Relationship Tips: ಸಂಗಾತಿಗೆ ನೀವು ಮುಖ್ಯವಾ ಅಲ್ಲವಾ ಅಂತ ತಿಳಿಯೋದ್ ಹೇಗೆ?
ಸಂಗಾತಿಗಾಗಿ ನೀವು ಎಷ್ಟೆಲ್ಲ ಮಾಡುತ್ತಿದ್ದರೂ, ಶ್ರಮಿಸುತ್ತಿದ್ದರೂ ಅವರು ನಿಮಗೆ ಏನೊಂದೂ ಆದ್ಯತೆಯನ್ನೇ ನೀಡದೆ, ನಿಮ್ಮ ಬಗ್ಗೆ ಗೌರವ-ಕಾಳಜಿ ತೋರದೆ ತಮ್ಮ ಪಾಡಿಗೆ ತಾವಿದ್ದರೆ ಅವರಿಗೆ ನೀವು ಮುಖ್ಯವಾದ ವ್ಯಕ್ತಿಯಲ್ಲ ಎಂದು ಅರ್ಥೈಸಿಕೊಳ್ಳಬಹುದು.
ಕೆಲವು ಸಂದರ್ಭಗಳಲ್ಲಿ ನೀವು ಸಂಗಾತಿ(Partner)ಯಿಂದ ಹೆಚ್ಚಿನ ಗಮನವನ್ನು (Attention) ಬಯಸಿರುತ್ತೀರಿ. ಆದರೆ, ಅದು ಸಿಗದಿದ್ದಾಗ ಒಳಗೊಳಗೇ ಅಸಮಾಧಾನ ಹೊಗೆಯಾಡುತ್ತದೆ. ಅದನ್ನು ಬಹಿರಂಗವಾಗಿ ಅವರ ಬಳಿ ಹೇಳಿಕೊಂಡಿರಲೂಬಹುದು. ಆದರೂ ಅವರಿಂದ ಯಾವುದೇ ಹೆಚ್ಚಿನ ರಿಯಾಕ್ಷನ್ ಬಾರದಿದ್ದರೆ ಆಗ ನಿಮಗೇನು ಅನಿಸುತ್ತದೆ? ಬೇಸರವಾಗುವುದು ಸಹಜ. ಆದರೆ, ಸಂಗಾತಿಯ ಈ ಧೋರಣೆಯನ್ನು ಮತ್ತೊಂದು ಬಗೆಯಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಏಕೆಂದರೆ, ಆತ ಅಥವಾ ಆಕೆ ನಿಮ್ಮನ್ನು ದೂರವಿಡಲು ಯತ್ನಿಸುತ್ತಿರಬಹುದು. ಮತ್ತು ನೀವು ಅವರ ಆದ್ಯತೆ(Priority)ಯಾಗಿರದೆ ಇರಬಹುದು.
ಸಂಗಾತಿಗೆ ನೀವು ಕೇವಲ ಒನ್ ಆಫ್ ದಿ ಆಪ್ಷನ್ (One of the Option) ಆಗಿರಬಹುದು. ನೀವು ಬೇಕೇ ಬೇಕು ಎನ್ನುವ ಮನಸ್ಥಿತಿಯಾಗಲೀ, ನಿಮ್ಮ ಪ್ರೀತಿ(Love)ಯನ್ನು ಕಳೆದುಕೊಳ್ಳುವ ಭಯವಾಗಲೀ ಅವರಿಗೆ ಇದ್ದಿರಲಿಕ್ಕಿಲ್ಲ. ಅದನ್ನು ಅವರು ತಮ್ಮ ಕೆಲವು ವರ್ತನೆಗಳಲ್ಲಿ ತೋರಿಸಿಕೊಳ್ಳುತ್ತಲೇ ಇರುತ್ತಾರೆ. ಅದನ್ನು ಗಮನಿಸಿ ವಾಸ್ತವದ ನೆಲೆಗಟ್ಟಿನಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅಂತಹ ಕೆಲವು ವರ್ತನೆಗಳು ಹೇಗಿರಬಹುದು ಎಂದು ನೋಡಿಕೊಳ್ಳಿ.
• ಪ್ರತಿ ಬಾರಿಯೂ ನೀವೇ ಸಂಪರ್ಕಿಸುವುದು (Contact)
ನೀವೇ ಸತತವಾಗಿ ಫೋನ್ ಕರೆ ಮಾಡುವುದು, ಮೆಸೇಜ್ ಮಾಡುವುದು ಅಥವಾ ಎಲ್ಲಾದರೂ ಹೋಗುವುದಿದ್ದರೆ ದಿನಾಂಕ ನಿಗದಿಪಡಿಸುವುದು, ಹೊರಗಿನ ಸುತ್ತಾಟಕ್ಕೆ ಮುಂದಾಗುವುದು ಎಲ್ಲವನ್ನೂ ನೀವೊಬ್ಬರೇ ನಿರಂತರವಾಗಿ ಮಾಡುತ್ತಿದ್ದೀರಾ ನೋಡಿಕೊಳ್ಳಿ. ನೀವಾಗಿಯೇ ಮಾತನಾಡದ ಹೊರತು, ಸಂಪರ್ಕಿಸದ ಹೊರತು ಅವರಾಗಿ ಎಂದಾದರೂ ನಿಮ್ಮನ್ನು ಸಂಪರ್ಕಿಸಿದ್ದಾರಾ ಎಂದು ನೆನಪಿಸಿಕೊಳ್ಳಿ. ಈ ನಡತೆ ಇದೆಯಲ್ಲ, ಇದು ಅವರಿಗೆ ನೀವು ಅನಿವಾರ್ಯವಲ್ಲ ಎನ್ನುವುದರ ಪಕ್ಕಾ ಸಂಕೇತ. ಅವರಿಂದ ಏನನ್ನೂ ಬಯಸದೆ ಅವರಿಗಾಗಿ ನಾನು ಏನೆಲ್ಲ ಮಾಡಿದ್ದೇನೆ ಎನ್ನುವ ಭಾವನೆ ನಿಮಗಿದ್ದರೆ ಈಗಲೇ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ಅವಲೋಕಿಸಿ.
Parenting Tips : ಮಕ್ಕಳ ಮುಂದೆ ಪದೇ ಪದೇ ಈ ಡೈಲಾಗ್ ಹೇಳಿ ಅವರ ಭವಿಷ್ಯ ಹಾಳ್ಮಾಡ್ಬೇಡಿ
• ನಿಮ್ಮ ಪ್ರಯತ್ನಕ್ಕೆ ಬೆಲೆಯೇ ಇಲ್ಲದಿರುವುದು
ನೀವು ಸಾಕಷ್ಟು ಕಾಳಜಿ ವಹಿಸುತ್ತಿದ್ದರೂ, ಪ್ರಯತ್ನಿಸುತ್ತಿದ್ದರೂ, ತ್ಯಾಗ-ಹೊಂದಾಣಿಕೆ (Adjustment) ಮಾಡಿಕೊಳ್ಳುತ್ತಿದ್ದರೂ ಅವರು ಗುರುತಿಸದೆ ಇರಬಹುದು. ಸಂಬಂಧ(Relationship)ವನ್ನು ಪೋಷಿಸಲು ನೀವೇನು ಮಾಡುತ್ತಿರುವಿರಿ, ಯಾವ ರೀತಿ ಪ್ರಯತ್ನಿಸುತ್ತಿರುವಿರಿ ಎನ್ನುವ ಕಲ್ಪನೆಯೇ ಅವರಿಗಿಲ್ಲವಾದರೆ ಈ ಸಂಬಂಧಕ್ಕೆ ಖಂಡಿತವಾಗಿ ಅವರಲ್ಲಿ ಆದ್ಯತೆಯಿಲ್ಲ. ನಿಮಗೆ ಪ್ರಯತ್ನಕ್ಕೆ ಬೆಲೆ ನೀಡದೆ ಇದ್ದರೆ ಮತ್ತು ನಿಮಗೆ ಗೌರವ ನೀಡದೆ ನಿರ್ಲಿಪ್ತವಾಗಿದ್ದರೆ ಎಚ್ಚೆತ್ತುಕೊಳ್ಳಿ.
• ಸಂಬಂಧ ಕೇವಲ ದೈಹಿಕ (Physical) ಮಟ್ಟದಲ್ಲಿದೆ ಎನಿಸುತ್ತಿದೆಯೇ?
ನಿಮ್ಮ ಸಂಬಂಧ ಕೇವಲ ದೈಹಿಕ ಮಟ್ಟದಲ್ಲಿದೆ ಎನ್ನುವ ಭಾವನೆ ನಿಮಗೆ ಮೂಡುತ್ತಿದೆಯೇ? ನಿಮ್ಮ ಸಂಗಾತಿ ಕೇವಲ ದೈಹಿಕ ಸಂಬಂಧದ ಬಗ್ಗೆ ಮಾತ್ರ ಆಸಕ್ತಿ ತೋರುತ್ತಿದ್ದಾರೆಯೇ? ಹಾಗಿದ್ದರೆ ನೀವು ನಿಜವಾಗಿ ಬಯಸುತ್ತಿರುವ ಸಂಬಂಧ ಇದಲ್ಲ. ಹಾಗಿರುವುದು ಅವರಿಗೆ ಸಹಜವಾಗಿರಬಹುದು. ಆದರೆ, ನಿಮಗೆ ಹಾಗಾಗುವುದಿಲ್ಲ. ಅವರಿಂದ ಇನ್ನೇನೋ ನಿರೀಕ್ಷೆ ಮಾಡುತ್ತೀರಿ.
Diabetes and Turmeric: ಪ್ರತಿ ದಿನ ಈ ರೀತಿ ಅರಿಶಿನ ಸೇವನೆ ಮಾಡಿ ಮಧುಮೇಹ ನಿಯಂತ್ರಿಸಿ
• ಅಸಂತೋಷ (Unhappiness) ಮತ್ತು ಮಿಸ್ ಯೂಸ್ (Misuse) ಆದ ಭಾವನೆ
ನಿಮ್ಮ ಸಂಗಾತಿ ಪ್ರತಿಬಾರಿಯೂ ನಿಮಗೆ ಅತೃಪ್ತಿಯನ್ನೇ ತಂದರೆ, ಸತತವಾಗಿ ಅಭದ್ರತೆ (Insecurity) ಮೂಡಿಸಿದರೆ ಅಥವಾ ಸರಿಯಾಗಿ ಗಮನವನ್ನೇ ನೀಡದಿದ್ದರೆ ನೀವೂ ನಿರ್ಲಕ್ಷಿಸಬೇಡಿ. ನಿಮಗೆ ಯಾವಾಗಲೂ ಮಿಸ್ ಯೂಸ್ ಆದ ಭಾವನೆ ಬರುತ್ತಿದ್ದರೆ ಅದನ್ನೂ ನಿರ್ಲಕ್ಷಿಸಬೇಡಿ. ಸಂಗಾತಿಗಾಗಿ ಕನಸುಗಳು (Dream) ಮತ್ತು ಬದುಕನ್ನು ತ್ಯಾಗ (Sacrifice) ಮಾಡುತ್ತಿದ್ದೇನೆ ಎನ್ನುವ ಭಾವನೆ ಬಲವಾಗುತ್ತಿದ್ದರೆ ಖಂಡಿತವಾಗಿ ಸಂಬಂಧಕ್ಕೆ ವಿದಾಯ ಹೇಳುವ ಸಮಯ ಬಂದಿರಬಹುದು. ಏಕೆಂದರೆ, ಇಂತಹ ಸಂಬಂಧದಲ್ಲಿ ಸಂತೋಷ ಇರುವುದಿಲ್ಲ. ನಿಮ್ಮ ಸಂಗಾತಿ ನಿಮ್ಮ ಸಂಬಂಧದ ಬಗ್ಗೆ ನಿಮ್ಮಷ್ಟೇ ಆದ್ಯತೆ, ಪ್ರೀತಿ, ಕಾಳಜಿ, ಗೌರವ ಹೊಂದಿರುವವರಾಗಿದ್ದರೆ ಮಾತ್ರ ನೆಮ್ಮದಿ. ಇಲ್ಲವಾದರೆ, ಸಂಬಂಧಕ್ಕೆ ವಿದಾಯ (Goodbye) ಹೇಳುವ ಕುರಿತು ಗಂಭೀರವಾಗಿ ಯೋಚಿಸಬಹುದು.