ಡಾಮಿನೇಟಿಂಗ್ ಗಂಡನನ್ನು ಈ ರೀತಿ ಹ್ಯಾಂಡಲ್ ಮಾಡಿ
ಕಪಲ್ ಗಳಲ್ಲಿ ಒಬ್ಬರು ಡಾಮಿನೇಟಿಂಗ್ ಆಗಿರೋದನ್ನು ಆಗಾಗ್ಗೆ ಕಾಣಬಹುದು. ಅದು ಗಂಡ ಅಥವಾ ಹೆಂಡತಿಯೇ ಆಗಿರಬಹುದು. ಅಂತಹ ರಿಲೇಷನ್ಶಿಪ್ ನಲ್ಲಿ ಜಗಳ ಆಗುತ್ತಲೇ ಇರುತ್ತೆ. ಪ್ರೀತಿ, ಗೌರವ ಮತ್ತು ಫ್ರೀಡಂ ಫೀಲಿಂಗ್ ಇದ್ದರೆ ಮಾತ್ರ ಪ್ರೀತಿ ಮತ್ತು ಮದುವೆಯ ನಡುವಿನ ಸಂಬಂಧವು ಉಳಿಯುತ್ತದೆ. ಡಾಮಿನೇಟಿಂಗ್ ಮಾಡಿದ್ರೆ ಆ ಸಂಬಂಧದಲ್ಲಿ ಯಾವುದೇ ಅನ್ಯೋನ್ಯತೆ ಇರೋದಿಲ್ಲ.
ಪುರುಷರಲ್ಲಿ ಡಾಮಿನೇಟಿಂಗ್ (Dominating) ನೇಚರ್ ನ ಕಲ್ಪನೆಯು ಇಂದಿಗೂ ನಮ್ಮ ಸಮಾಜದಲ್ಲಿ ಇದೆಯಾದರೂ, ಈಗ ಮಹಿಳೆಯರೂ ಸಾಕಷ್ಟು ಬದಲಾಗುತ್ತಿದ್ದಾರೆ. ಅವರ ಮೇಲೆ ಯಾರಾದರೂ ಡಾಮಿನೇಟ್ ಮಾಡಿದರೆ, ಅದನ್ನು ಸಹಿಸಿಕೊಂಡು ಕೂರುವ ಮಹಿಳೆಯಾಗಿ ಉಳಿದಿಲ್ಲ ಇಂದಿನ ಮಹಿಳೆಯರು.
ನಿಮ್ಮ ಸಂಗಾತಿ ಹೇಳಿದ್ದೇ ಆಗಬೇಕು ಅಥವಾ ಅವರ ಪ್ರಕಾರವೇ ಎಲ್ಲಾ ಕೆಲಸ ಆಗಬೇಕು ಎನ್ನುವ ಅವರ ನಡವಳಿಕೆಯಿಂದ ನೀವು ಅಸಮಾಧಾನಗೊಂಡಿದ್ದರೆ, ಅಂತಹ ಜನರನ್ನು ಹೇಗೆ ಕಂಟ್ರೋಲ್(Control) ಮಾಡೋದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಸಂಗಾತಿಯು ತುಂಬಾ ಡಾಮಿನೇಟಿಂಗ್ ಆಗಿದ್ದರೆ, ಈ ರೀತಿ ಅವರನ್ನು ನಿಯಂತ್ರಿಸಿ.
ಗೌರವ (Respect) ಮುಖ್ಯ:
ಪ್ರೀತಿ ಅಥವಾ ಮದುವೆಯ ಸಂಬಂಧದಲ್ಲಿ ಗೌರವ ತುಂಬಾನೆ ಮುಖ್ಯ ಎಂದು ನೀವು ನಿಮ್ಮ ಸಂಗಾತಿಗೆ ವಿವರಿಸಬೇಕು. ಒಬ್ಬರನ್ನೊಬ್ಬರು ಕೀಳಾಗಿ ಕಾಣುವುದು ರಿಲೇಷನ್ಶಿಪ್ ಅನ್ನು ಹಾಳುಮಾಡುತ್ತೆ. ಯಾವಾಗಲೂ ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಿ. ನಿಮ್ಮ ಸಂಗಾತಿ ಅದನ್ನು ಮಾಡದಿದ್ರೆ, ಅವರ ಅಭ್ಯಾಸ ಬದಲಿಸಲು ಟ್ರೈ ಮಾಡಿ.
ಭಾವನೆಗಳನ್ನು(Feelings) ಹಂಚಿಕೊಳ್ಳಿ:
ಸಂಬಂಧ ಮತ್ತಷ್ಟು ಸ್ಟ್ರಾಂಗ್ ಆಗಲು ಬಯಸಿದರೆ ಶೇರಿಂಗ್ ತುಂಬಾನೆ ಮುಖ್ಯ.. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರೆ, ಅವರ ಆಲೋಚನೆಗಳನ್ನು, ಇತರ ಎಲ್ಲಾ ವಿಷ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೆ, ಅದು ಉತ್ತಮ ಸಂಬಂಧದ ಸಂಕೇತವಾಗಿದೆ. ಆದರೆ ನಿಮ್ಮ ಪಾರ್ಟ್ನರ್ ನಿಮಗೆ ಸಮಯ ಕೊಡದೇ ಇಗ್ನೋರ್ ಮಾಡ್ತಿದ್ರೆ ಅದು ಸರಿಯಲ್ಲ. ಈ ಸಮಯದಲ್ಲಿ ನೀವು ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವಂತೆ ಸಮಯ ಹೊಂದಿಸಿ.
ಜೊತೆಯಾಗಿ ನಿರ್ಧಾರ (Decision)ತೆಗೆದುಕೊಳ್ಳಿ:
ಅನೇಕ ಬಾರಿ ಡಾಮಿನೇಟಿಂಗ್ ಪಾರ್ಟ್ನರ್ ಎಲ್ಲಾ ನಿರ್ಧಾರ ತಾವೇ ತೆಗೆದುಕೊಳ್ಳುತ್ತಾರೆ. ಎಲ್ಲಿಗೆ ಹೋಗಬೇಕು, ಏನು ಧರಿಸಬೇಕು, ಯಾರೊಂದಿಗೆ ಮಾತನಾಡಬೇಕು, ಯಾರೊಂದಿಗೆ ಮಾತನಾಡಬಾರದು, ಜೀವನ ಹೇಗೆ ನಡೆಸುವುದು ಹೀಗೆ ಎಲ್ಲದರಲ್ಲೂ ತಮ್ಮದೇ ಆದ ರೀತಿಯಲ್ಲಿ ಯೋಚಿಸುತ್ತಿದ್ದರೆ, ನೀವು ಅದರ ಬಗ್ಗೆ ಅಸಮಾಧಾನಗೊಂಡಿದ್ದರೆ, ಮನಸ್ಸು ಬಿಚ್ಚಿ ಮಾತನಾಡಿ. ಒಬ್ಬರ ಪ್ರಕಾರ ಜೀವನ ನಡೆಸುವುದು ಯಾವಾಗಲೂ ಸರಿಯಲ್ಲ. ಪರಸ್ಪರ ಒಪ್ಪಿಗೆಯ ಮೂಲಕ ಇಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಿ.
ಅಟೆನ್ಸನ್ ಸೀಕರ್ (Attention seeker):
ಡಾಮಿನೇಟಿಂಗ್ ಪಾರ್ಟ್ನರ್ ನ ಬಗ್ಗೆ ಮತ್ತೊಂದು ವಿಷಯವೆಂದರೆ ಅಂತಹ ಜನರು ಯಾವಾಗಲೂ ತಮ್ಮ ಸಂಗಾತಿಯ ಬಗ್ಗೆ ತುಂಬಾ ಕಾಂಷಿಯೂಸ್ ಆಗಿರುತ್ತಾರೆ. ಅಂತಹ ಜನರಿಗೆ ಯಾವಾಗಲೂ ಆಟೆಂಷನ್ ಬೇಕಾಗಿರುತ್ತೆ. ಅಂತಹ ಜನರು ತಮ್ಮ ಸಂಗಾತಿಯ ಅಗತ್ಯಗಳ ಬಗ್ಗೆ ಗಮನ ಹರಿಸೋದಿಲ್ಲ ಆದರೆ ತಮ್ಮ ಅಗತ್ಯಗಳನ್ನು ಪೂರೈಸಲು ಅವರನ್ನು ಒತ್ತಾಯಿಸುತ್ತಲೇ ಇರುತ್ತಾರೆ.
ಪರ್ಸನಲ್ ಸ್ಪೇಸ್ -(Personal space):
ಸಂಗಾತಿಯು ನಿಮ್ಮ ಪ್ರೈವಸಿಯನ್ನು ಗೌರವಿಸದಿದ್ದರೆ, ಅದು ತಪ್ಪು. ಪ್ರತಿಯೊಬ್ಬರ ಜೀವನದಲ್ಲಿ ಕೆಲವು ಪರ್ಸನಲ್ ವಿಷಯಗಳಿರುತ್ತವೆ. ಇಂದಿನ ಕಾಲದಲ್ಲಿ, ಪ್ರತಿಯೊಬ್ಬರೂ ಎಲ್ಲದರಲ್ಲೂ ಹಸ್ತಕ್ಷೇಪ ಮಾಡಲು ಇಷ್ಟಪಡೋದಿಲ್ಲ. ನಿಮ್ಮ ಸಂಗಾತಿ ಇದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮನ್ನು ಕೇಳದೆ ನಿಮ್ಮ ಫೋನ್ ಚೆಕ್ ಮಾಡಿದ್ರೆ ಅಥವಾ ಪರ್ಸನಲ್ ಥಿಂಗ್ಸ್ ಏನನ್ನಾದರೂ ನೋಡುವುದು ಸರಿಯಲ್ಲವೆಂದು ಅವರಿಗೆ ಮನವರಿಕೆ ಮಾಡಿಸಿ.