅಂತಾ ನೀವೆ ಒಮ್ಮೆ ಕೇಳಿ ನೋಡಿ. ಖಂಡಿತಾ ಇಲ್ಲ.
ಒನ್ ಸೈಡ್ ಲವಲ್ಲಿ ಯಾರೂ ಕೂಡ ನೆಮ್ಮದಿಯಾಗಿರೋದಕ್ಕೆ ಸಾಧ್ಯವೇ ಇಲ್ಲ. ನಿಮ್ಮ ಪ್ರೀತಿಯ ಬಗ್ಗೆ ತಿಳಿದೇ ಇಲ್ಲದೆ ವ್ಯಕ್ತಿ ಯಾವಾಗ ಯಾರನ್ನು ಲವ್ ಮಾಡ್ತಾರೆ ಅನ್ನೋ ಭಯ ಕಾಡಿಯೇ ಕಾಡುತ್ತೆ, ಅಷ್ಟೇ ಅಲ್ಲ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ ನಂತರವೂ ಆ ವ್ಯಕ್ತಿ ನಿಮ್ಮನ್ನ ಪ್ರೀತಿಸೋದು ಇಲ್ಲ, ಕೇರ್ ಮಾಡಲ್ಲ ಅಂದ್ರೆ… ಇದೆಲ್ಲಾ ನೋಡ್ಕೋಂದು ಒನ್ ಸೈಡ್ ಲವ್ ಅಂತ ಸಂತೋಷವಾಗಿರೋದಕ್ಕೆ ಅಥವಾ ನೆಮ್ಮದಿಯಾಗಿರೋದಕ್ಕೆ ಸಾಧ್ಯಾನ? ಒನ್ ಸೈಡ್ ಲವ್ ಮಾಡ್ತಿರೋರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ.
ಒನ್ ಸೈಡ್ ಲವ್ ಅಂದ್ರೆ ಸುಮ್ನೆ ಅಲ್ವೇ ಅಲ್ಲ… ಇದರಿಂದ ತುಂಬಾನೆ ಸಮಸ್ಯೆಗಳು ಕಾಡೋಕ್ಕೆ ಶುರು ಮಾಡುತ್ತೆ. ಇದ್ರಿಂದ ಏನೆಲ್ಲಾ ಸಮಸ್ಯೆ ಬರುತ್ತೆ ತಿಳಿಯೋಣ ಬನ್ನಿ.
ಖಿನ್ನತೆ (Depression)
ಒನ್ ಸೈಡ್ ಪ್ರೀತಿಯಲ್ಲಿ ರಿಜೆಕ್ಷನ್ ಖಿನ್ನತೆಗೆ ಕಾರಣವಾಗಬಹುದು. ಈ ವಿಷಯಗಳ ಬಗ್ಗೆ ಯಾವಾಗಲೂ ಯೋಚಿಸುವುದು ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದವರೆಗೆ ಒತ್ತಡದಲ್ಲಿರೋದ್ರಿಂದ ವ್ಯಕ್ತಿ ಖಿನ್ನತೆಗೆ ಬಲಿಯಾಗುವ ಸಾಧ್ಯತೆ ಇದೆ.
ಆತಂಕ (Fear)
ಒನ್ ಸೈಡ್ ಪ್ರೀತಿಯು ಭಯ ಮತ್ತು ಆತಂಕಕ್ಕೆ ಕಾರಣವಾಗಬಹುದು. ರಿಜೆಕ್ಷನ್ ನಿಂದಾಗಿ, ಜನರು ತಮ್ಮ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಶುರು ಮಾಡುತ್ತಾರೆ. ರಿಲೇಶನ್’ಶಿಪ್ ಬಗ್ಗೆ ಕೆಟ್ಟದಾಗಿ ಯೋಚಿಸೋಕೆ ಆರಂಭಿಸುತ್ತಾರೆ.
ಆತ್ಮಗೌರವ ಕಡಿಮೆಯಾಗುತ್ತೆ (Self Respect)
ಒನ್ ಸೈಡ್ ಲವ್ ನಿಮ್ಮ ಸ್ವಾಭಿಮಾನವನ್ನು ಸಹ ಹಾನಿಗೊಳಿಸುತ್ತದೆ. ಇದು ಒಬ್ಬ ವ್ಯಕ್ತಿಯು ತನ್ನ ಬಗ್ಗೆಯೇ ತಪ್ಪು ತಿಳಿಯುವಂತೆ ಹಾಗೂ ತನ್ನ ಬಗ್ಗೆ ಕೆಟ್ಟದಾಗಿ ಯೋಚಿಸುವಂತೆ ಮಾಡುತ್ತದೆ, ಇದು ಅವನ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ.
ನೆಗೆಟೀವ್ ಯೋಚನೆ (Negative Thoughts)
ಒನ್ ಸೈಡ್ ಲವ್ ಇದ್ದಲಿ, ಒಮ್ಮೊಮ್ಮೆ ವ್ಯಕ್ತಿಯು ಎಷ್ಟು ಹತಾಶನಾಗುತ್ತಾನೆ ಎಂದರೆ ಅವನೊಳಗೆ ನಕಾರಾತ್ಮಕ ಭಾವನೆಗಳು ಬೆಳೆದು ಬಿಡುತ್ತೆ. ತನ್ನ ಪ್ರೀತಿಯನ್ನು ಪಡೆಯುವ ಪ್ರಕ್ರಿಯೆಯಲ್ಲಿ, ವ್ಯಕ್ತಿ ಕೆಲವೊಮ್ಮೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸಹ ಗುರುತಿಸಲು ಸಾಧ್ಯವಾಗುವುದಿಲ್ಲ, ಅವರ ನೆಗೆಟೀವ್ ಯೋಚನೆಯಿಂದಲೇ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಬಹುದು.