ರುಡಾಲಿ ಮಹಿಳೆಯರು: ಸತ್ತವರ ಮನೆಗೆ ಅಳುವುದಕ್ಕೆಂದೇ ಇರುವ ವೃತ್ತಿಪರ ದುಃಖಿತರು!
ಸಾವು ಎಂಬುದು ಖಚಿತ. ಯಾರನ್ನೂ ಯಾವ ಮನೆತನವನ್ನೂ ಬಿಟ್ಟಿಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಿನ ಸಾವು ಬರುತ್ತದೆ. ಕುಟುಂಬದವರು ಮೃತಪಟ್ಟಾಗ ಕುಟುಂಬದವರಿಗೆ ದುಃಖವಾಗುತ್ತದೆ, ಅಳುತ್ತಾರೆ. ಕೆಲವು ಶ್ರೀಮಂತ ಮನೆತಗಳು ಕಣ್ಣೀರು ಹಾಕುವುದು ಪ್ರತಿಷ್ಠೆ ಕಡಿಮೆಯಾಗುತ್ತದೆಂದು ಭಾವಿಸುತ್ತಾರೆ. ಅಂಥದ್ದೊಂದು ಸಮುದಾಯ ಮತ್ತು ಅಳುವುದಕ್ಕಾಗಿ ಕೆಳಜಾತಿಯ ಮಹಿಳೆಯರನ್ನು ನೇಮಿಸಿಕೊಳ್ಳುವ ಪದ್ಧತಿ ರಾಜಸ್ಥಾನದಲ್ಲಿ ಆಚರಣೆಯಲ್ಲಿದೆ.

ರುಡಾಲಿ ಮಹಿಳೆಯರ ಕಣ್ಣೀರ ಕತೆ
ದೇಶ ಆರ್ಥಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರಿದ್ದರೂ ಸಾಮಾಜಿಕವಾಗಿ ಅದರಲ್ಲೂ ಜಾತಿ ಪದ್ಧತಿ ಮೇಲು-ಕೀಳು ಇನ್ನೂ ಜೀವಂತವಾಗಿದೆ ಎಂಬುದಕ್ಕೆ ರಾಜಸ್ಥಾನದ ರುಡಾಲಿ ಸಮುದಾಯ ನಮ್ಮೆದುರು ನಿಲ್ಲುತ್ತೆ. ಮೇಲ್ಜಾತಿಯವರು ಮೃತಪಟ್ಟಾಗ ಶವದ ಮುಂದೆ ಅಳುವುದಕ್ಕಾಗಿ ಇವರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದರೆ ನಂಬುತ್ತೀರಾ?
ಅರೆ, ಥಾರೋ ತೋ ಸುಹಾಗ್ ಗಿಯೋರೆ
ಗ್ರಾಮದಲ್ಲಿ ಯಾರಾದರೂ ಮೃತಪಟ್ಟಾಗ ಕಪ್ಪು ಬಟ್ಟೆ ಧರಿಸಿ ಸತ್ತವರ ಮನೆಗೆ ಅಳುವುದಕ್ಕೆ ಹೊರಡುತ್ತಾರೆ. ಅಕ್ಕಪಕ್ಕದ ಮನೆಗಳಿಗೆ ಹೋಗಿ ಮೃತಪಟ್ಟವರ ಹಿನ್ನೆಲೆ ತಿಳಿದುಕೊಳ್ಳುತ್ತಾರೆ. ಬಳಿಕ ಶವದ ಮುಂದೆ ಗುಂಪಾಗಿ ಕುಳಿತು ರಾಗಬದ್ಧವಾಗಿ ಮೃತಪಟ್ಟವನ ಹಿನ್ನೆಲೆ ತಿಳಿಸುತ್ತಾ ಅಳುತ್ತಾರೆ. ಎದೆಎದೆ ಬಡಿದುಕೊಂಡು ಶವದ ಮುಂದೆ ಅಳುತ್ತಾರೆ.
ಅರೆ, ಥಾರೋ ತೋ ಸುಹಾಗ್ ಗಿಯೋರೆ (ಓಹ್, ನಿಮ್ಮ ಪತಿ ಈಗ ಸತ್ತಿದ್ದಾರೆ) ಅವರು ವಿಧವೆಯ ಕೈಗಳನ್ನು ಹಿಡಿದು ಅಳುತ್ತಾರೆ.
ರುಡಾಲಿ ಸಮುದಾಯ ಹುಟ್ಟಿರುವುದೇ ಅಳುವುದಕ್ಕೆ!
ರಾಜಸ್ಥಾನದ ಪಶ್ಚಿಮ ಥಾರ್ ಮರುಭೂಮಿಯಲ್ಲಿ ಠಾಕೂರ್ ಮತ್ತು ರುಡಾಲಿ ಜಾತಿಗಳು. ಠಾಕೂರು ಮೇಲ್ಜಾತಿ ಪ್ರತಿಷ್ಠಿತ ಮನೆತನವಾಗಿದ್ದರೆ, ರುಡಾಲಿ ತಲತಲಾಂತರದಿಂದ ಕಷ್ಟದಲ್ಲಿ ಬೆಳೆದುಬಂದಿರುವ ಸಮುದಾಯ. ರುಡಾಲಿ ಸಮುದಾಯ ಹುಟ್ಟಿರುವುದೇ ಅಳುವುದಕ್ಕೆಂದು ಇಲ್ಲಿನ ಮೇಲ್ಲರ್ಗದವರು ನಂಬುತ್ತಾರೆ.
ಎದೆ ಬಡಿದುಕೊಂಡು ಅಳುತ್ತಾರೆ
ಪ್ರತಿಷ್ಠಿತ ಮನೆತನದಲ್ಲಿ ಕುಟುಂಬ ಸದಸ್ಯರು ಮೃತಪಟ್ಟಾಗ ಮಹಿಳೆಯರು ಅಳುವುದಿಲ್ಲ. ತಮ್ಮ ಭಾವನೆಗಳನ್ನು ಸಾಮಾನ್ಯರ ಮುಂದೆ ಪ್ರದರ್ಶಿಸದೆ ತಮ್ಮ ಘನತೆಯನ್ನು ಕಾಪಾಡಿಕೊಳ್ಳುತ್ತಾರೆ ಹೀಗಾಗಿ ಮೃತಪಟ್ಟಾಗ ಅಳುವುದಕ್ಕೆಂದೇ ರುಡಾಲಿ ಸಮುದಾಯದ ಮಹಿಳೆಯರುನ್ನು ನೇಮಿಸಿಕೊಳ್ಳುತ್ತಾರೆ.
ಇನ್ನೂ ಈ ಪದ್ಧತಿ ಜೀವಂತ
ಇತ್ತೀಚೆಗೆ ಹೆಚ್ಚುತ್ತಿರುವ ಸಾಕ್ಷರತೆ ಪ್ರಮಾಣ ಈ ಪದ್ಧತಿ ಕೊಂಚಮಟ್ಟಿಗೆ ಕಡಿಮೆಯಾಗಿದೆ ಎನ್ನ ಬಹುದು ಆದರೆ ಸಂಪೂರ್ಣವಾಗಿ ನಿಂತಿಲ್ಲ. ಈಗಲೂ ಕೆಲವು ಕುಟುಂಬಗಳು ಮೂಲ ಕಸುಬಿನಂತೆ ಯಾರಾದರೂ ಮೃತಪಟ್ಟಾಗ ಅಳುವುದನ್ನೇಕ ವೃತ್ತಿಯಾಗಿಸಿಕೊಂಡಿದ್ದಾರೆ.
ಸಮುದಾಯದ ಬಗ್ಗೆ ತಿಳಿಸುವ ಚಿತ್ರ: ರುಡಾಲಿ
ಕಲ್ಪನಾ ಲಾಜ್ಮಿ ಅವರ ರುಡಾಲಿ ಚಲನಚಿತ್ರವು ಮಹಾಶ್ವೇತಾದೇವಿಯವರ ಸಣ್ಣ ಕಥೆಯಾದ ರುಡಾಲಿಯ ರೂಪಾಂತರವಾಗಿದೆ. ಇದು 1997 ರಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟವಾದ, ದೇವಿಯವರ ಸಣ್ಣ ಕಥೆಯು ಸನಿಚಾರಿ ಎಂಬ ಮಹಿಳೆಯ ದುರವಸ್ಥೆಯನ್ನು ವಿವರಿಸುತ್ತದೆ, ಅವರ ನೋವು ಮತ್ತು ವೈಯಕ್ತಿಕ ನಷ್ಟವು ವೃತ್ತಿಪರ ಶೋಕಾರ್ಥಿಯಾಗಿ ಬಾಳಿದ ಜೀವನದ ಕುರಿತು ಕಣ್ಣೀಗೆ ಮನೋಜ್ಞವಾಗಿ ಚಿತ್ರಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.